ಕೋಲ್ಕತಾ : ಪಶ್ಚಿಮ ಬಂಗಾಳದಲ್ಲಿ ಗಳಿಸಿದ ಸತತ ಮೂರನೇ ವಿಜಯವು ರಾಜ್ಯದಲ್ಲಿ ಮಮತಾ ಬ್ಯಾನರ್ಜಿ ಸ್ಥಾನವನ್ನು ಬಲಪಡಿಸುವುದಲ್ಲದೇ, ರಾಷ್ಟ್ರಮಟ್ಟದಲ್ಲಿ ಬಿಜೆಪಿ ವಿರೋಧಿಗಳನ್ನೆಲ್ಲಾ ಒಂದುಗೂಡಿಸಲು ಸಹಕಾರಿಯಾಗುತ್ತದೆ.
ಎಂಟು ವರ್ಷಗಳ ಕಾಲ ಸಿಂಗೂರ್ ಮತ್ತು ನಂದಿಗ್ರಾಮ್ ರಸ್ತೆಗಳಲ್ಲಿ ಸಾವಿರಾರು ರೈತರನ್ನು ಮುನ್ನಡೆಸುವ ಮೊದಲು, ಮಮತಾ ಬ್ಯಾನರ್ಜಿ ಒಂದು ದಶಕಕ್ಕೂ ಹೆಚ್ಚು ಕಾಲ ಯಾವುದೇ ಸವಾಲುಗಳಿಲ್ಲದೇ ರಾಜ್ಯವನ್ನು ಆಳಿದರು.
ಆದರೆ, ಎಂಟು ವರ್ಷಗಳ ನಂತರ 2019ರಲ್ಲಿ ಪಶ್ಚಿಮ ಬಂಗಾಳದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 18 ಸ್ಥಾನಗಳನ್ನು ಪಡೆದಾಗ ಅವರ ಆಡಳಿತ ಪ್ರಶ್ನಿಸಲಾಯಿತು.
ತೃಣಮೂಲ ಕಾಂಗ್ರೆಸ್ ಆಂದೋಲನದಿಂದ ಬಲ : ಚಳವಳಿಯಿಂದ ಬಲಗೊಂಡ ತೃಣಮೂಲ ಕಾಂಗ್ರೆಸ್ ಅಧ್ಯಯನದ ದಿನಗಳಲ್ಲಿ, ಮಮತಾ ಬ್ಯಾನರ್ಜಿ ತನ್ನ ಶಾಲಾ ದಿನಗಳಲ್ಲಿ ಕಾಂಗ್ರೆಸ್ ಸ್ವಯಂಸೇವಕರಾಗಿ ರಾಜಕೀಯ ಜೀವನವನ್ನು ಪ್ರಾರಂಭಿಸಿದರು.
ಯುಪಿಎ ಮತ್ತು ಎನ್‌ಡಿಎ ಸರ್ಕಾರಗಳಲ್ಲಿ ಅವರು ಮಂತ್ರಿಯಾದರು ಎಂಬುದು ಅವರ ವರ್ಚಸ್ಸಿನ ಪವಾಡ. ರಾಜ್ಯದಲ್ಲಿ ಕೈಗಾರಿಕೀಕರಣಕ್ಕಾಗಿ ರೈತರಿಂದ ಬಲವಂತವಾಗಿ ಭೂಸ್ವಾಧಿನ ಮಾಡುವ ವಿಷಯದಲ್ಲಿ, ಅವರು ನಂದಿಗ್ರಾಮ್ ಮತ್ತು ಸಿಂಗೂರ್ನಲ್ಲಿನ ಕಮ್ಯುನಿಸ್ಟ್ ಸರ್ಕಾರದ ವಿರುದ್ಧ ಗೋಡೆಯಾಗಿ ನಿಂತು ಚಳವಳಿಯನ್ನು ಮುನ್ನಡೆಸಿದರು.
ಚಳವಳಿಗಳು ತಮ್ಮ ಭವಿಷ್ಯವನ್ನು ಬದಲಿಸಿದವು ಮತ್ತು ತೃಣಮೂಲ ಕಾಂಗ್ರೆಸ್ ಬಲವಾದ ರಾಜಕೀಯ ಪಕ್ಷವಾಗಿ ಹೊರಹೊಮ್ಮಿತು. ಮಮತಾ ಕಾಂಗ್ರೆಸ್‌ನಿಂದ ಬೇರ್ಪಟ್ಟ ನಂತರ ಜನವರಿ 1998ರಲ್ಲಿ ತೃಣಮೂಲ ಕಾಂಗ್ರೆಸ್ ಸ್ಥಾಪಿಸಿದರು.
2016ರಲ್ಲಿಯೂ ಅದ್ಭುತ ಗೆಲುವು ಸಾಧಿಸಿದ ಪಕ್ಷ : ಪಕ್ಷ ರಚನೆಯಾದ ನಂತರ 2001ರಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ನಡೆದಾಗ, ತೃಣಮೂಲ ಕಾಂಗ್ರೆಸ್ 294 ಸದಸ್ಯರ ವಿಧಾನಸಭೆಯಲ್ಲಿ 60 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು ಮತ್ತು ಎಡಪಕ್ಷಗಳಿಗೆ 192 ಸ್ಥಾನಗಳು ದೊರೆತವು.
ಅದೇ ಸಮಯದಲ್ಲಿ 2006ರ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಬಲ ಅರ್ಧಕ್ಕೆ ಕುಸಿದು ಕೇವಲ 30 ಸ್ಥಾನಗಳನ್ನು ಗೆದ್ದರೆ, ಎಡರಂಗವು 219 ಸ್ಥಾನಗಳನ್ನು ಗೆದ್ದಿತು.
2011ರ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಅವರ ಪಕ್ಷವು ಐತಿಹಾಸಿಕ ವಿಜಯ ಗಳಿಸಿ, 34 ವರ್ಷಗಳಿಂದ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಎಡರಂಗ ಸರ್ಕಾರವನ್ನು ಉರುಳಿಸಿತು. ಟಿಎಂಸಿಗೆ 184 ಸ್ಥಾನಗಳು ದೊರೆತರೆ, ಕಮ್ಯುನಿಸ್ಟರನ್ನು 60 ಸ್ಥಾನಗಳಿಗೆ ತಂದು ಇಳಿಸಲಾಯಿತು.
ಮಮತಾ ಬ್ಯಾನರ್ಜಿ 2016ರಲ್ಲಿ ತಮ್ಮ ಪಕ್ಷಕ್ಕೆ ಅದ್ಭುತ ಜಯವನ್ನು ತಂದು ಕೊಡುವಲ್ಲಿ ಯಶಸ್ವಿಯಾದರು. ಹಾಗಾಗಿ, ತೃಣಮೂಲ ಕಾಂಗ್ರೆಸ್ 211 ಸ್ಥಾನಗಳಲ್ಲಿ ಜಯ ಗಳಿಸಿತು.
ಮಮತಾ ಬ್ಯಾನರ್ಜಿ ಒಬ್ಬ ಸೈನಿಕ : ಈ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ಬ್ಯಾನರ್ಜಿ ಅವರ ವಿಶ್ವಾಸಾರ್ಹ ಸುವೇಂದು ಅಧಿಕಾರಿ ಮತ್ತು ಪಕ್ಷದ ಹಲವಾರು ಮುಖಂಡರು ಬಿಜೆಪಿಗೆ ಸೇರಿದಾಗ ಮಮತಾ ಹಿನ್ನಡೆ ಎದುರಿಸಿದರು.
ಆದರೆ, ಬಂಗಾಳಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಈ ಬ್ಯಾನರ್ಜಿ ಅಂತಿಮವಾಗಿ ಹಲವು ಪ್ರಮುಖ ನಾಯಕರ ದಂಗೆಯ ಹೊರತಾಗಿಯೂ ತಮ್ಮ ಟಿಎಂಸಿ ಪಕ್ಷಕ್ಕೆ ಮೂರನೇ ಬಾರಿಗೆ ಅದ್ಭುತ ಜಯ ಕೊಡಿಸುವಲ್ಲಿ ಯಶಸ್ವಿಯಾದರು.
ಈ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಅಧಿಕಾರದಿಂದ ಹೊರ ಹಾಕಲು ಬಿಜೆಪಿ ತನ್ನ ಎಲ್ಲ ಶಕ್ತಿಯನ್ನು ಪ್ರಯೋಗಿಸಿತು. ಆದರೆ, ಮಮತಾ ಬ್ಯಾನರ್ಜಿ ಕೇಸರಿ ಪಕ್ಷದ ಚುನಾವಣಾ ಯುದ್ಧ ಯಂತ್ರವನ್ನು ಸೋಲಿಸಿದ ಸೈನಿಕ ಮತ್ತು ಕಮಾಂಡರ್ ಆಗಿ ಹೊರ ಹೊಮ್ಮಿದರು. ಅಂತಿಮವಾಗಿ ಪಶ್ಚಿಮ ಬಂಗಾಳವೆಂಬ ಯುದ್ಧಭೂಮಿಯಲ್ಲಿ ಮಮತಾ ಬ್ಯಾನರ್ಜಿ ವಿಜಯ ಪತಾಕೆ ಹಾರಿಸಿದ್ರು.
ಬಂಗಾಳದ ಹುಲಿಯ ರಾಜಕೀಯ ಪ್ರಯಾಣ :
- ಮಮತಾ ಬ್ಯಾನರ್ಜಿ ಜನವರಿ 5, 1955ರಂದು ಕೋಲ್ಕತಾದ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದರು. ಮಮತಾ ತನ್ನ ಚಿಕ್ಕ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡರು . ಹೀಗಾಗಿ, ಅವರ ಬಾಲ್ಯವು ತುಂಬಾ ಕಷ್ಟಕರವಾಗಿತ್ತು.
- ಮಮತಾ ತನ್ನ ಶಾಲಾ ದಿನದಿಂದಲೂ ರಾಜಕೀಯದಲ್ಲಿ ಆಸಕ್ತಿ ಹೊಂದಿದ್ದರು. ಕೋಲ್ಕತಾ ವಿಶ್ವವಿದ್ಯಾಲಯದಲ್ಲಿ ಇತಿಹಾಸ ಮತ್ತು ಇಸ್ಲಾಮಿ ಇತಿಹಾಸವನ್ನೂ ಅಧ್ಯಯನ ಮಾಡಿದರು.
- ಮಮತಾ ಬ್ಯಾನರ್ಜಿ 1970ರ ದಶಕದಲ್ಲಿ ಕಾಂಗ್ರೆಸ್ ಜೊತೆ ರಾಜಕೀಯ ಜೀವನವನ್ನು ಪ್ರಾರಂಭಿಸಿ, ರಾಜ್ಯ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿಯಾದರು.
- 1984ರಲ್ಲಿ ಮಮತಾ ಬ್ಯಾನರ್ಜಿ ಸಿಪಿಐ ಮುಖಂಡ ಸೋಮನಾಥ್ ಚಟರ್ಜಿ ಅವರನ್ನು ಜಾದವ್‌ಪುರ ಸಂಸದೀಯ ಕ್ಷೇತ್ರದಿಂದ ಸೋಲಿಸಿ, ಲೋಕಸಭೆಗೆ ಕಿರಿಯ ಸಂಸದೆಯಾಗಿ ಆಯ್ಕೆಯಾದರು.
- 1984 ರಲ್ಲಿ ಜಯಗಳಿಸಿದ ನಂತರ ಅಖಿಲ ಭಾರತ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾದರು.
- 1989ರ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಜಾದವ್‌ಪುರ ಕ್ಷೇತ್ರದಲ್ಲಿ ಸೋತರು. ಆದರೆ, ಬಳಿಕ ಅವರು 1996, 1998, 1999, 2004 ಮತ್ತು 2009ರಲ್ಲಿ ಕೋಲ್ಕತಾ ದಕ್ಷಿಣ ಕ್ಷೇತ್ರದಿಂದ ಲೋಕಸಭಾ ಸದಸ್ಯರಾಗಿ ಆಯ್ಕೆಯಾದರು.
- ಮಮತಾ ಬ್ಯಾನರ್ಜಿ ಕಾಂಗ್ರೆಸ್‌ನಿಂದ ಬೇರ್ಪಟ್ಟ ನಂತರ ಜನವರಿ 1998ರಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಸ್ಥಾಪಿಸಿದರು. ಅದೇ ವೇಳೆ ಅವರನ್ನು ಜನ ದೀದಿ ಎಂಬ ಹೊಸ ಹೆಸರಿನಲ್ಲಿ ಕರೆಯಲು ಆರಂಭಿಸಿದ್ರು.
- 1999ರಲ್ಲಿ ಎನ್‌ಡಿಎ ಆಡಳಿತದಲ್ಲಿ ಮಮತಾರನ್ನು ರೈಲ್ವೆ ಸಚಿವೆಯಾಗಿ ಮಾಡಲಾಯಿತು. ಆದರೆ, ಒಂದು ವರ್ಷದ ನಂತರ ಪೆಟ್ರೋಲ್ ಬೆಲೆ ಏರಿಕೆಯನ್ನು ವಿರೋಧಿಸಿ ಅವರು ಈ ಹುದ್ದೆಗೆ ರಾಜೀನಾಮೆ ನೀಡಿದರು.
- ಸಿಂಗೂರ್‌ನಲ್ಲಿ ಕಾರು ಕಾರ್ಖಾನೆ ಸ್ಥಾಪಿಸುವ ನಿರ್ಧಾರವನ್ನು ನಿಲ್ಲಿಸಲು 2006 ರಲ್ಲಿ ಮಮತಾ ಪಶ್ಚಿಮ ಬಂಗಾಳ ಸರ್ಕಾರ ಮತ್ತು ಟಾಟಾ ಕಂಪನಿಯ ವಿರುದ್ಧ ಆಂದೋಲನವನ್ನು ಪ್ರಾರಂಭಿಸಿದರು.
- 2011ರಲ್ಲಿ ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳದ ಮೊದಲ ಮಹಿಳಾ ಮುಖ್ಯಮಂತ್ರಿಯಾದರು. ವಿಧಾನಸಭಾ ಚುನಾವಣೆಯಲ್ಲಿ, ಮಮತಾ ಬ್ಯಾನರ್ಜಿ ಅವರ ಪಕ್ಷವು ಐತಿಹಾಸಿಕ ವಿಜಯವನ್ನು ದಾಖಲಿಸಿ, 34 ವರ್ಷಗಳಿಂದ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಎಡಪಂಥೀಯ ಸರ್ಕಾರವನ್ನು ಉರುಳಿಸಿತು.
- ಮಮತಾ ಬ್ಯಾನರ್ಜಿ ಅವರು 2016ರಲ್ಲಿ ತಮ್ಮ ಪಕ್ಷಕ್ಕೆ ಅದ್ಭುತ ಜಯವನ್ನು ನೀಡುವಲ್ಲಿ ಯಶಸ್ವಿಯಾದರು ಮತ್ತು ತೃಣಮೂಲ ಕಾಂಗ್ರೆಸ್ 211 ಸ್ಥಾನಗಳನ್ನು ಗಳಿಸಿತು. 2ನೇ ಅವಧಿಗೂ ಮಮತಾ ಸಿಎಂ ಆಗಿ ಮುಂದುವರಿದರು.
- 2021ರಲ್ಲಿ ಎಲ್ಲ ವಿವಾದಗಳ ಹೊರತಾಗಿಯೂ, ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿಯ ಚುನಾವಣಾ ಯುದ್ಧ ರಣತಂತ್ರವನ್ನು ಸೋಲಿಸಿ ಟಿಎಂಸಿ ವಿಜಯಶಾಲಿಯಾಗಿ ಹೊರಹೊಮ್ಮಿತು.