ETV Bharat / bharat

ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ವಿಪಕ್ಷ ನಾಯಕರ ಒಗ್ಗಟ್ಟಿನ ಮಾತುಕತೆ: ಆ.3ಕ್ಕೆ ಬಿಜೆಪಿ ಸಂಸದೀಯ ಸಭೆ

ಸಭೆಯಲ್ಲಿ ಕೃಷಿ ಕಾಯ್ದೆ, ಪೆಗಾಸಸ್ ವಿವಾದ ಕುರಿತು ಗಂಭೀರ ಚರ್ಚೆ ನಡೆದಿದೆ ಎನ್ನಲಾಗಿದ್ದು, ಕಲಾಪದಲ್ಲಿ ಈ ಕುರಿತ ಚರ್ಚೆಗೆ ಅವಕಾಶ ನೀಡುವ ಮನವಿ ಕುರಿತು ಮಾತುಕತೆ ನಡೆದಿದೆ.

author img

By

Published : Jul 30, 2021, 12:19 PM IST

Updated : Jul 30, 2021, 1:20 PM IST

mallikarjun-kharge-and-leaders-of-like-minded-opposition-parties-held-a-meeting
ಮಲ್ಲಿಕಾರ್ಜುನ್ ಖರ್ಗೆ ನೇತೃತ್ವದಲ್ಲಿ ವಿಪಕ್ಷ ನಾಯಕರ ಸಭೆ

ನವದೆಹಲಿ: ಮಾನ್ಸೂನ್ ಅಧಿವೇಶನ ಸಂದರ್ಭ ಉಭಯ ಸದನದಲ್ಲಿ ಆಡಳಿತ ಪಕ್ಷದ ವಿರುದ್ಧ ವಿಪಕ್ಷಗಳು ವಾಗ್ಬಾಣ ಮುಂದುವರೆಸಿವೆ. ಇಂದು ನಡೆದ ರಾಜ್ಯಸಭೆ ಕಲಾಪ ಆರಂಭಕ್ಕೂ ಮುನ್ನ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ.

ಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ಮಾತ್ರವಲ್ಲದೇ ಆಸಕ್ತ ವಿವಿಧ ಪಕ್ಷದ ನಾಯಕರು ಸಹ ಭಾಗಿಯಾಗಿದ್ದರು. ಕಲಾಪದ ವೇಳೆ ಚರ್ಚೆ ಆಗಬೇಕಾದ ವಿಚಾರಗಳ ಕುರಿತು ಸಭೆಯಲ್ಲಿ ಮಾತುಕತೆ ನಡೆದಿದೆ ಎನ್ನಲಾಗಿದೆ. ಸಭೆಯಲ್ಲಿ ಕೃಷಿ ಕಾಯ್ದೆ, ಪೆಗಾಸಸ್ ವಿವಾದ ಕುರಿತು ಗಂಭೀರ ಚರ್ಚೆ ನಡೆದಿದೆ ಎನ್ನಲಾಗಿದ್ದು, ಕಲಾಪದಲ್ಲಿ ಈ ಕುರಿತ ಚರ್ಚೆಗೆ ಹಾಗೂ ವಿವಿಧ ವಿಚಾರಗಳ ಬಗ್ಗೆಯೂ ಮಾತುಕತೆ ನಡೆದಿದೆ. ಇದಕ್ಕೂ ಮೊದಲು 14 ಪಕ್ಷದ ನಾಯಕರು ಸಹ ದೆಹಲಿಯಲ್ಲಿ ಸಭೆ ನಡೆಸಿ ಒಗ್ಗಟ್ಟು ಪ್ರದರ್ಶನಕ್ಕೆ ಮುಂದಾಗಿದ್ದರು.

ಇಂದು ನಡೆಯುತ್ತಿದ್ದ ರಾಜ್ಯಸಭೆ ಕಲಾಪವು ಸಹ ಗದ್ದಲ ಹಿನ್ನೆಲೆ ಮಧ್ಯಾಹ್ನ 12ಕ್ಕೆ ಮುಂದೂಡಲ್ಪಟ್ಟಿತ್ತು. ನಂತರ ಆರಂಭಗೊಂಡ ಕಲಾಪ ಮತ್ತೆ ಗಲಭೆ ಉಂಟಾದ ಹಿನ್ನೆಲೆ ಮತ್ತೆ 2.30ಕ್ಕೆ ಮುಂದೂಡಲ್ಪಿಟ್ಟಿತು.

ಆಗಸ್ಟ್ 3ಕ್ಕೆ ಬಿಜೆಪಿ ಸಂಸದೀಯ ಪಕ್ಷದ ಸಭೆ

ಇತ್ತ ವಿಪಕ್ಷಗಳು ಸಾಲು ಸಾಲು ಸಭೆ ನಡೆಸಿ ಕಲಾಪದಲ್ಲಿ ಆಡಳಿತ ಪಕ್ಷದ ವಿರುದ್ಧ ವಾಗ್ದಾಳಿ ಮುಂದಾಗಿದ್ದು, ಸಂಸದೀಯ ಸಭೆ ನಿಗದಿ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು, ಸುಗಮ ಕಲಾಪ ನಡೆಯಲು ವಿಪಕ್ಷಗಳು ಅಡ್ಡಿ ಮಾಡುತ್ತಿರುವ ಸಂಬಂಧ ಚರ್ಚೆ ನಡೆಯಲಿದೆ ಎನ್ನಲಾಗಿದೆ. ಇದಕ್ಕೂ ಮೊದಲು ಜುಲೈ 27ರಂದು ಪ್ರಧಾನಿ ಮೋದಿ ನೇತೃತ್ವದಲ್ಲಿ ಸಂಸದೀಯ ಸಭೆ ನಡೆದಿತ್ತು.

Last Updated : Jul 30, 2021, 1:20 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.