ETV Bharat / bharat

ಮಹಾರಾಷ್ಟ್ರದಲ್ಲಿ ಸೇನೆ - ಬಿಜೆಪಿ ಮೈತ್ರಿ ವಿಚಾರದಲ್ಲಿ ತಮಾಷೆ ಮಾಡಿದ ಸಿಎಂ: ಬಿಜೆಪಿ ನಾಯಕ ಹೇಳಿದ್ದೇನು?

author img

By

Published : Sep 18, 2021, 12:33 PM IST

ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಬಿಜೆಪಿಯ ನಾಯಕರೊಬ್ಬರನ್ನು 'ಭವಿಷ್ಯದ ಸಹೋದ್ಯೋಗಿ' ಎಂದಿರುವುದು ಮಹಾರಾಷ್ಟ್ರ ರಾಜಕೀಯ ವಲಯದಲ್ಲಿ ಸಾಕಷ್ಟು ಸಂಚಲನ ಮೂಡಿಸಿದೆ.

Maharashtra CM calls BJP leader 'future friend', sets speculations of coalition abuzz
ಮಹಾರಾಷ್ಟ್ರದಲ್ಲಿ ಸೇನೆ-ಬಿಜೆಪಿ ಮೈತ್ರಿ ವಿಚಾರದಲ್ಲಿ ತಮಾಷೆ ಮಾಡಿದ ಸಿಎಂ, ಬಿಜೆಪಿ ನಾಯಕ ಹೇಳಿದ್ದೇನು ಗೊತ್ತಾ?

ನವದೆಹಲಿ: ಮತ್ತೆ ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಶಿವಸೇನೆ ಒಂದಾಗುತ್ತವೆಯೇ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತೊಂದು ಅನುಮಾನ ಆರಂಭವಾಗಿದೆ. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಬಿಜೆಪಿಯ ನಾಯಕರೊಬ್ಬರನ್ನು 'ಭವಿಷ್ಯದ ಸಹೋದ್ಯೋಗಿ' ಎಂದಿರುವುದು ಸಾಕಷ್ಟು ಸಂಚಲನ ಮೂಡಿಸಿದೆ.

ನಮ್ಮಲ್ಲಿ ಕಲ್ಯಾಣ ಕರ್ನಾಟಕ ಭಾಗ ಹೈದರಾಬಾದ್ ನಿಜಾಮನ ಆಡಳಿತದಿಂದ ವಿಮೋಚನೆಗೊಂಡಂತೆ, ಮಹಾರಾಷ್ಟ್ರದ ಮರಾಠವಾಡ ಪ್ರದೇಶವೂ ಕೂಡಾ ಹೈದರಾಬಾದ್ ನಿಜಾಮನಿಂದ ವಿಮೋಚನೆಗೊಂಡಿತ್ತು. ಇದರ ಸವಿನೆನಪಿಗಾಗಿ ಔರಂಗಾಬಾದ್​ನಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅದೇ ಕಾರ್ಯಕ್ರಮದಲ್ಲಿ ಭಾಗಿಯಾಗಿ ವೇದಿಕೆ ಹಂಚಿಕೊಂಡಿದ್ದ ಬಿಜೆಪಿ ನಾಯಕ ಮತ್ತು ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವ ರಾವ್​ಸಾಹೇಬ್ ದಾನ್ವೆ ಅವರನ್ನು ನೋಡಿ, 'ನಾವು ಮತ್ತೆ ಮೈತ್ರಿ ಮಾಡಿಕೊಂಡರೆ, ಇವರು ಭವಿಷ್ಯದ ಸಹೋದ್ಯೋಗಿ' ಎಂದಿದ್ದಾರೆ.

ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವ ರಾವ್​ಸಾಹೇಬ್ ದಾನ್ವೆ ಅವರ ನನ್ನ ಹಳೆಯ ಸ್ನೇಹಿತರಾಗಿದ್ದಾರೆ. ಆದ್ದರಿಂದ ತಮಾಷೆ ಮಾಡಿದ್ದೇನೆ ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಂತರ ಸ್ಪಷ್ಟಪಡಿಸಿದ್ದಾರೆ.

ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತಾನಾಡಿದ ಬಿಜೆಪಿ ಸಂಸದ ದಾನ್ವೆ, ಎರಡೂ ಪಕ್ಷಗಳ ಸಿದ್ಧಾಂತ ಒಂದೇ ಇದೆ. ಬಿಜೆಪಿ ಯಾವಾಗಲೂ ಶಿವಸೇನೆಯೊಂದಿಗೆ ಸಂಬಂಧವನ್ನು ನವೀಕರಿಸಲು ಸಿದ್ಧವಾಗಿದೆ ಎಂದಿದ್ದಾರೆ.

ಇದನ್ನೂ ಓದಿ: ಆಫ್ಘನ್​ನ ಬೆಳವಣಿಗೆಗಳಿಂದ ಭಾರತದ ಮೇಲೆ ಪರಿಣಾಮ: ಪ್ರಧಾನಿ ಮೋದಿ​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.