ETV Bharat / bharat

ಯುಪಿ ಕಾಂಗ್ರೆಸ್ ಚುನಾವಣಾ ಸಮಿತಿ ವಿಸರ್ಜಿಸಿದ ಖರ್ಗೆ.. ಮುಂದಿನ ಲೋಕಸಭೆ ಎಲೆಕ್ಷನ್​ ಟಾರ್ಗೆಟ್​, ಹೊಸ ಪ್ಲಾನ್​

author img

By

Published : Nov 17, 2022, 8:25 PM IST

2024ರ ಲೋಕಸಭೆ ಚುನಾವಣೆಗೆ ಈಗಿನಿಂದಲೇ ಸಿದ್ಧತೆಯಲ್ಲಿ ತೊಡಗಿದ್ದೇವೆ. ನಮ್ಮದು ಮೊದಲ ಆದ್ಯತೆ ಉತ್ತರಪ್ರದೇಶವಾಗಿದೆ. ಕಾಂಗ್ರೆಸ್ ಪಕ್ಷ ಕಾರ್ಯಕರ್ತರ ದೊಡ್ಡಪಡೆ ಹೊಂದಿದ್ದು, ಆ ಸಂಪನ್ಮೂಲವನ್ನು ಸಮರ್ಥವಾಗಿ ಬಳಸಿಕೊಳ್ಳಲಿದೆ. ಉತ್ತರಪ್ರದೇಶದಲ್ಲಿ ಗರಿಷ್ಠ ಲೋಕಸಭೆ ಸ್ಥಾನ ಗೆಲ್ಲುವುದು ಕಾಂಗ್ರೆಸ್ ಗುರಿಯಾಗಿದೆ ಎಂದು ಉತ್ತರ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಬ್ರಿಜ್ಲಾಲ್ ಖಬ್ರಿ 'ಈಟಿವಿ ಭಾರತ'ಕ್ಕೆ ತಿಳಿಸಿದ್ದಾರೆ.

congress party flag
ಕಾಂಗ್ರೆಸ್ ಪಕ್ಷದ ಧ್ವಜ

ನವದೆಹಲಿ: 2024ರ ಲೋಕಸಭೆ ಚುನಾವಣೆಗೆ ಪಕ್ಷವನ್ನು ಹುರಿಗೊಳಿಸಲು ಕಾಂಗ್ರೆಸ್​ ಹೈಕಮಾಂಡ್​ ಸಜ್ಜಾಗಿದೆ. ಈ ನಿಟ್ಟಿನಲ್ಲಿ 2022ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ರಚಿಸಲಾಗಿದ್ದ ಎಲ್ಲಾ ಸಮಿತಿಗಳನ್ನು ಕಾಂಗ್ರೆಸ್ ನ ನೂತನ ಸಾರಥಿ ಮಲ್ಲಿಕಾರ್ಜುನ ಖರ್ಗೆ ಗುರುವಾರ ವಿಸರ್ಜಿಸಿದರು.

ಗುಜರಾತ್ ಮತ್ತು ಹಿಮಾಚಲ ಫಲಿತಾಂಶಗಳ ಬಳಿಕ ಲೋಕಸಭೆಗೆ ಹೆಚ್ಚು ಸಂಸದರನ್ನು ಗೆಲ್ಲಿಸಿಕೊಂಡು ಬರುವುದಕ್ಕಾಗಿ ಮತ್ತು ಉತ್ತರ ಪ್ರದೇಶದಲ್ಲಿ ಪಕ್ಷದ ಪುನರುಜ್ಜೀವನಕ್ಕಾಗಿ ನೂತನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೊಸ ಯೋಜನೆ ಪ್ರಕಟಿಸುವ ನಿರೀಕ್ಷೆಯಿದೆ.

ಕಾಂಗ್ರೆಸ್ ಪ್ರಕಾರ ಸುಲಭವಾಗಿ ಗೆಲ್ಲುವ ಕ್ಷೇತ್ರ ಹಾಗೂ ಹೆಚ್ಚು ಪ್ರಬಲ ಸ್ಪರ್ಧೆ ಎದುರಿಸುವ ಕ್ಷೇತ್ರಗಳನ್ನು ಗುರುತಿಸಿ ವಿಂಗಡಿಸಲಾಗುವುದು. ಈ ಕ್ಷೇತ್ರಗಳ ಗೆಲುವಿಗೆ ಪ್ರತ್ಯೇಕ ತಂತ್ರಗಳನ್ನು ಈಗಿನಿಂದಲೇ ರೂಪಿಸಲಿದೆ. ಆರಂಭದಲ್ಲಿ ಸುಲಭವಾಗಿ ಗೆಲ್ಲುವ ಮೊದಲು ಯುಪಿ 20 ಲೋಕಸಭೆ ಸ್ಥಾನದ ಮೇಲೆ ನಿಗಾವಹಿಸಲಾಗುವುದು. ಕಾರ್ಯಕರ್ತರ ಬಲಿಷ್ಠ ಪಡೆ ರಚಿಸುವುದರೊಂದಿಗೆ, ಪಕ್ಷದ ಬಲವರ್ಧನೆಗೆ ಶ್ರಮಿಸಲಿದೆ ಎಂಬ ಮಾಹಿತಿ ಸಿಕ್ಕಿದೆ.

ಸುಲಭ ಹಾಗೂ ಅತ್ಯಂತ ಪ್ರಯಾಸದ ಗೆಲುವು ಕಂಡುಬರುವ ಲೋಕಸಭೆ ಸ್ಥಾನಗಳಿಗೆ ಪ್ರತ್ಯೇಕ ಯೋಜನೆ ರೂಪಿಸಲಾಗುತ್ತಿದೆ. 2024ರ ಚುನಾವಣೆಗೆ ಈಗಿನಿಂದ ಸಿದ್ಧತೆಯಲ್ಲಿ ತೊಡಗಿದ್ದೇವೆ. ಕಾಂಗ್ರೆಸ್ ಪಕ್ಷವೂ ತನ್ನ ಬಹುದೊಡ್ಡ ಕಾರ್ಯಕರ್ತರ ಸಂಪನ್ಮೂಲವನ್ನು ಸಮರ್ಥವಾಗಿ ಬಳಸಿಕೊಳ್ಳಲಿದೆ. ಉತ್ತರಪ್ರದೇಶದಲ್ಲಿ ಗರಿಷ್ಠ ಸಂಖ್ಯೆಯ ಲೋಕಸಭೆ ಸ್ಥಾನಗಳನ್ನು ಗೆಲ್ಲುವುದು ಕಾಂಗ್ರೆಸ್ ಗುರಿಯಾಗಿದೆ ಎಂದು ಉತ್ತರ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಬ್ರಿಜ್ಲಾಲ್ ಖಬ್ರಿ 'ಈಟಿವಿ ಭಾರತ' ಜತೆಗೆ ಮಾತನಾಡಿದ್ದಾರೆ. "2024ರ ಚುನಾವಣೆಗೆ ಪದಾಧಿಕಾರಿಗಳ ತಂಡವನ್ನು ನೂತನ ಅಧ್ಯಕ್ಷರು ಪರಿಗಣಿಸಿ ಮರುಪರಿಶೀಲಿಸಲಿದ್ದಾರೆ" ಎಂದು ಹೇಳಿದರು.

2009 ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 21 ಲೋಕಸಭೆ ಸ್ಥಾನಗಳನ್ನು ಗೆದ್ದಿತ್ತು. ಕೆಲವು ತಿಂಗಳ ನಂತರ ಉಪಚುನಾವಣೆಯಲ್ಲಿ ಮತ್ತೆ ಒಂದು ಸ್ಥಾನ ಪಡೆದುಕೊಂಡಿತು. ಆದರೆ 2014 ರಲ್ಲಿ ಎರಡು ಮತ್ತು 2019 ರಲ್ಲಿ ಕೇವಲ ಒಂದು ಸ್ಥಾನಕ್ಕೆ ಕುಸಿಯಿತು. ಪ್ರಸ್ತುತ, ಬರೇಲಿ ಕ್ಷೇತ್ರದಿಂದ ಪಕ್ಷದ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರತಿನಿಧಿಸುತ್ತಿದ್ದಾರೆ. ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ 2019 ರಲ್ಲಿ ಅಮೇಥಿ ಕ್ಷೇತ್ರದಲ್ಲಿ ಸೋಲುಂಡರು. ಕೇರಳದ ವಯನಾಡ್​ ಕ್ಷೇತ್ರದಲ್ಲೂ ಅದೃಷ್ಟ ಪರೀಕ್ಷೆಗೆ ನಿಂತಿದ್ದ ಅವರನ್ನು ಜನ ಕೈಹಿಡಿದರು.

2014 ರಿಂದ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬೆಂಬಲಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಉತ್ತರ ಪ್ರದೇಶದಲ್ಲಿ 2009 ರ ಸ್ಥಾನವನ್ನು ಮರಳಿ ಪಡೆಯುವ ಗುರಿಯನ್ನು ಕಾಂಗ್ರೆಸ್ ಹೊಂದಿದೆ. “ಗುಜರಾತ್ ಮತ್ತು ಹಿಮಾಚಲ ಚುನಾವಣೆ ಮುಗಿದ ನಂತರ ಸಾಕಷ್ಟು ಬದಲಾವಣೆಗಳಾಗುವ ನಿರೀಕ್ಷೆಯಿದೆ ಎಂದು ಮಾಜಿ ಶಾಸಕ ಅಖಿಲೇಶ್ ಪ್ರತಾಪ್ ಸಿಂಗ್ ತಿಳಿಸಿದ್ದಾರೆ.

ನೆಹರು-ಗಾಂಧಿ ಕುಟುಂಬದ ತವರು ರಾಜ್ಯ ಉತ್ತರ ಪ್ರದೇಶವು ಕಾಂಗ್ರೆಸ್ ಪಕ್ಷಕ್ಕೆ ಮಹತ್ವದ್ದಾಗಿದೆ. ರಾಹುಲ್ ಮೊದಲ ಬಾರಿಗೆ ಲೋಕಸಭೆಗೆ ಪ್ರವೇಶಿಸಿದಾಗ 2004 ರಿಂದ ಪ್ರಿಯಾಂಕಾ ಅಮೇಥಿ ಮತ್ತು ರಾಯ್ ಬರೇಲಿಯಿಂದ ರಾಹುಲ್ ಗಾಂಧಿ ಅಖಾಡಕ್ಕಿಳಿಯುತ್ತಿದ್ದರು.

ನಂತರ, ಪ್ರಿಯಾಂಕಾ ಅವರಿಗೆ ಉತ್ತರ ಪ್ರದೇಶದ ಸಂಪೂರ್ಣ ಉಸ್ತುವಾರಿ ನೀಡಲಾಯಿತು ಮತ್ತು 2022 ರ ವಿಧಾನಸಭೆ ಚುನಾವಣೆಗೆ ಮೈದಾನವನ್ನು ಸಿದ್ಧಪಡಿಸಲು ಪ್ರಾರಂಭಿಸಿದರು. ಆದಾಗ್ಯೂ, ಎರಡು ವರ್ಷಗಳ ಸಾಂಕ್ರಾಮಿಕ ರೋಗವು ಕಾರ್ಯಾಚರಣೆಯಿಂದಾಗಿ ಹಲವಾರು ಸಮಸ್ಯೆಗಳನ್ನು ಸೃಷ್ಟಿಸಿತು. ಪಕ್ಷದ ಸಂಘಟನೆಯನ್ನು ದುರ್ಬಲಗೊಳಿಸಿತು. ಪ್ರಿಯಾಂಕಾ ರಾಜಧಾನಿ ಲಕ್ನೋದಲ್ಲಿ ನೆಲೆಸಿಲ್ಲ. ಜಾಥಾ ಕಾರ್ಯಕ್ರಮಗಳ ಸಮಯದಲ್ಲಿ ಮಾತ್ರ ಭೇಟಿ ನೀಡುತ್ತಾರೆ ಎಂದು ಕಾರ್ಮಿಕರಿಂದ ದೂರುಗಳು ಬಂದಿದ್ದವು. ಹೀಗಾಗಿ 2022 ರ ವಿಧಾನಸಭಾ ಚುನಾವಣಾ ಫಲಿತಾಂಶವು ಸಂಘಟನೆಯಲ್ಲಿ ಕೆಲಸ ಮಾಡಿದ್ದ ಪ್ರಿಯಾಂಕಾಗೆ ಇದು ಆಘಾತವನ್ನುಂಟುಮಾಡಿತು.

ಈಗ ಉತ್ತರಪ್ರದೇಶದಲ್ಲಿ ಹೊಸ ವಿಧಾನ ಅಳವಡಿಸಿಕೊಳ್ಳಲು ಚಿಂತನೆ ನಡೆಸಲಾಗಿದೆ. ನಾಯಕ ಬ್ರಿಜ್‌ಲಾಲ್ ಖಾಬ್ರಿ ಅವರ ನೇಮಕ ಮತ್ತು ಆರು ವಲಯಗಳಿಗೆ ಪ್ರತ್ಯೇಕ ಉಸ್ತುವಾರಿ ವಹಿಸಿರುವುದು ಅದರಲ್ಲೊಂದು ನವೀಕೃತ ವಿಧಾನವಾಗಿದೆ ಎಂದು ಕಾಂಗ್ರೆಸ್​ನ ಬಲ್ಲ ಮೂಲಗಳಿಂದ ಗೊತ್ತಾಗಿದೆ.

ಹಳೆಯ ತನ್ನ ಸಾಂಪ್ರದಾಯಿಕ ದಲಿತ ಮತಗಳನ್ನು ಮತ್ತೆ ಗೆಲ್ಲಲು ನಾನಾ ತಂತ್ರಗಳ ಮೂಲಕ ಪ್ರಯತ್ನಿಸಲಾಗುವುದು "ಪ್ರಿಯಾಂಕಾ ಗಾಂಧಿ ಇದೀಗ ಗುಜರಾತ್‌ನಲ್ಲಿ ನಿರತರಾಗಿದ್ದಾರೆ. ಆದರೆ ಫಲಿತಾಂಶದ ನಂತರ ಅವರು ಯುಪಿಗೆ ಭೇಟಿ ನೀಡಬಹುದು" ಎಂದು ಎಐಸಿಸಿಯ ಹಿರಿಯ ಕಾರ್ಯಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಗುಜರಾತ್​ ಚುನಾವಣೆ: ಸೂರತ್​ನ ಎಲ್ಲ ಅಭ್ಯರ್ಥಿಗಳು ಅಜ್ಞಾತ ಸ್ಥಳಕ್ಕೆ ಶಿಫ್ಟ್​ ಮಾಡಿದ ಆಪ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.