ETV Bharat / bharat

ಧಾರ್ಮಿಕ ಕೇಂದ್ರದಲ್ಲಿ ಅಪ್ರಾಪ್ತ ಬಾಲಕನೊಂದಿಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ - ಪ್ರಾರ್ಥನೆಗೆ ಹೋದ ಅಪ್ರಾಪ್ತ ಬಾಲಕ ಮೇಲೆ ಲೈಂಗಿಕ ದೌರ್ಜನ್ಯ

Unnatural Sex With A Minor Boy in Pune: ಮಹಾರಾಷ್ಟ್ರದ ಪುಣೆಯ ಧಾರ್ಮಿಕ ಕೇಂದ್ರವೊಂದರಲ್ಲಿ ಒಂಬತ್ತು ವರ್ಷದ ಬಾಲಕನ ಮೇಲೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದ ಘಟನೆ ನಡೆದಿದೆ.

ಧಾರ್ಮಿಕ ಕೇಂದ್ರದಲ್ಲಿ ಅಪ್ರಾಪ್ತ ಬಾಲಕನೊಂದಿಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ
MAHARASHTRA: Clergy, accused of unnatural sex with a minor boy in Pune, absconding
author img

By ETV Bharat Karnataka Team

Published : Nov 17, 2023, 7:52 PM IST

ಪುಣೆ (ಮಹಾರಾಷ್ಟ್ರ): ಧಾರ್ಮಿಕ ಕೇಂದ್ರದಲ್ಲಿ ಪ್ರಾರ್ಥನೆ ಸಲ್ಲಿಸುವ ಹೋದ ಅಪ್ರಾಪ್ತ ಬಾಲಕನೊಂದಿಗೆ ವ್ಯಕ್ತಿಯೊಬ್ಬ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದ ಗಂಭೀರ ಆರೋಪ ಪ್ರಕರಣ ಮಹಾರಾಷ್ಟ್ರದ ಪುಣೆಯಲ್ಲಿ ಬೆಳಕಿಗೆ ಬಂದಿದೆ. ಈ ಕುರಿತು ಸಂತ್ರಸ್ತ ಬಾಲಕನ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದು, ಸದ್ಯ ಆರೋಪಿ ತಲೆಮರೆಸಿಕೊಂಡಿದ್ದಾನೆ.

ಇಲ್ಲಿನ ಕೊಂಡ್ವಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನವೆಂಬರ್ 10ರಂದು ಹೀನ ಕೃತ್ಯ ನಡೆದಿದೆ. ಬಾಲಕನೊಂದಿಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದ ಆರೋಪಿಯನ್ನು ಮಹಮ್ಮದ್ ಯೂಸುಫ್ ಎಂದು ಗುರುತಿಸಲಾಗಿದೆ. ನವೆಂಬರ್ 15ರಂದು ಬಾಲಕನ ಸಂಬಂಧಿಕರು ಪೊಲೀಸ್​ ಠಾಣೆಗೆ ದೂರು ನೀಡಿದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ. ಆರೋಪಿ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೊ)ಯ ವಿವಿಧ ಸೆಕ್ಷನ್​ಗಳ ಪ್ರಕಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದಾರೆ.

ನೀಚ ಕೃತ್ಯ ಬೆಳಕಿಗೆ ಬಂದಿದ್ದು ಹೇಗೆ?: ಇತ್ತೀಚೆಗೆ ಒಂಬತ್ತು ವರ್ಷದ ಬಾಲಕ ಮನೆಗೆ ಸೋದರ ಸಂಬಂಧಿ ಮಹಿಳೆಯೊಬ್ಬರು ಹೋಗಿದ್ದರು. ಈ ವೇಳೆ, ಬಾಲಕ ಪ್ರಾರ್ಥನೆಗೆ ತೆರಳದೇ ಇರುವುದನ್ನು ಆಕೆ ಗಮನಿಸಿದ್ದರು. ಅಂತೆಯೇ, ಕೆಲ ದಿನಗಳಿಂದ ಏಕೆ ಪ್ರಾರ್ಥನೆ ಮಾಡಲು ಹೋಗುತ್ತಿಲ್ಲ ಎಂದು ಬಾಲಕನನ್ನು ಆಕೆ ಕೇಳಿದ್ದರು. ಆಗ ಧಾರ್ಮಿಕ ಕೇಂದ್ರದಲ್ಲಿ ತನ್ನೊಂದಿಗೆ ನಡೆದ ಕೃತ್ಯವನ್ನು ಬಾಲಕ ಬಹಿರಂಗ ಪಡಿಸಿದ್ದಾನೆ.

ನವೆಂಬರ್ 10ರಂದು ನಾನು ಮತ್ತು ನನ್ನ ಸ್ನೇಹಿತ ಪ್ರಾರ್ಥನೆ ಮಾಡಲು ಹೋಗಿದ್ದೆವು. ಈ ವೇಳೆ ಪ್ರಾರ್ಥನೆ ಮುಗಿಸಿ ಜನರೆಲ್ಲ ಹೊರಟು ಹೋದರು. ಆದರೆ, ಪ್ರಾರ್ಥನೆಗೆ ಕರೆ ನೀಡುತ್ತಿದ್ದ ವ್ಯಕ್ತಿ, ನಮಗೆ ಪ್ರಾರ್ಥನೆ ಮಾಡುವುದನ್ನು ಕಲಿಸುತ್ತೇನೆ ಎಂದು ಹೇಳಿ ನನ್ನ ಸ್ನೇಹಿತನೊಂದಿಗೆ ಇಬ್ಬರನ್ನೂ ತನ್ನ ಕೊಠಡಿಗೆ ಕರೆದುಕೊಂಡು ಹೋದ. ಅಲ್ಲಿ ಪ್ರಾರ್ಥನೆ ಸಲ್ಲಿಸುವ ಕುರಿತು ಒಂದಷ್ಟು ಮಾಹಿತಿ ನೀಡಿದ. ಬಳಿಕ ಅಲ್ಲಿಂದ ನನ್ನ ಸ್ನೇಹಿತನಿಗೆ ಹೋಗುವಂತೆ ಸೂಚಿಸಿದ. ಇದಾದ ನಂತರ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಸಂತ್ರಸ್ತ ಬಾಲಕ ವಿವರಿಸಿದ್ದಾರೆ.

ಅಲ್ಲದೇ, ಈ ಕೃತ್ಯದ ಬಗ್ಗೆ ಭಯದಿಂದ ನಾನು ಯಾರಿಗೂ ಹೇಳಿರಲಿಲ್ಲ ಎಂದು ನೊಂದ ಬಾಲಕ ತಿಳಿಸಿದ್ದಾನೆ. ಸದ್ಯ ಬಾಲಕನ ಮಾವ ನೀಡಿದ ದೂರಿನ ಮೇರೆಗೆ ಕೊಂಡ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಇದನ್ನೂ ಓದಿ: 15 ವರ್ಷದ ವಿದ್ಯಾರ್ಥಿಯೊಂದಿಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ: ಆರೋಪಿ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.