ಮುಂಬೈ: ಮಹಾರಾಷ್ಟ್ರದಲ್ಲಿ ಮಹಾಮಾರಿ ಕೋವಿಡ್ನ ಎರಡನೇ ಅಲೆ ಜೋರಾಗಿದ್ದು, ಈ ಹಿಂದಿಗಿಂತಲೂ ಸೋಂಕಿತ ಪ್ರಕರಣಗಳ ಸಂಖ್ಯೆ ಇವತ್ತು ಹೆಚ್ಚಾಗಿ ದಾಖಲಾಗಿವೆ. ಕಳೆದ 24 ಗಂಟೆಯಲ್ಲಿ ಬರೋಬ್ಬರಿ 27,126 ಕೇಸ್ ದಾಖಲಾಗಿದ್ದು, 92 ಜನರು ಸಾವನ್ನಪ್ಪಿದ್ದಾರೆ. ಇದರ ಜತೆಗೆ 13,588 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.
-
Punjab reports 2587 new #COVID19 cases, 1011 recoveries and 38 deaths in the last 24 hours.
— ANI (@ANI) March 20, 2021 " class="align-text-top noRightClick twitterSection" data="
Total cases 2,10,466
Total recoveries 1,87,198
Death toll 6,280
Active cases 16,988 pic.twitter.com/toCEdqH11C
">Punjab reports 2587 new #COVID19 cases, 1011 recoveries and 38 deaths in the last 24 hours.
— ANI (@ANI) March 20, 2021
Total cases 2,10,466
Total recoveries 1,87,198
Death toll 6,280
Active cases 16,988 pic.twitter.com/toCEdqH11CPunjab reports 2587 new #COVID19 cases, 1011 recoveries and 38 deaths in the last 24 hours.
— ANI (@ANI) March 20, 2021
Total cases 2,10,466
Total recoveries 1,87,198
Death toll 6,280
Active cases 16,988 pic.twitter.com/toCEdqH11C
ರಾಜ್ಯದಲ್ಲಿ ಇಲ್ಲಿಯವರೆಗೆ 24,49,147 ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಇದರಲ್ಲಿ 22,03,553 ಜನರು ಗುಣಮುಖರಾಗಿದ್ದು, 53,300 ಜನರು ಸಾವನ್ನಪ್ಪಿದ್ದಾರೆ. ಸದ್ಯ 1,91,006 ಆ್ಯಕ್ಟಿವ್ ಪ್ರಕರಣಗಳಿವೆ. ಲಾಕ್ಡೌನ್ ಆಗಿರುವ ನಾಗ್ಪುರದಲ್ಲೇ 3679 ಕೇಸ್ ಪತ್ತೆಯಾಗಿದ್ದು, 29 ಜನರು ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಕೊರೊನಾ ಅಬ್ಬರ.. ಸಚಿವ ಆದಿತ್ಯ ಠಾಕ್ರೆಗೂ ತಗುಲಿದ ಸೋಂಕು!
ಕಳೆದ ಕೆಲ ದಿನಗಳಿಂದ ಮಹಾರಾಷ್ಟ್ರದಲ್ಲಿ ಕೋವಿಡ್ ಸೋಂಕಿತ ಪ್ರಕರಣ ಹೆಚ್ಚಾಗಿರುವ ಕಾರಣ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ನಾಗ್ಪುರದಲ್ಲಿ ಮಾರ್ಚ್ 31ರವರೆಗೆ ಲಾಕ್ಡೌನ್ ಹೇರಿಕೆ ಮಾಡಲಾಗಿದೆ. ಪುಣೆಯಲ್ಲಿ ಕರ್ಫ್ಯೂ ವಿಧಿಸಲಾಗಿದ್ದು, ವಾಣಿಜ್ಯ ನಗರಿ ಮುಂಬೈನಲ್ಲೂ ಕೆಲವೊಂದು ಮಹತ್ವದ ಮಾರ್ಗಸೂಚಿ ಕೈಗೊಳ್ಳಲಾಗಿದೆ.
ಉಳಿದಂತೆ ಪಂಜಾಬ್ನಲ್ಲಿ 2587 ಪ್ರಕರಣ, ಕೇರಳದಲ್ಲಿ 2078 ಕೇಸ್, ತಮಿಳುನಾಡಿನಲ್ಲಿ 1,243 ಹೊಸ ಸೋಂಕಿತ ಪ್ರಕರಣ ದಾಖಲಾಗಿವೆ.