ETV Bharat / bharat

ಮಗನನ್ನು ಸ್ವಾಗತಿಸಲು ಮಾಜಿ ಪತಿಯೊಂದಿಗೆ ಏರ್​ಪೋರ್ಟ್​​ಗೆ​​ ಬಂದ ಮಲೈಕಾ..! ಹೇಗಿತ್ತು ಗೊತ್ತಾ ಆ ಭಾವನೆ?

author img

By

Published : Dec 11, 2021, 4:04 PM IST

Updated : Dec 11, 2021, 5:50 PM IST

ವಿದೇಶದಿಂದ ಬಂದ ಮಗನನ್ನು ಬರಮಾಡಿಕೊಳ್ಳಲು ಮಾಜಿ ಪತಿಯೊಂದಿಗೆ ಮಲೈಕಾ ಅರೋರಾ ತೆರಳಿದ್ದ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಬಹಳ ದಿನಗಳ ನಂತರ ಮಗನನ್ನು ಕಂಡು ಬಾಲಿವುಡ್​ ನಟಿ ಮಲೈಕಾ, ಬಿಗಿದಪ್ಪಿಕೊಂಡು ಭಾವುಕರಾದರು.

malaika-arora-and-arbaaz-khan-spotted-together
ಮಲೈಕಾ ಅರೋರಾ

ಮುಂಬೈ : ಬಾಲಿವುಡ್​ ಡಿವಾ ಮಲೈಕಾ ಅರೋರಾ ಮತ್ತೆ ಮಾಜಿ ಪತಿ ನಟ, ನಿರ್ದೇಶಕ ಅರ್ಬಾಜ್ ಖಾನ್ ಜೊತೆ ಮುಂಬೈ ಏರ್​​ಪೋರ್ಟ್​ನಲ್ಲಿ ಕಾಣಿಸಿಕೊಂಡರು. ವಿದೇಶದಿಂದ ಬಂದ ಮಗನನ್ನು ಸ್ವಾಗತಿಸಲು ಮಾಜಿ ಪತಿ ಜೊತೆ ಮಲೈಕಾ ವಿಮಾನ ನಿಲ್ದಾಣಕ್ಕೆ ಹೋಗಿದ್ದರು.

ಮಗನನ್ನು ಸ್ವಾಗತಿಸಲು ಮಾಜಿ ಪತಿಯೊಂದಿಗೆ ಏರ್​ಪೋರ್ಟ್​​ ಬಂದ ಮಲೈಕಾ

ಮಲೈಕಾ ಅರೋರಾ ವಿಡಿಯೋ: ವಿದ್ಯಾಭ್ಯಾಸ ಮಾಡಲು ವಿದೇಶಕ್ಕೆ ಹೋಗಿದ್ದ ಮಲೈಕಾ-ಅರ್ಬಾಜ್​ ಖಾನ್​ ಮಗ ಅರ್ಹನ್​ ಖಾನ್ ಶುಕ್ರವಾರ ಸ್ವದೇಶಕ್ಕೆ​ ಮರಳಿದರು. ಈ ಸಂದರ್ಭದಲ್ಲಿ ಇಬ್ಬರೂ ಏರ್​ಪೋರ್ಟ್​​ಗೆ ತೆರಳಿ ಮಗನನ್ನು ಸ್ವಾಗತಿಸಿಕೊಂಡಿದ್ದಾರೆ. ಮಗನನ್ನು ಕಂಡ ಮಲೈಕಾ ಬಿಗಿಯಾಗಿ ಅಪ್ಪಿಕೊಂಡು ಮಗನಿಗೆ ಸ್ವಾಗತ ಕೋರಿದರು. ಸದ್ಯ ಮಗನ ಭೇಟಿಯ ವಿಡಿಯೋ ಮತ್ತು ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ.

Malaika Arora : 2016 ರಲ್ಲಿ ಅರ್ಬಾಜ್​​ ಖಾನ್,​ ಮಲೈಕಾ ತಮ್ಮ 19 ವರ್ಷದ ವಿವಾಹ ಜೀವನಕ್ಕೆ ಗುಡ್​ಬೈ ಹೇಳಿದ್ದರು. ಅದಾದ ನಂತರ 2021ರಲ್ಲಿ ಅರ್ಹನ್​ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ತೆರಳಿದ್ದರು. ಅಂದು ಸಹ ಮಗನನ್ನು ನೆನೆದು ಮಲೈಕಾ ಪ್ರೀತಿಯ ವಿದಾಯದ ಸಂದೇಶ ಹಂಚಿಕೊಂಡಿದ್ದರು. ಮಗನ ಹುಟ್ಟುಹಬ್ಬಕ್ಕೂ ಇಬ್ಬರ ಜೊತೆಗಿನ ಫೋಟೋ ಒಂದನ್ನ ಶೇರ್​ ಮಾಡಿ, 'ಮೈ ಬರ್ತ್​ಡೇ ಬಾಯ್​, ಮಿಸ್​ ಯು ಲಾಟ್​' ಅಂತ ಬರೆದುಕೊಂಡಿದ್ದರು. ಇದನ್ನು ಮಲೈಕಾ ಸಹೋದರಿ ಅಮೃತಾ ಅರೋರಾ ಸಹ ಶೇರ್​ ಮಾಡಿಕೊಂಡಿದ್ದರು.

Last Updated : Dec 11, 2021, 5:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.