ಭರತ್ಪುರ್(ರಾಜಸ್ಥಾನ): ನಕಲಿ ಆನ್ಲೈನ್ ಅಕೌಂಟ್ಗಳ ಮೂಲಕ ವಂಚನೆಗೊಳ್ಳಗಾಗಿರುವ ಅನೇಕ ಪ್ರಕರಣಗಳು ಈಗಾಗಲೇ ವರದಿಯಾಗಿದ್ದು, ಇದರ ಮಧ್ಯೆ ಮಧ್ಯಪ್ರದೇಶದಲ್ಲಿ ಮತ್ತೊಂದು ಘಟನೆ ನಡೆದಿದೆ. ಇದಕ್ಕೆ ಬೆಂಗಳೂರು ಮೂಲದ ಯುಪಿಎಸ್ಸಿ ಆಕಾಂಕ್ಷಿ ಬಲಿಯಾಗಿ, ಪ್ರಾಣ ಕಳೆದುಕೊಂಡಿದ್ದಾನೆ.
ಮಹಿಳೆ ಹೆಸರಿನಲ್ಲಿ ನಕಲಿ ಅಕೌಂಟ್ ಕ್ರಿಯೆಟ್ ಮಾಡಿ ಚಾಟ್ ಮಾಡಿರುವ ಗ್ರೂಪ್ವೊಂದು, ತದನಂತರ ಯುವಕನಿಗೆ ಕಿರುಕುಳ ನೀಡಿದ್ದಾರೆ. ಇದರಿಂದ ಮನನೊಂದು ಆತ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ರಾಜಸ್ಥಾನದ ಮೇವಾತ್ನಲ್ಲಿ ಈ ಘಟನೆ ನಡೆದಿದ್ದು, ಯುವಕ ಮೂಲತಃ ಬೆಂಗಳೂರಿನವರು ಎಂದು ತಿಳಿದು ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರ ಆರೋಪಿಗಳ ಬಂಧನ ಮಾಡಲಾಗಿದೆ.
ಇದನ್ನೂ ಓದಿ: ಕೋವಿಡ್ ಹೆಚ್ಚಳ ಆತಂಕ ತಂದಿದೆ: ದೇಶದಲ್ಲಿ ವ್ಯಾಕ್ಸಿನ್ ಕೊರತೆ ಇಲ್ಲ ಎಂದ ಕೇಂದ್ರ ಆರೋಗ್ಯ ಇಲಾಖೆ!
ಮಹಿಳೆಯ ಹೆಸರಿನಲ್ಲಿ ಸೋಷಿಯಲ್ ಮೀಡಿಯಾದಲ್ಲಿ ನಕಲಿ ಪ್ರೊಫೈಲ್ ರಚನೆ ಮಾಡಿ, ಈ ಮೂಲಕ ವ್ಯಕ್ತಿ ಜತೆ ಲೈಂಗಿಕ ವಿಷಯಗಳ ಬಗ್ಗೆ ಚಾಟ್ ಮಾಡಲಾಗಿದೆ. ಇದಾದ ಬಳಿಕ ಇದನ್ನ ಸಾರ್ವಜನಿಕವಾಗಿ ಬಹಿರಂಗಗೊಳಿಸಲಾಗುವುದು ಎಂದು ಬ್ಲ್ಯಾಕ್ ಮೇಲ್ ಮಾಡಿದ್ದು, ಲಕ್ಷಾಂತರ ರೂ. ಸುಲಿಗೆ ಮಾಡಿದ್ದಾರೆ. ನಿರಂತರವಾಗಿ ಬ್ಲ್ಯಾಕ್ ಮೇಲ್ ಮಾಡುವುದು ಮುಂದುವರಿದ ಕಾರಣ ನಿರಾಸೆಗೊಂಡ ಯುಪಿಎಸ್ಸಿ ಆಕಾಂಕ್ಷಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಗ್ಯಾಂಗ್ನ ಕಿರುಕುಳದ ಬಗ್ಗೆ ಯುವಕನ ಮೊಬೈಲ್ನಲ್ಲಿ ಆತ್ಮಹತ್ಯೆ ನೋಟ್ ಲಭ್ಯವಾಗಿದ್ದು, ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.