ಕೋಲ್ಕತ್ತಾ: ನಿನ್ನೆಯಷ್ಟೇ ಪಂಚರಾಜ್ಯಗಳ ಎಕ್ಸಿಟ್ ಪೋಲ್ ಪ್ರಕಟವಾಗಿದ್ದು, 4 ರಾಜ್ಯಗಳಲ್ಲಿ ಆಡಳಿತರೂಢ ಸರ್ಕಾರವೇ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ವರದಿಯಾಗಿದೆ. ಆದರೆ, ತಮಿಳುನಾಡಿನಲ್ಲಿ ಸ್ಟಾಲಿನ್ ನೇತೃತ್ವದಲ್ಲಿ ಡಿಎಂಕೆ ಅಧಿಕಾರಕ್ಕೆ ಏರಲಿದೆ ಎಂದು ವರದಿಯಾಗಿದೆ.
ಈ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚು ಕುತೂಹಲಕ್ಕೆ ಕಾರಣವಾಗಿದ್ದ ಪಶ್ಚಿಮ ಬಂಗಾಳದಲ್ಲಿ ಮತ್ತೊಮ್ಮೆ ಮಮತಾ ಬ್ಯಾನರ್ಜಿ ಅಧಿಕಾರ ಏರುವುದು ಬಹುತೇಕ ಖಚಿತವಾಗಿದೆ.
ಈ ಮೂಲಕ ಪಶ್ಚಿಮ ಬಂಗಾಳದಲ್ಲಿ ಅತ್ಯಂತ ಪ್ರಭಾವಿ ರಾಜಕಾರಣಿಯಾಗಿ ಮಮತಾ ಬ್ಯಾನರ್ಜಿ ಹೊರಹೊಮ್ಮಿದ್ದಾರೆ. ಈ ಕುರಿತು ಈಟಿವಿ ಭಾರತ್ನೊಂದಿಗೆ ವಿಶೇಷ ಸಂದರ್ಶನದಲ್ಲಿ, ಸೆಂಟರ್ ಫಾರ್ ದಿ ಸ್ಟಡಿ ಆಫ್ ಡೆವಲಪ್ಮೆಂಟ್ ಸ್ಟಡೀಸ್ (ಸಿಎಸ್ಡಿಎಸ್) ನಿರ್ದೇಶಕ ಸಂಜಯ್ ಕುಮಾರ್ ಮಾತನಾಡಿ, ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಮತ್ತೊಮ್ಮೆ ಅಧಿಕಾರ ಹಿಡಿಯಲಿದ್ದಾರೆ ಎಂದಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ 292 ವಿಧಾನಸಭಾ ಸ್ಥಾನಗಳಿಗೆ 8 ಹಂತಗಳಲ್ಲಿ ಚುನಾವಣೆ ನಡೆಸಲಾಯಿತು. ಆದರೆ, 8 ಹಂತಗಳಲ್ಲಿ ಚುನಾವಣೆ ನಡೆಸುವ ಚುನಾವಣಾ ಆಯೋಗದ ನಿರ್ಧಾರವನ್ನು ಕುಮಾರ್ ಟೀಕಿಸಿದ್ದಾರೆ. ಹಲವು ಹಂತದಲ್ಲಿ ಚುನಾವಣೆ ನಡೆಸುವುದು ಸೂಕ್ತವಲ್ಲ. ಒಂದು ಹಂತದಿಂದ ಇನ್ನೊಂದು ಹಂತಕ್ಕೆ ಸಮಯ ನೀಡುವುದರಿಂದ ಚುನಾವಣಾ ಅಕ್ರಮಗಳಂತಹ ಪ್ರಕರಣಗಳು ಹೆಚ್ಚಾಗುತ್ತವೆ.
ಪಶ್ಚಿಮ ಬಂಗಾಳದ ಚುನಾವಣೆ ಕೇವಲ ಎರಡು ಅಥವಾ ಮೂರು ಹಂತದಲ್ಲಿ ನಡೆಯಬೇಕಿತ್ತು. ಬಿಜೆಪಿಯ ಎಲ್ಲಾ ನಾಯಕರು ಟಿಎಂಸಿ ಸರ್ಕಾರ ಉರುಳಿಸಲು ಸಕಲ ಪ್ರಯತ್ನ ಮಾಡಿದ್ದಾರೆ. ಅಲ್ಲದೇ ಅಮಿತ್ ಶಾ ಅಬ್ ಕಿ ಬಾರ್ 200 ಪರ್ ಎಂಬ ವಾಕ್ಯ ವ್ಯರ್ಥವಾಗಲಿದೆ ಎಂದಿದ್ದಾರೆ. ಇದಲ್ಲದೇ ಬಿಜೆಪಿಗೆ ಬಂಗಾಳದಲ್ಲಿ ಮತಗಳ ಪ್ರಮಾಣವು ಏರಿಕೆಯಾಗಲಿದ್ದು, 2016ರಲ್ಲಿ ಮೂರು ಕ್ಷೇತ್ರ ಗೆದ್ದಿದ್ದ ಪಕ್ಷ ಇದೀಗ 100ರ ಗಡಿ ದಾಟಬಹುದು. ಅಲ್ಲದೆ ಶೇ. 30ರಷ್ಟು ಮತ ಹಂಚಿಕೆಯಾಗಬಹುದು ಎಂದಿದ್ದಾರೆ.
ಆದರೆ, ಇದೇ ವೇಳೆ 2016ರಲ್ಲಿ ಟಿಎಂಸಿ ಗಳಿಸಿದ್ದ ಸೀಟ್ಗಿಂತಲೂ 40ರಿಂದ 50 ಕ್ಷೇತ್ರಗಳನ್ನ ಕಳೆದುಕೊಳ್ಳುವ ಭೀತಿ ಇದೆ. ಆದರೆ, ಅಧಿಕಾರದಿಂದ ವಂಚಿತರಾಗುವ ಸಾಧ್ಯತೆ ಬಹಳ ಕಡಿಮೆ ಎಂದಿದ್ದಾರೆ.