ETV Bharat / bharat

ಪ್ರೇಯಸಿಗಾಗಿ ಮಾರಣಾಂತಿಕ ಇಂಜೆಕ್ಷನ್ ನೀಡಿ ಪತ್ನಿ ಸಾಯಿಸಿದ ಪುರುಷ ನರ್ಸ್​!

ಆಸ್ಪತ್ರೆಯಲ್ಲಿ ಕೆಲಸ ಮಾಡುವ ಹುಡುಗಿಯೊಬ್ಬಳೊಂದಿಗೆ ಸ್ವಪ್ನಿಲ್​ನ ಪರಿಚಯವಾಗಿದೆ. ಪರಿಚಯ ಪ್ರೇಮಕ್ಕೆ ತಿರುಗಿದೆ. ಹೀಗಾಗಿ ಆತ ಮತ್ತೊಂದು ವಿವಾಹ ಮಾಡಿಕೊಳ್ಳುವ ಕನಸು ಕಾಣತೊಡಗಿದ್ದ. ಆದರೆ, ಇದಕ್ಕೆ ಮೊದಲ ಪತ್ನಿ ಅಡ್ಡಿಯಾಗುತ್ತಾಳೆ ಎಂದು ತಿಳಿದು ಅವಳನ್ನು ಕೊಲ್ಲುವ ಯೋಜನೆ ರೂಪಿಸಿದ್ದ.

ಪ್ರೇಯಸಿಗಾಗಿ ಮಾರಣಾಂತಿಕ ಇಂಜೆಕ್ಷನ್ ನೀಡಿ ಪತ್ನಿ ಸಾಯಿಸಿದ ಮೇಲ್ ನರ್ಸ್​!
Hospitals Brothers kill wife by harmful injection to marry Nurse
author img

By

Published : Nov 23, 2022, 5:53 PM IST

ಪುಣೆ (ಮಹಾರಾಷ್ಟ್ರ): ಪ್ರೇಯಸಿ ಜೊತೆ ಮದುವೆಯಾಗುವ ಸಲುವಾಗಿ ಯಾವುದೋ ಇಂಜೆಕ್ಷನ್ ಕೊಟ್ಟು ಪತಿಯೇ ಸಾಯಿಸಿದ ಘಟನೆ ಪುಣೆ ಬಳಿ ನಡೆದಿದೆ. ಪತ್ನಿಯೊಂದಿಗೆ ಪ್ರೇಮ ವಿವಾಹವಾಗಿದ್ದರೂ ಇತ್ತೀಚೆಗೆ ಪರಿಚಯವಾದ ಇನ್ನೊಬ್ಬಳೊಂದಿಗೆ ಮದುವೆಯಾಗುವ ಆಸೆಯಿಂದ ಪುರುಷ ನರ್ಸ್​ ಆಗಿದ್ದ ವ್ಯಕ್ತಿಯೊಬ್ಬ ಈ ದುಷ್ಕೃತ್ಯ ಎಸಗಿದ್ದಾನೆ.

ಪ್ರಕರಣದ ವಿವರ: ಮುಳಶಿ ತಾಲೂಕಿನ ಘೋಟಾವಡೆ ಪಾಟಾ ಪ್ರದೇಶದಲ್ಲಿನ ಆಸ್ಪತ್ರೆಯೊಂದರಲ್ಲಿ ಪುರುಷ ನರ್ಸ್ ಆಗಿ ಕೆಲಸ ಮಾಡುವ ಸ್ವಪ್ನಿಲ್ ವಿಭೀಷಣ ಸಾವಂತ (23 ವರ್ಷ, ಬೀಡ ಜಿಲ್ಲೆ ಆಷ್ಟಿ ತಾಲೂಕು ಸಾಂಗವಿ ನಿವಾಸಿ) ಎಂಬಾತನ ವಿವಾಹ ಪ್ರಿಯಾಂಕಾ ಕ್ಷೇತ್ರೆ (22)ಳೊಂದಿಗೆ ನಡೆದಿತ್ತು. 5 ತಿಂಗಳ ಹಿಂದೆ ಕಾಸಾರ ಅಂಬೋಲಿಗೆ ಬಂದಿದ್ದ ಅವರು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.

ನಂತರ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಹುಡುಗಿಯೊಬ್ಬಳೊಂದಿಗೆ ಸ್ವಪ್ನಿಲ್​ನ ಪರಿಚಯವಾಗಿದೆ. ಪರಿಚಯ ಪ್ರೇಮಕ್ಕೆ ತಿರುಗಿದೆ. ಹೀಗಾಗಿ ಆತ ಮತ್ತೊಂದು ವಿವಾಹ ಮಾಡಿಕೊಳ್ಳುವ ಕನಸು ಕಾಣತೊಡಗಿದ್ದ. ಆದರೆ, ಇದಕ್ಕೆ ಮೊದಲ ಪತ್ನಿ ಅಡ್ಡಿಯಾಗುತ್ತಾಳೆ ಎಂದು ತಿಳಿದು ಅವಳನ್ನು ಕೊಲ್ಲುವ ಯೋಜನೆ ರೂಪಿಸಿದ್ದ.

ಇದನ್ನು ಓದಿ:'ಅಫ್ತಾಬ್ ನನ್ನ ಕೊಲೆ ಮಾಡ್ತಾನೆ, ಕಾಪಾಡಿ..' 2020ರಲ್ಲಿ ಶ್ರದ್ಧಾ ಬರೆದ ಪತ್ರ ಇಲ್ಲಿದೆ ನೋಡಿ

ಇದಕ್ಕಾಗಿ ಆತ ತಾನು ಕೆಲಸ ಮಾಡುವ ಆಸ್ಪತ್ರೆಯಲ್ಲಿನ ಮಾರಣಾಂತಿಕ ಔಷಧ, ಇಂಜೆಕ್ಷನ್​ಗಳನ್ನು ಮನೆಗೆ ತೆಗೆದುಕೊಂಡು ಹೋಗುತ್ತಿದ್ದ. ಪತ್ನಿಗೆ ಬಿಪಿ, ಶುಗರ್ ಕಡಿಮೆ ಮಾಡುವ ಔಷಧ ಇಂಜೆಕ್ಷನ್ ನೀಡುವ ವೇಳೆ ಮಧ್ಯದಲ್ಲಿ ಪ್ರಾಣಾಂತಿಕ ಇಂಜೆಕ್ಷನ್​ಗಳನ್ನು ಕೂಡ ಅವಳಿಗೆ ನೀಡಿ ಆಕೆಯನ್ನು ಕೊಲೆ ಮಾಡಿದ್ದಾನೆ.

ಇದನ್ನು ಓದಿ: ಪತಿಯ ಅಕ್ರಮ ಸಂಬಂಧ: ಮದುವೆಯಾದ 11 ತಿಂಗಳಿಗೆ ಪತ್ನಿ ಆತ್ಮಹತ್ಯೆ

ನಂತರ ಆಕೆಯನ್ನು ಘೋಟಾವಡೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾನೆ. ಅಲ್ಲಿನ ವೈದ್ಯರು ಅವಳನ್ನು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದ್ದಾರೆ. ಈ ಸಂದರ್ಭದಲ್ಲಿ ವೈದ್ಯರು ಈ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾರೆ. ಆದರೆ, ಇದಕ್ಕೆ ಮುನ್ನವೇ ಪ್ರಿಯಾಂಕಾ ಮನೆಯವರು ಸ್ವಪ್ನಿಲ್ ವಿರುದ್ಧ ಪತ್ನಿಗೆ ಮಾನಸಿಕ ಹಿಂಸೆ ನೀಡಿದ ಬಗ್ಗೆ ಪೊಲೀಸರಲ್ಲಿ ದೂರು ದಾಖಲಿಸಿದ್ದರು. ಹೀಗಾಗಿ ಪೊಲೀಸ್ ವಿಚಾರಣೆಯಲ್ಲಿ ಸ್ವಪ್ನಿಲ್​ನೇ ಪತ್ನಿಯನ್ನು ಕೊಲೆ ಮಾಡಿರುವ ವಿಚಾರ ಬಹಿರಂಗವಾಗಿದೆ.

ಪೌಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರೆದಿದೆ.

ಇದನ್ನು ಓದಿ:ಪ್ರೀತಿಸಲು ನಿರಾಕರಿಸಿದ ಯುವತಿ: ಮನೆಗೆ ನುಗ್ಗಿ ಹತ್ಯೆ ಮಾಡಿದ ಯುವಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.