ETV Bharat / bharat

ಮಗಳ ಹುಟ್ಟುಹಬ್ಬಕ್ಕೆ 'ಚಂದಮಾಮ' ಉಡುಗೊರೆ ನೀಡಿ 'ಅಭಯ' ಕೊಟ್ಟ ಡ್ಯಾಡಿ

ಮಗಳ ಹುಟ್ಟುಹಬ್ಬಕ್ಕೆ ತಂದೆ ಚಂದ್ರನಲ್ಲಿ ಜಾಗ ಖರೀದಿಸಿ ಉಡುಗೊರೆಯಾಗಿ ನೀಡಿದ್ದಾರೆ. ಈ ಸುದ್ದಿ ಒಡಿಶಾದ ಕೇಂದ್ರಪಾರಾ ಜಿಲ್ಲೆಯ ಪಟ್ಟಮುಂಡೈ ಬ್ಲಾಕ್‌ನ ಕುಪುನಿ ಗ್ರಾಮದಿಂದ ವರದಿಯಾಗಿದೆ.

Odisha
ಚಂದ್ರನಲ್ಲಿ ಜಾಗ ಖರೀದಿಸಿದ ತಂದೆ
author img

By

Published : Mar 22, 2021, 8:51 AM IST

ಕೇಂದ್ರಪಾರಾ (ಒಡಿಶಾ): ಹೆತ್ತವರು ತಮ್ಮ ಮಕ್ಕಳಿಗೆ ಊಟ ಮಾಡಿಸುವಾಗ ಚಂದ್ರನನ್ನು ತೋರಿಸುತ್ತಾರೆ. ಇನ್ನು ಹುಟ್ಟುಹಬ್ಬ ಅಂದ್ರೆ ಸಾಕು ಅದೆಷ್ಟೋ ಬಗೆ ಬಗೆಯ ಉಡುಗೊರೆಗಳನ್ನು ನೀಡುತ್ತಾರೆ. ಆದರೆ ಇಲ್ಲೊಬ್ಬರು ತಮ್ಮ ಮಗಳ ಹುಟ್ಟುಹಬ್ಬಕ್ಕೆ ಚಂದ್ರನಲ್ಲಿ ಜಾಗ ಖರೀದಿಸಿ ಉಡುಗೊರೆಯಾಗಿ ನೀಡಿದ್ದಾರೆ.

ಕೇಂದ್ರಪಾರಾ ಜಿಲ್ಲೆಯ ಪಟ್ಟಮುಂಡೈ ಬ್ಲಾಕ್‌ನ ಕುಪುನಿ ಗ್ರಾಮದ ಅಭಯ್ ಸೇನಾಪತಿ ಎಂಬವರು ಚಂದ್ರನಲ್ಲಿ ಒಂದು ಎಕರೆ ಭೂಮಿಯನ್ನು 10 ಸಾವಿರ ರೂಪಾಯಿಗಳಿಗೆ ಖರೀದಿಸಿದ್ದಾರೆ. ಜನವರಿ 15 ರಂದು ಅವರ ಮಗಳ ಜನ್ಮದಿನ ನಡೆದಿತ್ತು. ಈ ವೇಳೆ ಅಭಯ್ ತನ್ನ ಮುದ್ದು ಕಂದಮ್ಮಗೆ ಉಡುಗೊರೆಯಾಗಿ ನೀಡಲು ಚಂದ್ರನ ಮೇಲೆ ಒಂದು ಸ್ಥಳವನ್ನು ಖರೀದಿಸಿದ್ದಾರೆ.

Odisha
ಚಂದ್ರನಲ್ಲಿ ಜಾಗ ಖರೀದಿಸಿದ ತಂದೆ

ಇದನ್ನು ಓದಿ: ಶೋಪಿಯಾನ್ ಎನ್‌ಕೌಂಟರ್: ಮತ್ತೊಬ್ಬ ಸೇರಿ 3 ಉಗ್ರರು ಹತ, ಇಂಟರ್​ನೆಟ್​ ಸ್ಥಗಿತ

ಅಭಯ್ ಅಮೆರಿಕದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಇದೀಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅಮೆರಿಕದ ಸಂಬಂಧಿಯೊಬ್ಬರ ಸಹಾಯದಿಂದ ಅವರು ಜನವರಿಯಲ್ಲಿ ಚಂದ್ರನ ಮೇಲೆ ಭೂಮಿಯನ್ನು ಖರೀದಿಸಲು ಸ್ಥಳವನ್ನು ಕಾಯ್ದಿರಿಸಿದರು. ಫೆಬ್ರವರಿಯಲ್ಲಿ ಈ ಸ್ಥಳವನ್ನು ಖರೀದಿಸಲಾಗಿದೆ ಎಂದು ಅಭಯ್ ಮಾಹಿತಿ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.