ETV Bharat / bharat

'ಹೈ ತಯಾರ್ ಹಮ್' ರಾಷ್ಟ್ರ ಮಟ್ಟದ ರ್‍ಯಾಲಿ ಸಂಘಟನೆಗಾಗಿ 9 ಎಐಸಿಸಿ ಕಾರ್ಯದರ್ಶಿಗಳ ನೇಮಿಸಿದ ಮಲ್ಲಿಕಾರ್ಜುನ ಖರ್ಗೆ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, 'ಹೈ ತಯಾರ್ ಹಮ್' ರಾಷ್ಟ್ರ ಮಟ್ಟದ ರ್‍ಯಾಲಿ ಸಂಘಟನೆಗಾಗಿ 9 ಎಐಸಿಸಿ ಕಾರ್ಯದರ್ಶಿಗಳ ನೇಮಕ ಮಾಡಿದ್ದಾರೆ.

Mallikarjun Kharge
'ಹೈ ತಯಾರ್ ಹಮ್' ರಾಷ್ಟ್ರ ಮಟ್ಟದ ರ್‍ಯಾಲಿ ಸಂಘಟನೆಗಾಗಿ 9 ಎಐಸಿಸಿ ಕಾರ್ಯದರ್ಶಿಗಳ ನೇಮಿಸಿದ ಮಲ್ಲಿಕಾರ್ಜುನ ಖರ್ಗೆ
author img

By ETV Bharat Karnataka Team

Published : Dec 20, 2023, 8:49 AM IST

ನವದೆಹಲಿ: ಡಿಸೆಂಬರ್ 28ರಂದು ನಾಗ್ಪುರದಲ್ಲಿ ಆಯೋಜಿಸಲಾಗುವ 'ಹೈ ತೈಯಾರ್ ಹಮ್' ರಾಷ್ಟ್ರೀಯ ಮಟ್ಟದ ರ್‍ಯಾಲಿಗೆ ಸಜ್ಜುಗೊಳಿಸಲು ಮತ್ತು ಇತರ ವ್ಯವಸ್ಥೆಗಳನ್ನು ಸಂಘಟಿಸಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು 9 ಎಐಸಿಸಿ ಕಾರ್ಯದರ್ಶಿಗಳನ್ನು ನೇಮಕ ಮಾಡಿದ್ದಾರೆ.

ಎಐಸಿಸಿ ಸದಸ್ಯರಾದ ಪಿ.ಸಿ. ವಿಷ್ಣುನಾಧ್, ಖಾಜಿ ನಿಜಾಮುದ್ದೀನ್, ಸಂಜಯ್ ಕಪೂರ್, ಧೀರಜ್ ಗುರ್ಜರ್, ಚಂದನ್ ಯಾದವ್, ಬಿ.ಎಂ. ಸಂದೀಪ್, ಚೇತನ್ ಚವ್ಹಾಣ್, ಪ್ರದೀಪ್ ನರ್ವಾಲ್ ಮತ್ತು ಅಭಿಷೇಕ್ ದತ್ ಅವರನ್ನು ನೇಮಿಸಲಾಗಿದೆ.

ವಿಪಕ್ಷಗಳ ಇಂಡಿಯಾ ಒಕ್ಕೂಟದಿಂದ ನವದೆಹಲಿಯಲ್ಲಿ ಮಂಗಳವಾರ ನಡೆದ ನಾಲ್ಕನೇ ಸಭೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳು (ಇವಿಎಂ) ಮತ್ತು ಸಂಸತ್ತಿನಿಂದ ಸಂಸದರನ್ನು ಅಮಾನತುಗೊಳಿಸುವ ನಿರ್ಣಯ ಅಂಗೀಕರಿಸಲಾಯಿತು. ಇತ್ತೀಚಿನ ಸಂಸತ್ತಿನ ಭದ್ರತಾ ಉಲ್ಲಂಘನೆಯ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಉತ್ತರಿಸುವಂತೆ ಪ್ರತಿಪಕ್ಷಗಳು ಪಟ್ಟು ಹಿಡಿದಿದ್ದವು. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ನಡುವಿನ ರಾಜಕೀಯ ಉದ್ವಿಗ್ನತೆಯ ನಡುವೆಯೂ ಇಂಡಿಯಾ ಒಕ್ಕೂಟದ ಸಭೆ ನಡೆಯಿತು.

ಇವಿಎಂಗಳ ಕಾರ್ಯನಿರ್ವಹಣೆಯ ಸಮಗ್ರತೆಯ ಬಗ್ಗೆ ಹಲವು ಅನುಮಾನಗಳಿವೆ ಎಂದು ಪ್ರತಿಪಕ್ಷಗಳು ಪುನರುಚ್ಚರಿಸುತ್ತವೆ. ಈ ಬಗ್ಗೆ ಅನೇಕ ತಜ್ಞರು ಮತ್ತು ವೃತ್ತಿಪರರು ಸಹ ಧ್ವನಿ ಎತ್ತಿದ್ದಾರೆ. ಬ್ಯಾಲೆಟ್ ಪೇಪರ್ ವ್ಯವಸ್ಥೆಗೆ ಮರಳಲು ವ್ಯಾಪಕ ಬೇಡಿಕೆಯಿದೆ ಎಂದು ನಿರ್ಣಯವು ತಿಳಿಸುತ್ತದೆ. ವಿವಿಪ್ಯಾಟ್ ಚೀಟಿ ಪೆಟ್ಟಿಗೆಯಲ್ಲಿ ಬೀಳುವ ಬದಲು ಅದನ್ನು ಮತದಾರರಿಗೆ ಹಸ್ತಾಂತರಿಸಬೇಕು. ಅವರು ತಮ್ಮ ಆಯ್ಕೆಯನ್ನು ಪರಿಶೀಲಿಸಿದ ನಂತರ ಅದನ್ನು ಪ್ರತ್ಯೇಕ ಮತ ಪೆಟ್ಟಿಗೆಯಲ್ಲಿ ಇರಿಸಬೇಕು. ವಿವಿಪ್ಯಾಟ್ ಸ್ಲಿಪ್‌ಗಳ 100 ಪ್ರತಿಶತ ಎಣಿಕೆ ಮಾಡಬೇಕು. ಇದು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಜನರಲ್ಲಿ ಸಂಪೂರ್ಣ ವಿಶ್ವಾಸ ಮೂಡಿಸುತ್ತದೆ ಎಂದು ನಿರ್ಣಯ ಹೇಳಿದೆ.

ಸಂಸದರ ಅಮಾನತು ಪ್ರಜಾಪ್ರಭುತ್ವ ವಿರೋಧಿ ಧೋರಣೆ- ಖರ್ಗೆ: ''28 ಪಕ್ಷಗಳು ನಮ್ಮ ನಾಲ್ಕನೇ ಸಭೆಯಲ್ಲಿ ಭಾಗವಹಿಸಿ ಮೈತ್ರಿ ಸಮಿತಿಯ ಮುಂದೆ ತಮ್ಮ ಆಲೋಚನೆಗಳನ್ನು ಇಟ್ಟುಕೊಂಡಿವೆ. ಅಮಾನತುಗೊಳಿಸುವ ನಿರ್ಣಯವನ್ನು ಅಂಗೀಕರಿಸಲಾಗಿದೆ'' ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಸಂಸತ್ತಿನ ಭದ್ರತಾ ಉಲ್ಲಂಘನೆ ಪ್ರಧಾನಿ ಮೋದಿ ಮೌನ ಮುರಿಯಲಿ- ಖರ್ಗೆ: "ಸಂಸದರ ಅಮಾನತುಗೊಳಿಸುವುದು ಪ್ರಜಾಪ್ರಭುತ್ವ ವಿರೋಧಿ ಎಂದು ನಾವು ನಿರ್ಣಯವನ್ನು ಅಂಗೀಕರಿಸಿದ್ದೇವೆ. ಪ್ರಜಾಪ್ರಭುತ್ವ ಉಳಿಸಲು ನಾವೆಲ್ಲರೂ ಹೋರಾಡಬೇಕು. ನಾವೆಲ್ಲರೂ ಹೋರಾಟ ಮಾಡಲು ಸಿದ್ಧರಿದ್ದೇವೆ. ನಾವು ಸಂಸತ್ತಿನಲ್ಲಿ ಭದ್ರತಾ ಲೋಪದ ವಿಷಯವನ್ನು ಪ್ರಸ್ತಾಪಿಸಿದ್ದೇವೆ. ಕೇಂದ್ರದ ಗೃಹ ಸಚಿವ ಅಮಿತ್ ಶಾ, ಪ್ರಧಾನಿ ಮೋದಿ ಸಂಸತ್ತಿಗೆ ಬಂದು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಸಂಸತ್ತಿನ ಭದ್ರತಾ ಉಲ್ಲಂಘನೆ ವಿಷಯದ ಬಗ್ಗೆ ಮಾತನಾಡಬೇಕು. ಆದರೆ, ಅವರು ಅದನ್ನು ಮಾಡಲು ನಿರಾಕರಿಸುತ್ತಿದ್ದಾರೆ'' ಎಂದು ಖರ್ಗೆ ಕಿಡಿಕಾರಿದರು.

''2024 ರ ಲೋಕಸಭಾ ಚುನಾವಣೆಯು ಕೇವಲ ನಾಲ್ಕು ತಿಂಗಳುಗಳಿರುವಾಗ, ಸೀಟುಗಳ ಹಂಚಿಕೆಯು ಕಾಂಗ್ರೆಸ್‌ಗೆ ಪ್ರಮುಖವಾಗಿದೆ. ವಿಶೇಷವಾಗಿ ಇತ್ತೀಚಿನ ಚುನಾವಣಾ ಹಿನ್ನಡೆಗಳ ನಂತರ, ಈ ಮಧ್ಯೆ, ವಿರೋಧ ಪಕ್ಷದ ಮೈತ್ರಿಯು ಬಣದ ಪ್ರಧಾನಿ ಅಭ್ಯರ್ಥಿಯ ಬಗ್ಗೆ ಒಮ್ಮತಕ್ಕೆ ಬಂದಿಲ್ಲ. ಚುನಾವಣೆ ನಂತರ ಪ್ರಧಾನಿ ಅಭ್ಯರ್ಥಿ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು'' ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

"ಮೊದಲು ನಾವೆಲ್ಲರೂ ಗೆಲ್ಲಬೇಕು, ಗೆಲುವಿಗೆ ಏನು ಮಾಡಬೇಕು ಎಂದು ಯೋಚಿಸಬೇಕು, ಯಾರು ಪ್ರಧಾನಿಯಾಗುತ್ತಾರೆ, ಇದು ನಂತರ ನಿರ್ಧಾರವಾಗುತ್ತದೆ. ಮೊದಲು ನಮ್ಮ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಮೂಲಕ ಬಹುಮತವನ್ನು ಗಳಿಸಲು ಪ್ರಯತ್ನಿಸುತ್ತೇವೆ‘‘ ಎಂದರು.

''ಇಂಡಿಯಾ ಒಕ್ಕೂಟದ ಸಭೆ ಚೆನ್ನಾಗಿತ್ತು. ಪ್ರಚಾರ, ಸೀಟು ಹಂಚಿಕೆ ಮತ್ತು ಎಲ್ಲವೂ ಶೀಘ್ರದಲ್ಲೇ ಪ್ರಾರಂಭವಾಗಲಿದೆ'' ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದರು.

ಪ್ರಧಾನಿ ಅಭ್ಯರ್ಥಿ ಬಗ್ಗೆಯೂ ಚರ್ಚೆ: ಜೆಎಂಎಂ ಸಂಸದ ಮಹುವಾ ಮಾತನಾಡಿ, ''ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಪ್ರಮುಖ ಚರ್ಚೆ ನಡೆಯಿತು. ಕೆಲವು ನಾಯಕರು ಜನವರಿ 1ರ ಮೊದಲು ಸೀಟು ಹಂಚಿಕೆ ಮಾಡಬೇಕೆಂದು ಬಯಸಿದ್ದರು. ಪ್ರಧಾನಿ ಅಭ್ಯರ್ಥಿ ಬಗ್ಗೆಯೂ ಚರ್ಚೆ ನಡೆಸಲಾಯಿತು. ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ. ಚುನಾವಣೆಯಲ್ಲಿ ಗೆದ್ದ ನಂತರ ಪ್ರಧಾನಿ ಮುಖವನ್ನು ನಿರ್ಧರಿಸಲಾಗುವುದು ಎಂದು ಎಲ್ಲರೂ ಹೇಳಿದ್ದಾರೆ" ಎಂದು ತಿಳಿಸಿದರು.

ಇದನ್ನೂ ಓದಿ: ಇವಿಎಂಗಳ ಬಗ್ಗೆ ಧ್ವನಿ ಎತ್ತಿದ I.N.D.I.A ಕೂಟ.. ನಿರ್ಣಯ ಅಂಗೀಕಾರ.. ಚುನಾವಣಾ ಆಯೋಗಕ್ಕೆ ಸಲ್ಲಿಕೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.