ETV Bharat / bharat

ಗಾಂಧಿ ಮಹಾಪುರುಷ, ಮೋದಿ ಯುಗಪುರುಷ: ಉಪರಾಷ್ಟ್ರಪತಿ ಧನಕರ್ ಬಣ್ಣನೆ, ಪ್ರತಿಪಕ್ಷಗಳ ಟೀಕೆ

author img

By PTI

Published : Nov 28, 2023, 12:08 PM IST

Vice President of India Dhankhar praises Modi: ಮಹಾತ್ಮಾ ಗಾಂಧಿ ಮಹಾಪುರುಷ, ನರೇಂದ್ರ ಮೋದಿ ಯುಗಪುರುಷ ಎಂದು ಉಪರಾಷ್ಟ್ರಪತಿ ಜಗದೀಪ್ ಧನಕರ್ ಹೇಳಿಕೆ ನೀಡಿದ್ದು, ಇದನ್ನು ಪ್ರತಿಪಕ್ಷಗಳು ಟೀಕಿಸಿವೆ.

Vice President Jagdeep Dhankhar
ಮಹಾತ್ಮಾ ಗಾಂಧಿ ಮಹಾಪುರುಷ, ನರೇಂದ್ರ ಮೋದಿ ಯುಗಪುರುಷ: ಉಪರಾಷ್ಟ್ರಪತಿ ಧನಕರ್

ಮುಂಬೈ(ಮಹಾರಾಷ್ಟ್ರ): ಮಹಾತ್ಮಾ ಗಾಂಧಿ ಅವರು ಕಳೆದ ಶತಮಾನದ ಮಹಾಪುರುಷ. ಪ್ರಧಾನಿ ನರೇಂದ್ರ ಮೋದಿ ಈ ಶತಮಾನದ ಯುಗಪುರುಷ ಎಂದು ಉಪರಾಷ್ಟ್ರಪತಿ ಜಗದೀಪ್ ಧನಕರ್ ಬಣ್ಣಿಸಿದ್ದಾರೆ. ಸೋಮವಾರ ಜೈನ ಧರ್ಮಗುರು ಹಾಗೂ ತತ್ವಜ್ಞಾನಿ ಶ್ರೀಮದ್ ರಾಜಚಂದ್ರಜೀ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ''ಗಾಂಧಿಯವರು ಸತ್ಯಾಗ್ರಹ ಮತ್ತು ಅಹಿಂಸೆಯ ಮೂಲಕ ನಮ್ಮನ್ನು ಬ್ರಿಟಿಷರ ಗುಲಾಮಗಿರಿಯಿಂದ ಮುಕ್ತಗೊಳಿಸಿದರು. ಭಾರತದ ಯಶಸ್ವಿ ಪ್ರಧಾನಿ ನರೇಂದ್ರ ಮೋದಿ ನಾವು ಬಯಸಿದ ಹಾದಿಯೆಡೆಗೆ ನಮ್ಮನ್ನು ಕೊಂಡೊಯ್ದಿದ್ದಾರೆ'' ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

1867ರಲ್ಲಿ ಗುಜರಾತ್‌ನಲ್ಲಿ ಜನಿಸಿದ ಮತ್ತು 1901ರಲ್ಲಿ ನಿಧನರಾದ ಶ್ರೀಮದ್ ರಾಜ್‌ಚಂದ್ರಜಿ ಅವರ ಭಿತ್ತಿಚಿತ್ರವನ್ನು ಧನಖರ್ ಬಿಡುಗಡೆಗೊಳಿಸಿದರು. ರಾಜ್‌ಚಂದ್ರಜಿ ಅವರ ಬೋಧನೆಗಳು ಇಂದಿಗೂ ಪ್ರಸ್ತುತ. ಗಾಂಧೀಜಿಯವರು ಸತ್ಯ ಮತ್ತು ಅಹಿಂಸಾತ್ಮಕ ಹೋರಾಟಗಳಿಂದ ಬ್ರಿಟಿಷರ ದಾಸ್ಯದಿಂದ ನಮ್ಮನ್ನು ಮುಕ್ತಗೊಳಿಸಿದರು. ನಾವು ಯಾವಾಗಲೂ ನೋಡಬಯಸುವ ಪ್ರಗತಿಯ ಪಥದಲ್ಲಿ ಪ್ರಧಾನಿ ಮೋದಿ ನಮ್ಮನ್ನು ಮುನ್ನಡೆಸುತ್ತಿದ್ದಾರೆ. ಗಾಂಧಿ ಮತ್ತು ಮೋದಿ ಇಬ್ಬರೂ ಶ್ರೀಮದ್ ರಾಜಚಂದ್ರಜಿಯವರ ಬೋಧನೆಗಳನ್ನು ಪ್ರತಿಬಿಂಬಿಸಿದ್ದಾರೆ ಎಂದು ಧನಕರ್ ಅಭಿಪ್ರಾಯಪಟ್ಟರು.

ಶ್ರೀಮದ್ ರಾಜಚಂದ್ರ ಮಿಷನ್ ಧರ್ಮಪುರ್ ಜಾಗತಿಕ ಆಂದೋಲನವಾಗಿದೆ. ಇದು ಅನ್ವೇಷಕರ ಆಧ್ಯಾತ್ಮಿಕ ಬೆಳವಣಿಗೆಯನ್ನು ಹೆಚ್ಚಿಸಲು ಹಾಗೂ ಸಮಾಜಕ್ಕೆ ಪ್ರಯೋಜನ ನೀಡಲು ಪ್ರಯತ್ನಿಸುತ್ತದೆ. ಗುಜರಾತ್‌ನ ಧರಮ್‌ಪುರದಲ್ಲಿ ಅದರ ಅಂತರರಾಷ್ಟ್ರೀಯ ಕೇಂದ್ರ ಕಚೇರಿಯೊಂದಿಗೆ, ಮಿಷನ್ ಹಲವಾರು ಸತ್ಸಂಗ ಕೇಂದ್ರಗಳು, ಶ್ರೀಮದ್ ರಾಜಚಂದ್ರ ಯೂತ್ ಗ್ರೂಪ್‌ಗಳು ಮತ್ತು ಶ್ರೀಮದ್ ರಾಜಚಂದ್ರ ಡಿವೈನ್ ಟಚ್ ಸೆಂಟರ್‌ಗಳಿವೆ. ಶ್ರೀಮದ್ ರಾಜ್‌ಚಂದ್ರಜಿ ಮತ್ತು ಮಹಾತ್ಮ ಗಾಂಧಿ 1891ರಲ್ಲಿ ಮುಂಬೈನಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದರು.

ಸೋಮವಾರ ಮುಂಬೈನಲ್ಲಿ ನಡೆದ ಈ ಸಮಾರಂಭದಲ್ಲಿ ಮಿಷನ್‌ನ ಗುರುದೇವಶ್ರೀ ರಾಕೇಶ್‌ಜಿ, ಸಮಾಜಕ್ಕೆ ನೀಡಿದ ಉನ್ನತ ಕೊಡುಗೆಗಳನ್ನು ಪರಿಗಣಿಸಿ ಉಪರಾಷ್ಟ್ರಪತಿ ಧನಕರ್​ ಅವರಿಗೆ 'ಜನಕಲ್ಯಾಣ ಹಿತೈಷಿ ಪ್ರಶಸ್ತಿ' ಪ್ರದಾನ ಮಾಡಿದರು.

ಇದೇ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರದ ಗಡ್‌ಚಿರೋಲಿ ಜಿಲ್ಲೆ ಮತ್ತು ರಾಜಸ್ಥಾನದ ಜುಂಜುನು ಜಿಲ್ಲೆಯಲ್ಲಿ ಎರಡು ಮೆಗಾ ಮಲ್ಟಿ ಸ್ಪೆಷಾಲಿಟಿ ವೈದ್ಯಕೀಯ ಶಿಬಿರಗಳನ್ನು ಆಯೋಜಿಸುವುದಾಗಿ ಶ್ರೀಮದ್ ರಾಜಚಂದ್ರ ಮಿಷನ್​ನಿಂದ ಘೋಷಣೆ ಮಾಡಲಾಯಿತು.

ಧನಕರ್​ ಹೇಳಿಕೆಗೆ ಪ್ರತಿಪಕ್ಷಗಳ ಟೀಕೆ: ಮಹಾತ್ಮಾ ಗಾಂಧಿ ಮತ್ತು ನರೇಂದ್ರ ಮೋದಿಯವರ ಕುರಿತು ಉಪರಾಷ್ಟ್ರಪತಿ ಧನಕರ್​ ಹೇಳಿಕೆಯನ್ನು ಪ್ರತಿಪಕ್ಷಗಳನ್ನು ಟೀಕಿಸಿವೆ. ಕಾಂಗ್ರೆಸ್ ನಾಯಕ ಮಾಣಿಕಂ ಟ್ಯಾಗೋರ್ ಪ್ರತಿಯಿಸಿ, ''ಗಾಂಧೀಜಿಯವರೊಂದಿಗೆ ನರೇಂದ್ರ ಮೋದಿ ಅವರನ್ನು ಹೋಲಿಕೆ ಮಾಡಿರುವುದು ಸರಿಯಲ್ಲ. ಹೋಲಿಕೆ ಮಾಡುವುದಕ್ಕೂ ಒಂದು ಮಿತಿ ಇದೆ. ನೀವು ಆ ಮಿತಿಯನ್ನು ದಾಟಿದ್ದೀರಿ'' ಎಂದು ಸಾಮಾಜಿಕ ಜಾಲತಾಣ ವೇದಿಕೆ ಎಕ್ಸ್​​ ಖಾತೆಯಲ್ಲಿ ಬರೆದಿದ್ದಾರೆ.

  • आज @VPIndia ने कहा कि पिछली शताब्दी के महापुरुष महात्मा गांधी थे, इस शताब्दी के युगपुरुष नरेंद्र मोदी हैं! मैं उपराष्ट्रपति जी से पूछना चाहूँगा की संसद में प्रधानमंत्री के ही दल के सांसद द्वारा एक समुदाय विशेष को अपशब्द इस्तेमाल करने की छूट दे कर किस नये युग की शुरुआत की गई है। https://t.co/wzKcgsHaTt

    — Kunwar Danish Ali (@KDanishAli) November 27, 2023 " class="align-text-top noRightClick twitterSection" data=" ">

ಪ್ರಶ್ನಿಸಿದ ಡ್ಯಾನಿಶ್ ಅಲಿ: ಬಹುಜನ ಸಮಾಜ ಪಕ್ಷದ ಸಂಸದ ಡ್ಯಾನಿಶ್ ಅಲಿ ಧನಕರ್​ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ''ಕಳೆದ ಶತಮಾನದ ಮಹಾನ್ ವ್ಯಕ್ತಿ ಮಹಾತ್ಮ ಗಾಂಧಿ, ಈ ಶತಮಾನದ ಮಹಾನ್ ವ್ಯಕ್ತಿ ನರೇಂದ್ರ ಮೋದಿ. ಪ್ರಧಾನಿಯವರ ಪಕ್ಷದ ಸಂಸದರು ನಿರ್ದಿಷ್ಟ ಸಮುದಾಯದ ವಿರುದ್ಧ ನಿಂದನೀಯ ಪದಗಳನ್ನು ಬಳಸಲು ಅವಕಾಶ ನೀಡುವ ಮೂಲಕ ಸಂಸತ್ತಿನಲ್ಲಿ ಯಾವ ಹೊಸ ಯುಗ ಪ್ರಾರಂಭಿಸಲಾಗಿದೆ? ಎಂದು ನಾನು ಉಪರಾಷ್ಟ್ರಪತಿಯನ್ನು ಕೇಳ ಬಯಸುತ್ತೇನೆ ಎಂದು ಎಕ್ಸ್​​ ಖಾತೆಯಲ್ಲಿ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಕೈಕೊಟ್ಟ ಯಂತ್ರ; ಮನುಷ್ಯ ಸಾಮರ್ಥ್ಯದಿಂದಲೇ ಸುರಂಗ ಕೊರೆಯುವ ಕೆಲಸ ಶುರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.