ಮುಂಬೈ: ನೆರೆಯ ರಾಜ್ಯ ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗುತ್ತಿರುವ ಕಾರಣ ಸಿಎಂ ಉದ್ಧವ್ ಠಾಕ್ರೆ ಅಲ್ಲಿನ ಜನರನ್ನುದ್ದೇಶಿಸಿ ಮಹತ್ವದ ಭಾಷಣ ಮಾಡಿದ್ದು, ರಾಜ್ಯದಲ್ಲಿ ಲಾಕ್ಡೌನ್ ಹೇರಿಕೆ ಮಾಡಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
-
We are imposing strict restrictions which will come into effect from 8 pm tomorrow. Section 144 to be imposed in the entire state from tomorrow. I will not term this as lockdown: Maharashtra CM Uddhav Thackeray pic.twitter.com/SUMMjtnBRR
— ANI (@ANI) April 13, 2021 " class="align-text-top noRightClick twitterSection" data="
">We are imposing strict restrictions which will come into effect from 8 pm tomorrow. Section 144 to be imposed in the entire state from tomorrow. I will not term this as lockdown: Maharashtra CM Uddhav Thackeray pic.twitter.com/SUMMjtnBRR
— ANI (@ANI) April 13, 2021We are imposing strict restrictions which will come into effect from 8 pm tomorrow. Section 144 to be imposed in the entire state from tomorrow. I will not term this as lockdown: Maharashtra CM Uddhav Thackeray pic.twitter.com/SUMMjtnBRR
— ANI (@ANI) April 13, 2021
ನಾಳೆ ಸಂಜೆಯಿಂದ ಮುಂದಿನ 15 ದಿನಗಳ ಕಾಲ ರಾಜ್ಯಾದ್ಯಂತ ಸೆಕ್ಷನ್ 144 ಜಾರಿಗೊಳಿಸಲು ನಿರ್ಧರಿಸಲಾಗಿದ್ದು, ಲಾಕ್ಡೌನ್ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಜತೆಗೆ ರಾಜ್ಯದಲ್ಲಿ ನಾಳೆಯಿಂದ ಹೊಸ ನಿರ್ಬಂಧ ಜಾರಿಗೊಳಿಸುವುದಾಗಿ ಹೇಳಿದ್ದು, ಮತ್ತಷ್ಟು ಕಠಿಣ ಮಾರ್ಗಸೂಚಿ ಬಿಡುಗಡೆ ಮಾಡಲಾಗುವುದು ಎಂದಿದ್ದಾರೆ.
ಬ್ರೇಕ್ ದ ಚೈನ್ ಅಭಿಯಾನಕ್ಕೆ ಚಾಲನೆ ದೊರೆಯಲಿದ್ದು, ಮುಂದಿನ 15 ದಿನಗಳ ಕಾಲ ಅನಗತ್ಯ ಸಂಚಾರಕ್ಕೆ ಬ್ರೇಕ್ ಬೀಳಲಿದೆ. ಇದರ ಜತೆಗೆ ರಾಜ್ಯದಲ್ಲಿ ಆಮ್ಲಜನಕ ಮತ್ತು ಔಷಧಿ ಕೊರತೆ ನಿಭಾಯಿಸಲು ಭಾರತೀಯ ಸೇನೆ ಸಹಾಯ ಕೋರಿದ್ದಾರೆ. ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಯಲ್ಲಿ ಬರೋಬ್ಬರಿ 60,212 ಕೋವಿಡ್ ಪ್ರಕರಣ ದಾಖಲಾಗಿವೆ ಎಂಬ ಮಾಹಿತಿ ಸಹ ಉದ್ಧವ್ ಠಾಕ್ರೆ ನೀಡಿದ್ದಾರೆ.
-
Local train and bus services for essential services only, petrol pumps, financial institutions associated with SEBI and construction work to continue, hotel/ restaurants to remain closed only take-away, home deliveries allowed: Maharashtra CM pic.twitter.com/QJkJlX4WTK
— ANI (@ANI) April 13, 2021 " class="align-text-top noRightClick twitterSection" data="
">Local train and bus services for essential services only, petrol pumps, financial institutions associated with SEBI and construction work to continue, hotel/ restaurants to remain closed only take-away, home deliveries allowed: Maharashtra CM pic.twitter.com/QJkJlX4WTK
— ANI (@ANI) April 13, 2021Local train and bus services for essential services only, petrol pumps, financial institutions associated with SEBI and construction work to continue, hotel/ restaurants to remain closed only take-away, home deliveries allowed: Maharashtra CM pic.twitter.com/QJkJlX4WTK
— ANI (@ANI) April 13, 2021
ಅಗತ್ಯ ಸೇವೆಗಳಿಗೆ ಮಾತ್ರ ಸ್ಥಳೀಯ ರೈಲು ಮತ್ತು ಬಸ್ ಸಂಚಾರ ಜಾರಿಯಲ್ಲಿರಲಿದ್ದು, ಪೆಟ್ರೋಲ್ ಪಂಪ್ ಹಾಗೂ ಹಣಕಾಸು ಸಂಸ್ಥೆಗಳ ಕಾರ್ಯ ಮುಂದುವರೆಯಲಿದೆ. ಹೋಟೆಲ್/ರೆಸ್ಟೋರೆಂಟ್ಗಳು ಮುಚ್ಚಲಿದ್ದು, ಹೋಂ ಡೆಲಿವರಿಗೆ ಅವಕಾಶ ನೀಡಲಾಗಿದೆ.
ಮಹಾರಾಷ್ಟ್ರದಲ್ಲಿ ಈಗಾಗಲೇ ನೈಟ್ ಕರ್ಫ್ಯೂ ಹಾಗೂ ವಾರದ ಕೊನೆಯಲ್ಲಿ ಲಾಕ್ಡೌನ್ ಘೋಷಣೆಯಾಗಿದ್ದು, ಇಷ್ಟಾದರೂ ಕೋವಿಡ್ ನಿಯಂತ್ರಣಕ್ಕೆ ಬರುತ್ತಿಲ್ಲ. ಹೀಗಾಗಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಸದ್ಯ 6 ಲಕ್ಷಕ್ಕೂ ಅಧಿಕ ಸಕ್ರಿಯ ಕೋವಿಡ್ ಪ್ರಕರಣಗಳಿದ್ದು, 58,245 ಜನರು ಸಾವನ್ನಪ್ಪಿದ್ದಾರೆ.