ಜೈಪುರ (ರಾಜಸ್ಥಾನ): ಮಹಾರಾಷ್ಟ್ರದಲ್ಲಿ ಮಾರ್ಚ್ ವೇಳೆಗೆ ಬಿಜೆಪಿ ಸರ್ಕಾರ ರಚನೆಯಾಗಲಿದೆ ಎಂದು ಹೇಳುವ ಮೂಲಕ ಕೇಂದ್ರ ಸಣ್ಣ ಮತ್ತು ಮಧ್ಯಮ ಖಾತೆ ಸಚಿವ ನಾರಾಯಣ್ ರಾಣೆ ಹೊಸ ಬಾಂಬ್ ಹಾಕಿದ್ದಾರೆ.
ರಾಜಸ್ಥಾನ ಪ್ರವಾಸದಲ್ಲಿರುವ ಕೇಂದ್ರ ಸಚಿವರು ಜೈಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಅಚ್ಚರಿಯ ಹೇಳಿಕೆ ನೀಡಿದರು. 'ಮಹಾರಾಷ್ಟ್ರದಲ್ಲಿ ಅತಿ ಶೀಘ್ರದಲ್ಲೇ ಬದಲಾವಣೆ ಕಾಣಲಿದ್ದೀರಿ. ಮಾರ್ಚ್ ವೇಳೆಗೆ ಬದಲಾವಣೆ ಆಗಲಿದ್ದು, ಸರ್ಕಾರ ರಚನೆ ಮಾಡಲು ಅಥವಾ ಮುರಿಯಲು ಕೆಲ ವಿಚಾರವನ್ನು ರಹಸ್ಯವಾಗಿಡಬೇಕಾಗುತ್ತದೆ' ಎಂದರು.
-
#WATCH | "Change will be seen in Maharashtra very soon. The change will be seen by March. To form a government, to break a govt, some things have to be kept secret," Union Minister Narayan Rane in Jaipur (25.11) pic.twitter.com/GAlDtDr1xO
— ANI (@ANI) November 26, 2021 " class="align-text-top noRightClick twitterSection" data="
">#WATCH | "Change will be seen in Maharashtra very soon. The change will be seen by March. To form a government, to break a govt, some things have to be kept secret," Union Minister Narayan Rane in Jaipur (25.11) pic.twitter.com/GAlDtDr1xO
— ANI (@ANI) November 26, 2021#WATCH | "Change will be seen in Maharashtra very soon. The change will be seen by March. To form a government, to break a govt, some things have to be kept secret," Union Minister Narayan Rane in Jaipur (25.11) pic.twitter.com/GAlDtDr1xO
— ANI (@ANI) November 26, 2021
'ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅನಾರೋಗ್ಯಕ್ಕೀಡಾಗಿದ್ದಾರೆ. ಇದರ ಬಗ್ಗೆ ಮಾತನಾಡಬೇಡಿ ಎಂದು ಪಕ್ಷದ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ತಿಳಿಸಿದ್ದು, ಮಹಾರಾಷ್ಟ್ರದಲ್ಲಿನ ಮೂರು ಪಕ್ಷಗಳ ಮಹಾ ವಿಕಾಸ್ ಅಘಾಡಿ ಸರ್ಕಾರ ಹೆಚ್ಚು ದಿನ ಇರುವುದಿಲ್ಲ' ಎಂದು ಭವಿಷ್ಯ ನುಡಿದರು.
ಮಹಾರಾಷ್ಟ್ರದಲ್ಲಿ ಶಿವಸೇನೆ, ಕಾಂಗ್ರೆಸ್ ಹಾಗೂ ಎನ್ಸಿಪಿ ನೇತೃತ್ವದ ಮೈತ್ರಿ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಇದೀಗ ಕೇಂದ್ರ ಸಚಿವರ ಈ ಮಾತು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ. 2014ರಿಂದ 2019ರವರೆಗೆ ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಮೈತ್ರಿ ಸರ್ಕಾರ ಅಧಿಕಾರದಲ್ಲಿತ್ತು. ಆದರೆ 2019ರಲ್ಲಿ ಶಿವಸೇನೆ, ಕಾಂಗ್ರೆಸ್, ಎನ್ಸಿಪಿ ಸೇರಿ ಸರ್ಕಾರ ರಚಿಸಿವೆ.