ETV Bharat / bharat

ಅಮಿತ್ ಶಾ ಸಮ್ಮುಖದಲ್ಲಿ ವಿಕ್ಟೋರಿಯಾ ಸ್ಮಾರಕ ಕಾರ್ಯಕ್ರಮ: ಸಿಎಂ ಮಮತಾ ಬ್ಯಾನರ್ಜಿಗಿಲ್ಲ ಆಹ್ವಾನ!

ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್ ಧಂಖರ್ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರೂ ಸಹ ಪಶ್ಚಿಮ ಬಂಗಾಳದ ಮಾಹಿತಿ ಮತ್ತು ಸಂಸ್ಕೃತಿ ಸಚಿವೆಯೂ ಆಗಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಇನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿಲ್ಲ.

ಅಮಿತ್ ಶಾ ಸಮ್ಮುಖದಲ್ಲಿ ವಿಕ್ಟೋರಿಯಾ ಸ್ಮಾರಕ ಕಾರ್ಯಕ್ರಮ:  ಮಮತಾ ಬ್ಯಾನರ್ಜಿಗೆ ಆಹ್ವಾನವಿಲ್ಲ!

author img

By

Published : May 4, 2022, 8:37 PM IST

ಕೋಲ್ಕತ್ತಾ : ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನಾಳೆ ಬಂಗಾಳಕ್ಕೆ ಭೇಟಿ ನೀಡಲಿದ್ದು, ಭೇಟಿಯ ವೇಳೆ ಉತ್ತರ ಮತ್ತು ದಕ್ಷಿಣ ಬಂಗಾಳದ ಹಲವು ಕಾರ್ಯಕ್ರಮಗಳಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ. ಶುಕ್ರವಾರ ರಾಜರಹತ್ ಹೋಟೆಲ್‌ನಲ್ಲಿ ಹಲವಾರು ರಾಜಕೀಯ ಸಭೆಗಳನ್ನು ನಡೆಸಲಿರುವ ಗೃಹ ಸಚಿವರು, ಅಂದು ಸಂಜೆ ಮಾಹಿತಿ ಮತ್ತು ಸಂಸ್ಕೃತಿ ಸಚಿವಾಲಯ ಆಯೋಜಿಸಿರುವ ವಿಕ್ಟೋರಿಯಾ ಸ್ಮಾರಕದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್ ಧಂಖರ್ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರೂ ಸಹ ಪಶ್ಚಿಮ ಬಂಗಾಳದ ಮಾಹಿತಿ ಮತ್ತು ಸಂಸ್ಕೃತಿ ಸಚಿವೆಯೂ ಆಗಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಇನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿಲ್ಲ. ಈ ರೀತಿ ಯಾಕೆ ಮಾಡಲಾಗಿದೆ ಎಂಬ ಚರ್ಚೆ ಆರಂಭವಾಗಿದೆ.

ರಾಜ್ಯದ ಆಡಳಿತ ಪಕ್ಷವಾದ ತೃಣಮೂಲ ಕಾಂಗ್ರೆಸ್ ಈ ವಿಷಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲು ಸಿದ್ಧವಾಗಿಲ್ಲ. ತೃಣಮೂಲ ಕಾಂಗ್ರೆಸ್ ವಕ್ತಾರ ತಪಸ್ ರಾಯ್ ಮಾತನಾಡಿ, ಬಿಜೆಪಿ ಸರ್ಕಾರದಿಂದ ಯಾವುದೇ ಸೌಜನ್ಯವನ್ನು ನಿರೀಕ್ಷಿಸಲಾಗುವುದಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಅಕ್ರಮ ನೇಮಕಾತಿಗೆ ಸರ್ಕಾರವೇ ಅಂಗಡಿ ತೆರೆದಿದೆ.. ಅಶ್ವತ್ಥ್ ನಾರಾಯಣ ಅತ್ಯಂತ ಭ್ರಷ್ಟ ಸಚಿವ.. ಡಿಕೆಶಿ

ಇದೇ ವೇಳೆ ಬಿಜೆಪಿಯ ಅಖಿಲ ಭಾರತ ಉಪಾಧ್ಯಕ್ಷ ದಿಲೀಪ್ ಘೋಷ್ ಮಾತನಾಡಿ, ಇದು ಮಾಹಿತಿ ಮತ್ತು ಸಂಸ್ಕೃತಿ ಸಚಿವಾಲಯದ ಕಾರ್ಯಕ್ರಮವಾದ್ದರಿಂದ ಯಾರನ್ನು ಆಹ್ವಾನಿಸಬೇಕು ಎಂಬುದು ಅವರವರ ವಿವೇಚನೆಗೆ ಬಿಟ್ಟಿದ್ದು. ಆದರೂ ಅವರು ಬರದಿದ್ದರೆ ಒಳ್ಳೆಯದು. ಯಾರಾದರೂ ಜೈ ಶ್ರೀ ರಾಮ್ ಎಂದು ಕೂಗಬಹುದು, ಅದು ಸಿಎಂ ಮಮತಾ ಅವರಿಗೆ ಇಷ್ಟವಾಗದಿರಬಹುದು ಎಂದು ಟಾಂಗ್​ ನೀಡಿದ್ದಾರೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.