ಪಶ್ಚಿಮ ಬಂಗಾಳ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಂದು ರಾಜ್ಯದ ಎರಡು ಹೊಸ ಜಿಲ್ಲೆಗಳನ್ನು ಘೋಷಿಸಲಿದ್ದಾರೆ. ದಕ್ಷಿಣ ಪಗರಣ ಮತ್ತು ಉತ್ತರ 24 ಪರಗಣ ಜಿಲ್ಲೆಗಳಿಂದ ಬೇರ್ಪಡಿಸಿ ಹೊಸ ಜಿಲ್ಲೆಗಳನ್ನು ರಚಿಸಲು ನಿರ್ಧರಿಸಲಾಗಿದೆ. ಇದಕ್ಕೆ ಅಗತ್ಯವಿರುವ ಎಲ್ಲ ಕೆಲಸಗಳು ಪೂರ್ಣಗೊಂಡಿವೆ. ಇವುಗಳಿಗೆ ಸುಂದರಬನ್ಸ್ ಮತ್ತು ಬಸಿರ್ಹತ್ ಎಂದು ಹೆಸರಿಸಲಾಗುತ್ತದೆ ಹಿರಿಯ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ. ರಾಜ್ಯದಲ್ಲಿ ಸದ್ಯ 23 ಜಿಲ್ಲೆಗಳಿವೆ.
ಇದನ್ನೂ ಓದಿ: ವಿಜಯನಗರದ ಜೊತೆ ರಾಜ್ಯದಲ್ಲಿ ಮತ್ತೆರಡು ಹೊಸ ಜಿಲ್ಲೆ ರಚನೆ?