ETV Bharat / bharat

ಬ್ಯಾಂಕಿಂಗ್,​ ಸೈಬರ್​ ವಂಚನೆ ಕೇಸ್​​ಗಳಲ್ಲಿ ಮಹಾರಾಷ್ಟ್ರ, ತಮಿಳುನಾಡು, ದೆಹಲಿಗೆ ಅಗ್ರಸ್ಥಾನ..

author img

By

Published : Mar 14, 2022, 10:32 PM IST

cyber fraud cases: ಪ್ರತಿದಿನ ಹತ್ತಾರು ಸೈಬರ್ ಕ್ರೈಂ ಪ್ರಕರಣ ದಾಖಲಾಗ್ತಿದ್ದು, 2021ರಲ್ಲಿ ಕರ್ನಾಟಕದಲ್ಲಿ 2,397 ವಂಚನೆ ಕೇಸ್​​ಗಳು ದಾಖಲಾಗಿರುವುದಾಗಿ ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಾಹಿತಿ ಹಂಚಿಕೊಂಡಿದೆ.

cyber fraud cases
cyber fraud cases

ನವದೆಹಲಿ: ಭಾರತೀಯ ರಿಸರ್ವ್​ ಬ್ಯಾಂಕ್​ ಆಫ್​ ಇಂಡಿಯಾ ಡೇಟಾ ಉಲ್ಲೇಖ ಮಾಡಿ ಕೇಂದ್ರ ಹಣಕಾಸು ಸಚಿವಾಲಯದ ರಾಜ್ಯ ಸಚಿವ ಲೋಕಸಭೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಬ್ಯಾಂಕಿಂಗ್,​ ಸೈಬರ್​​ ವಂಚನೆಗಳಲ್ಲಿ ಮಹಾರಾಷ್ಟ್ರ, ತಮಿಳುನಾಡು, ದೆಹಲಿ ಅಗ್ರಸ್ಥಾನದಲ್ಲಿವೆ ಎಂದು ತಿಳಿಸಿದ್ದಾರೆ.

ಬ್ಯಾಂಕಿಂಗ್​​ ಕ್ಷೇತ್ರದ ಎಟಿಎಂನ ಡೆಬಿಟ್​​, ಕ್ರೆಡಿಟ್​ ಕಾರ್ಡ್​ ಸೇರಿದಂತೆ 2021ರಲ್ಲಿ(ಏಪ್ರಿಲ್​​-ಡಿಸೆಂಬರ್​) ಸುಮಾರು 50,242 ಪ್ರಕರಣಗಳು ದಾಖಲಾಗಿದ್ದು, ಕೇವಲ 9 ತಿಂಗಳಲ್ಲಿ ಗ್ರಾಹಕರು ಸುಮಾರು 167 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆಂಬ ಮಾಹಿತಿ ನೀಡಿದ್ದಾರೆ.

ಪ್ರಮುಖವಾಗಿ ಮಹಾರಾಷ್ಟ್ರ, ತಮಿಳುನಾಡು ಹಾಗೂ ದೆಹಲಿಯಲ್ಲಿ ಹೆಚ್ಚಿನ ವಂಚನೆ ಪ್ರಕರಣ ದಾಖಲಾಗಿದ್ದಾಗಿ ಹಣಕಾಸು ಖಾತೆ ರಾಜ್ಯ ಸಚಿವ ಭಾಗವತ್ ಕರದ್​ ಲೋಕಸಭೆಯಲ್ಲಿ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿರಿ: ಕೊಟ್ಟ ಮಾತು ಉಳಿಸಿಕೊಳ್ಳಲು ಮುಂದಾದ ಬಿಜೆಪಿ.. ಹೋಳಿ ನಂತರ ಉಚಿತ ಸಿಲಿಂಡರ್?​

ಮಹಾರಾಷ್ಟ್ರದಲ್ಲಿ ಶೇ. 40ರಷ್ಟು ಪ್ರಕರಣ ದಾಖಲಾಗಿದ್ದು, ಹೆಚ್ಚಿನ ವಂಚನೆ ಪ್ರಕರಣಗಳು ಇಲ್ಲಿ ನಡೆದಿವೆ. 19,671 ಸೈಬರ್ ಮತ್ತು ಬ್ಯಾಂಕಿಂಗ್ ವಂಚನೆ ಪ್ರಕರಣಗಳು ಇಲ್ಲಿ ವರದಿಯಾಗಿದ್ದು, ತಮಿಳುನಾಡಿನಲ್ಲಿ 5,292 ಪ್ರಕರಣಗಳು ಹಾಗೂ ದೆಹಲಿಯಲ್ಲಿ 5,001 ಕೇಸ್​​ಗಳು ದಾಖಲಾಗಿವೆ.

ಉಳಿದಂತೆ ಹರಿಯಾಣದಲ್ಲಿ 4,638 ಬ್ಯಾಂಕಿಂಗ್​ ಸೈಬರ್ ಪ್ರಕರಣ, ಉತ್ತರ ಪ್ರದೇಶದಲ್ಲಿ 3,082, ಕರ್ನಾಟಕದಲ್ಲಿ 2,397, ಗುಜರಾತ್​​ನಲ್ಲಿ 2,281, ತೆಲಂಗಾಣದಲ್ಲಿ 1,558 ವಂಚನೆ ಪ್ರಕರಣ ದಾಖಲಾಗಿದ್ದು, ಉಳಿದಂತೆ ಆಂಧ್ರಪ್ರದೇಶ, ಪಶ್ಚಿಮ ಬಂಗಾಳ, ಬಿಹಾರ, ಉತ್ತರಾಖಂಡ, ಪಂಜಾಬ್ ಮತ್ತು ಒಡಿಶಾ ಸೇರಿದಂತೆ ಇತರೆ ರಾಜ್ಯಗಳಲ್ಲಿ ಸಾವಿರಕ್ಕಿಂತಲೂ ಕಡಿಮೆ ಪ್ರಕರಣ ದಾಖಲಾಗಿವೆ. ಸೈಬರ್​ ಕ್ರೈಂ ಮತ್ತು ಬ್ಯಾಂಕಿಂಗ್​ ವಂಚನೆಯಿಂದ ದೇಶದ ಯಾವುದೇ ರಾಜ್ಯ ಸುರಕ್ಷಿತವಾಗಿಲ್ಲ ಎಂದು ಡೇಟಾದಿಂದ ತಿಳಿದು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.