ETV Bharat / bharat

ಭಕ್ತರ ಹೊತ್ತು ಸಾಗುತ್ತಿದ್ದ ಟ್ರಕ್ ಅಪಘಾತ: ಇಬ್ಬರ ದುರ್ಮರಣ, 30 ಮಂದಿಗೆ ಗಾಯ - ಹಿಮಾಚಲ ಪ್ರದೇಶದಲ್ಲಿ ಟ್ರಕ್ ಅಪಘಾತ

ಜಾತ್ರೆ ಮುಗಿಸಿ ಊರಿಗೆ ತೆರಳುತ್ತಿದ್ದ ವೇಳೆ ಭಕ್ತರ ಹೊತ್ತು ಸಾಗುತ್ತಿದ್ದ ಟ್ರಕ್​ವೊಂದು ಅಪಘಾತಕ್ಕೀಡಾಗಿದ್ದು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

major road accident in una
major road accident in una
author img

By

Published : Mar 21, 2022, 6:40 PM IST

ಉನಾ(ಹಿಮಾಚಲ ಪ್ರದೇಶ): ಹಿಮಾಚಲ ಪ್ರದೇಶದಲ್ಲಿ ನಡೆದ ಹೋಲಾ ಮೊಹಲ್ಲಾದಲ್ಲಿ ಭಾಗಿಯಾಗಿ ಮನೆಗೆ ತೆರಳುತ್ತಿದ್ದ ವೇಳೆ ಟ್ರಕ್​​ವೊಂದು ಅಪಘಾತಕ್ಕೀಡಾಗಿದೆ. ಪರಿಣಾಮ ಸ್ಥಳದಲ್ಲೇ ಇಬ್ಬರು ಭಕ್ತರು ದುರ್ಮರಣಕ್ಕೀಡಾಗಿದ್ದು, 30 ಮಂದಿ ಗಾಯಗೊಂಡಿದ್ದಾರೆ.

ಉನಾ ಜಿಲ್ಲೆಯ ಪಂಜೋವಾ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದೆ. ಎಲ್ಲ ಭಕ್ತಾಧಿಗಳು ಪಂಜಾಬ್​​ನವರು ಎಂದು ತಿಳಿದು ಬಂದಿದೆ. ಮೃತರಲ್ಲಿ ಓರ್ವ ಮಹಿಳಾ ಯಾತ್ರಾರ್ಥಿ ಸೇರಿಕೊಂಡಿದ್ದಾರೆ. ಗಾಯಗೊಂಡಿರುವ ಎಲ್ಲರೂ ಸಿವಿಲ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: 'ದಿ ಕಾಶ್ಮೀರಿ ಫೈಲ್ಸ್​'​ ಯಾರಿಗೆ ಬೇಕು? ವೋಟ್‌ಬ್ಯಾಂಕ್‌ಗೋಸ್ಕರ ರಾಜಕಾರಣ: ಕೆಸಿಆರ್‌

ಘಟನಾ ಸ್ಥಳಕ್ಕೆ ಉನಾ ಜಿಲ್ಲಾಧಿಕಾರಿ ರಾಘವ ಶರ್ಮಾ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದರು. ಈ ವೇಳೆ ಮಾತನಾಡಿರುವ ಅವರು, ಜಾತ್ರಾ ಸ್ಥಳಕ್ಕೆ ಲಾರಿ ಮತ್ತು ಟ್ರಕ್​​ಗಳಲ್ಲಿ ಬಾರದಂತೆ ಈಗಾಗಲೇ ಸೂಚನೆ ಹೊರಡಿಸಲಾಗಿತ್ತು. ಆದರೆ, ನಿಯಮಗಳ ಉಲ್ಲಂಘನೆ ಮಾಡಲಾಗಿದೆ ಎಂಬ ಮಾಹಿತಿ ನೀಡಿದ್ದಾರೆ. ಅಪಘಾತದಲ್ಲಿ ಸಾವನ್ನಪ್ಪಿರುವವರನ್ನು ಜಗತಾರ್ ಸಿಂಗ್​, ರಾಜ್​ ಕೌರ್​​ ಎಂದು ಗುರುತಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.