ಪಾಲಮೇಡು(ತಮಿಳುನಾಡು): ಜಲ್ಲಿಕಟ್ಟು ಆಚರಣೆ ವೇಳೆ ಗೂಳಿಗಳಿಗೆ ದೊಣ್ಣೆಯಿಂದ ಹೊಡೆದ ಆರೋಪದಲ್ಲಿ ವ್ಯಕ್ತಿಯೊಬ್ಬರ ವಿರುದ್ಧ ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಅಡಿ ದೂರು ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮಧುರೈ ಜಿಲ್ಲೆಯ ಪಾಲಮೇಡು ಎಂಬಲ್ಲಿ ಜನವರಿ 15ರಂದು ಪೊಂಗಲ್ ಹಬ್ಬದ ಪ್ರಯುಕ್ತ ಜಲ್ಲಿಕಟ್ಟು ಸ್ಪರ್ಧೆ ನಡೆಸಲಾಗಿತ್ತು. ವೇಳೆ ವ್ಯಕ್ತಿಯೊಬ್ಬ ದೊಣ್ಣೆಯಿಂದ ಅಲ್ಲಿದ್ದ ವ್ಯಕ್ತಿಗಳು ಮತ್ತು ಗೂಳಿಗಳ ಮೇಲೆ ಹಲ್ಲೆ ಮಾಡಿದ್ದನು. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ವ್ಯಕ್ತಿಯನ್ನು ಬಂಧಿಸಿದ್ದಾರೆ ಎಂದು ಮಧುರೈ ಎಸ್ಪಿ ವಿ.ಭಾಸ್ಕರನ್ ತಿಳಿಸಿದ್ದಾರೆ.
ಜಲ್ಲಿಕಟ್ಟು ತಮಿಳುನಾಡಿನ ಸಾಂಪ್ರದಾಯಿಕ ಸ್ಪರ್ಧೆಯಾಗಿದ್ದು, ರಾಜ್ಯದ ಹಲವಾರು ಭಾಗಗಳಲ್ಲಿ ಸುಗ್ಗಿಯ ಹಬ್ಬವಾದ ಪೊಂಗಲ್‌ನಂದು ಆಡಲಾಗುತ್ತದೆ.
ಇದನ್ನೂ ಓದಿ: ಮಹಿಳೆ ಕೊಲೆ ಪ್ರಕರಣ: ಏಳು ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿದ ತ್ರಿಪುರಾ ಕೋರ್ಟ್