ಆಗ್ರಾ: ಕೇಂದ್ರ ಸಚಿವ ಅಮಿತ್ ಶಾ ಅವರ ಸೋದರಳಿಯ ಎಂದು ಬಿಂಬಿಸಿ ಬಿಜೆಪಿ ಶಾಸಕ ಯೋಗೇಂದ್ರ ಉಪಾಧ್ಯಾಯ ಅವರನ್ನು ವಂಚಿಸಲು ಯತ್ನಿಸಿದ್ದ ವ್ಯಕ್ತಿವೋರ್ವನನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನ ನಟವರ್ ಲಾಲ್ ಎಂದು ಗುರುತಿಸಲಾಗಿದೆ. ತಾನು ಶಾ ಅವರ ಸೋದರಳಿಯ ವಿರಾಜ್ ಸಹಾ ಎಂದು ಪರಿಚಯಿಸಿಕೊಂಡು, ಹಲವಾರು ಬಿಜೆಪಿ ನಾಯಕರನ್ನು ಮೋಸಗೊಳಿಸಲು ಪ್ಲಾನ್ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಬಿಜೆಪಿ ಶಾಸಕ ಡಾ.ಮೋಹನ್ ಯಾದವ್ ಅವರ ಆಪ್ತ ಸಹಾಯಕ ನರೇಶ್ ಶರ್ಮಾ ಅವರನ್ನು ಈ ಹಿಂದೆ ಆರೋಪಿ ವಂಚಿಸಿದ್ದಾನೆ ಎಂದು ಹೇಳಲಾಗುತ್ತಿದೆ.
ಓದಿ:ಮನೆಗೆ ನುಗ್ಗಿ ಗುಂಡು ಹಾರಿಸಿದ ದುಷ್ಕರ್ಮಿಗಳು: ತಾಯಿ ಸಾವು, ಮಗಳ ಸ್ಥಿತಿ ಗಂಭೀರ
ಪೊಲೀಸರ ಮಾಹಿತಿ ಪ್ರಕಾರ ಆರೋಪಿ, ಮೇಯರ್ ನವೀನ್ ಜೈನ್ ಮತ್ತು ಪಕ್ಷದ ಇತರ ಮುಖಂಡರಿಗೆ ಸಭೆ ನಡೆಸಲು ಆರೋಪಿ ಕಾಲ್ ಮಾಡಿ ನಂತರ ಮೋಸ ಮಾಡಿದ್ದಾನೆ ಎಂದು ಹೇಳಿದ್ದಾರೆ.
ಕಳೆದ ಹಲವು ದಿನಗಳಿಂದ ಆರೋಪಿ, 'ನಾನು ವಿರಾಜ್ ಸಹಾ' ಎಂದು ಕರೆ ಮಾಡುತ್ತಿದ್ದ ಎಂದು ಯೋಗೇಂದ್ರ ಉಪಾಧ್ಯಾಯ ಹೇಳಿದ್ದು, ಆಗ್ರಾದ ಹೋಟೆಲ್‌ನಲ್ಲಿ ತಾನು ಇರೋದಾಗಿ ತಿಳಿಸಿದ್ದ.
"ಆರೋಪಿಗಳು ಸುತ್ತಾಡಲು ಸಹಾಯವನ್ನು ಹುಡುಕುತ್ತಿದ್ದರಿಂದ ನಾನು ಅವರಿಗೆ ಸಹಾಯ ಮಾಡಲು ನನ್ನ ಮಗ ವತ್ಸಲ್ಯನನ್ನು ಕಳಿಸಿದ್ದೆ. ಅವರು ಅಂಗಡಿಗೆ ಹೋಗಿ ಸುಮಾರು 40,000 ರೂ. ಸಾಮಗ್ರಿ ಖರೀದಿಸಿ ನಂತರ ನನ್ನ ಮಗನಿಗೆ ಪಾವತಿ ಮಾಡಲು ಹೇಳಿದ್ದರಂತೆ. ಈ ವಿಚಿತ್ರ ಘಟನೆಯ ಬಗ್ಗೆ ನನ್ನ ಮಗ ನನಗೆ ಮಾಹಿತಿ ನೀಡಿದಾಗ, ನನಗೆ ಅನುಮಾನ ಬಂದು ಪೊಲೀಸರಿಗೆ ಮಾಹಿತಿ ನೀಡಿದೆ ಎಂದು ಬಿಜೆಪಿ ಶಾಸಕ ಯೋಗೇಂದ್ರ ಉಪಾಧ್ಯಾಯ ಹೇಳಿದ್ದಾರೆ.
ಬಿಜೆಪಿ ಶಾಸಕ ಯೋಗೇಂದ್ರ ಉಪಾಧ್ಯಾಯ ಅವರು ಆರೋಪಿ ವಿರುದ್ಧ ದೂರು ದಾಖಲಿಸಿದ್ದು, ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ರೋಹನ್ ಪ್ರಮೋದ್ ತಿಳಿಸಿದ್ದಾರೆ. ಈ ಹಿಂದೆ ವಂಚನೆ ಪ್ರಕರಣಗಳಲ್ಲೂ ಆರೋಪಿ ಭಾಗಿಯಾಗಿದ್ದು, ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.