ETV Bharat / bharat

ರತ್ನಗಿರಿಯಲ್ಲಿ ಭೂಕಂಪ: ರಿಕ್ಟರ್ ಮಾಪಕದಲ್ಲಿ 4 ತೀವ್ರತೆ ದಾಖಲು

ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯಲ್ಲಿ ಇಂದು ನಸುಕಿನ ಜಾವ 2.36 ಕ್ಕೆ ಭೂಮಿ ಕಂಪಿಸಿದೆ. ಸರಿ ಸುಮಾರು 5 ಕಿ.ಮೀ. ದೂರದವರೆಗೆ ಭೂಕಂಪನದ ಅನುಭವವಾಗಿದೆ ಎಂದು ರಾಷ್ಟ್ರೀಯ ಭೂಕಂಪ ಮಾಪನ ಕೇಂದ್ರದ ಮುಖ್ಯಸ್ಥ ಜೆ.ಎಲ್ ಗೌತಮ್ ತಿಳಿಸಿದ್ದಾರೆ.

Ratnagiri
Ratnagiri
author img

By

Published : Nov 15, 2021, 8:53 AM IST

ಮುಂಬೈ: ಮಹಾರಾಷ್ಟ್ರದ ಕರಾವಳಿ ರತ್ನಗಿರಿಯಲ್ಲಿ ಇಂದು ಮುಂಜಾನೆ ಭೂಕಂಪ ಸಂಭವಿಸಿದೆ. 4 ತೀವ್ರತೆಯ ಭೂಕಂಪನ (Earthquake) ಉಂಟಾಗಿರುವ ಬಗ್ಗೆ ರಿಕ್ಟರ್ ಮಾಪಕದಲ್ಲಿ (Richter scale) ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪ ಮಾಪನ ಕೇಂದ್ರದ (National Centre for Seismology ) ಅಧಿಕಾರಿಗಳು ತಿಳಿಸಿದ್ದಾರೆ.

ಮುಂಬೈನಿಂದ ಸುಮಾರು 350 ಕಿಮೀ ದೂರದಲ್ಲಿರುವ ರತ್ನಗಿರಿ ಜಿಲ್ಲೆಯಲ್ಲಿ ನಸುಕಿನ ಜಾವ 2.36 ಕ್ಕೆ ಮಧ್ಯಮ ತೀವ್ರತೆಯ ಭೂಕಂಪನವಾಗಿದೆ (Medium-intensity quake). ಸರಿ ಸುಮಾರು 5 ಕಿ.ಮೀ. ದೂರದವರೆಗೆ ಭೂಮಿ ಕಂಪಿಸಿದೆ ಎಂದು ಎನ್‌ಸಿಎಸ್‌ ಮುಖ್ಯಸ್ಥ ಜೆ.ಎಲ್ ಗೌತಮ್ ತಿಳಿಸಿದ್ದಾರೆ.

ಕಂಪನದಿಂದಾಗಿ ಈ ವರೆಗೆ ಯಾವುದೇ ಸಾವು - ನೋವು ಸಂಭವಿಸಿದ ಕುರಿತು ವರದಿಯಾಗಿಲ್ಲ. ರಿಕ್ಟರ್ ಮಾಪಕದಲ್ಲಿ 4 ತೀವ್ರತೆ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪ ಮಾಪನ ಕೇಂದ್ರ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.