ETV Bharat / bharat

ಆನ್​​​​ಲೈನ್​​ ಗೇಮಿಂಗ್​​​​​ ಗೀಳು.. ಬಾಲಕ ಆತ್ಮಹತ್ಯೆ: ಅಂತರ್ಜಾಲ ಆಟಗಳ ನಿಯಂತ್ರಣಕ್ಕೆ ಸರ್ಕಾರದ ಚಿಂತನೆ - ಮಧ್ಯಪ್ರದೇಶದಲ್ಲಿ ಆನ್​​ಲೈನ್​ ಗೇಮಿಂಗ್​​​ ನೀತಿ ಜಾರಿಗೆ ಚಿಂತನೆ

ಬಾಲಕನ ಈ ಸಾವು ಈಗ ಮಧ್ಯಪ್ರದೇಶ ಸರ್ಕಾರವನ್ನು ಎಚ್ಚೆತ್ತುಕೊಳ್ಳುವಂತೆ ಮಾಡಿದೆ. ರಾಜ್ಯ ಸರ್ಕಾರ ಆನ್‌ಲೈನ್ ಗೇಮ್​​ಗಳನ್ನು ನಿಯಂತ್ರಿಸಲು ಕಾಯ್ದೆಯನ್ನು ತರಲಿದೆ ಎಂದು ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ಹೇಳಿದ್ದಾರೆ.

ಆನ್​​​​ಲೈನ್​​ ಗೇಮಿಂಗ್​​​​​ ಗೀಳು... ಬಾಲಕ ಆತ್ಮಹತ್ಯೆ: ಅಂತರ್ಜಾಲ ಆಟಗಳ ನಿಯಂತ್ರಣಕ್ಕೆ ಸರ್ಕಾರದ ಚಿಂತನೆ
Madhya Pradesh to bring law to regulate online gaming after 11-yr-old commits suicide in Bhopal
author img

By

Published : Jan 14, 2022, 9:15 AM IST

ಭೋಪಾಲ್ (ಮಧ್ಯಪ್ರದೇಶ): ಆನ್​​​ಲೈನ್​ ಗೇಮ್​​​ಗೆ ಮಾರುಹೋಗಿದ್ದ ಹಾಗೂ ವ್ಯಸನಿಯಾಗಿದ್ದ ಬಾಲಕನೊಬ್ಬ ಪೋಷಕರ ವಿರೋಧದಿಂದಾಗಿ ಮನನೊಂದು ಆತ್ಮಹತ್ಯೆಗೆ ಶರಣಾದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಬಾಲಕನ ಈ ಸಾವು ಈಗ ಮಧ್ಯಪ್ರದೇಶ ಸರ್ಕಾರವನ್ನು ಎಚ್ಚೆತ್ತುಕೊಳ್ಳುವಂತೆ ಮಾಡಿದೆ. ರಾಜ್ಯ ಸರ್ಕಾರ ಆನ್‌ಲೈನ್ ಗೇಮ್​​ಗಳನ್ನು ನಿಯಂತ್ರಿಸಲು ಕಾಯ್ದೆಯನ್ನು ತರಲಿದೆ ಎಂದು ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ಹೇಳಿದ್ದಾರೆ.

ಆನ್‌ಲೈನ್ ಮೊಬೈಲ್ ಗೇಮ್‌ನ ಚಟದಿಂದಾಗಿ ಮಕ್ಕಳು ಮತ್ತು ಯುವಕರು ಸಾವಿಗೆ ಶರಣಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಾತನಾಡಿರುವ ಅಲ್ಲಿನ ಗೃಹ ಸಚಿವರು, ಆನ್‌ಲೈನ್ ಆಟಗಳು ಇತ್ತೀಚಗೆ ಗಂಭೀರ ಸಮಸ್ಯೆಗಳಾಗಿ ಪರಿಣಮಿಸಿವೆ. ಇಂತಹ ದುರಂತಗಳನ್ನು ತಡೆಯುವ ಉದ್ದೇಶದಿಂದ, ನಾವು ಮಧ್ಯಪ್ರದೇಶದಲ್ಲಿ ಆನ್‌ಲೈನ್ ಗೇಮಿಂಗ್ ನಿಯಂತ್ರಿಸುವ ಕಾಯಿದೆ ತರುತ್ತಿದ್ದೇವೆ. ಈ ಸಂಬಂಧ ಕರಡು ಸಹ ಸಿದ್ಧಪಡಿಸಲಾಗಿದೆ. ಅದಕ್ಕೆ ಶೀಘ್ರ ಅಂತಿಮ ರೂಪ ನೀಡುತ್ತೇವೆ ಎಂದು ಘೋಷಿಸಿದ್ದಾರೆ.

11 ವರ್ಷದ ಬಾಲಕ ಸತ್ತಿದ್ದೇಕೆ?

ಭೋಪಾಲ್‌ನಲ್ಲಿ ತನ್ನ ಮನೆಯ ಮೇಲ್ಛಾವಣಿಗೆ ಅಳವಡಿಸಲಾಗಿದ್ದ ಪಂಚಿಂಗ್ ಬ್ಯಾಗ್‌ನ ಹಗ್ಗಕ್ಕೆ 11 ವರ್ಷದ ಬಾಲಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಬಾಲಕ ಹೆತ್ತವರ ಅನುಮತಿಯಿಲ್ಲದೇ ಆನ್‌ಲೈನ್ ಗೇಮ್‌ಗೆ ಸುಮಾರು 6,000 ರೂ. ಖರ್ಚು ಮಾಡಿದ್ದ. ಇದನ್ನು ಗಮಿಸಿದ ಪೋಷಕರು ಬಾಲಕನ ಮೊಬೈಲ್​​ನಿಂದ ಗೇಮಿಂಗ್​ ಅಪ್ಲಿಕೇಷನ್​ ಅನ್ನು ಡಿಲೀಟ್​ ಮಾಡಿದ್ದರು. ಇದರಿಂದ ಮನನೊಂದ ಬಾಲಕ ಮೇಲ್ಚಾವಣಿಗೆ ತೆರಳಿ ಆತ್ಮಹತ್ಯೆಗೆ ಶರಣಾಗಿದ್ದ ಎಂದು ಭೋಪಾಲ್‌ನ ಹೆಚ್ಚುವರಿ ಪೊಲೀಸ್ ಕಮಿಷನರ್ ಸಚಿನ್ ಅತುಲ್ಕರ್ ಮಾಹಿತಿ ನೀಡಿದ್ದಾರೆ.

ಇಂತಹ ಹಲವು ಘಟನೆಗಳು ವರದಿ ಆಗಿರುವ ಹಿನ್ನೆಲೆಯಲ್ಲಿ ಮಧ್ಯಪ್ರದೇಶ ಸರ್ಕಾರ ಆನ್​​ಲೈನ್​ ಗೇಮ್​ಗಳನ್ನೇ ನಿಷೇಧಿಸಲು ನಿರ್ಧರಿಸಿದೆ. ಅಲ್ಲದೇ ಈ ಸಂಬಂಧ ಕಾನೂನು ಜಾರಿಗೆ ಕೂಡಾ ನಿರ್ಧರಿಸಿದೆ.

ಇದನ್ನೂ ಓದಿ:ಬಿಲ್ಡರ್‌ಗಳಿಗೆ 125 ಕೋಟಿ ರೂ.ವಂಚನೆ ಆರೋಪ; BSF ಉಪ ಕಮಾಂಡೆಂಟ್‌ ಸೇರಿ ನಾಲ್ವರ ಬಂಧನ, 13 ಕೋಟಿ ರೂ.ವಶ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.