ಲಖನೌ(ಉತ್ತರಪ್ರದೇಶ): ಮದುವೆ ಸಂಬಂಧಗಳ ಅಂತಿಮೋದ್ದೇಶ ವಂಶವೃದ್ಧಿ. ಇದರಲ್ಲಿ ಗಂಡು - ಹೆಣ್ಣು ಯಾರೇ ಅಶಕ್ತರಾದರೆ, ಬಿರುಕು ಸಾಮಾನ್ಯ. ಉತ್ತರಪ್ರದೇಶದಲ್ಲಿ ಮಹಿಳೆಯೊಬ್ಬರು ತನ್ನ ಪತಿ ದೈಹಿಕ ಸಂಬಂಧದಲ್ಲಿ ಫಿಟ್ ಇಲ್ಲ. ಚಿಕಿತ್ಸೆಗೂ ಆತ ಒಪ್ಪುತ್ತಿಲ್ಲ. ತನಗೆ ವಂಚನೆಯಾಗಿದೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ರಾಜಧಾನಿ ಲಖನೌದ ಕೃಷ್ಣನಗರ ಕೊತ್ವಾಲಿ ಪ್ರದೇಶದ ನಿವಾಸಿಯಾಗಿರುವ ಮಹಿಳೆ, ಮದುವೆಯ ನಂತರ ತನ್ನ ಪತಿ ದೈಹಿಕ ಸಂಬಂಧದಿಂದ ದೂರವಿದ್ದಾರೆ. ಮದುವೆಯ ನಂತರ 6 ತಿಂಗಳು ತನ್ನ ದುರ್ಬಲತೆ ಮುಚ್ಚಿಟ್ಟಿದ್ದರು. ಈ ಬಗ್ಗೆ ಚಿಕಿತ್ಸೆ ಪಡೆದುಕೊಳ್ಳಲು ಸಲಹೆ ನೀಡಿದರೂ, ಅದಕ್ಕೆ ಆತ ಸಿದ್ಧರಿಲ್ಲ ಎಂದು ಆರೋಪಿಸಿ ಪತಿ ಮತ್ತು ಆತನ ಕುಟುಂಬ ಸದಸ್ಯರ ವಿರುದ್ಧ ಕೇಸ್ ಹಾಕಿದ್ದಾರೆ.
ಜನವರಿಯಲ್ಲಿ ತಮ್ಮಿಬ್ಬರ ವಿವಾಹವಾಗಿದೆ. ಮದುವೆ ಬಳಿಕ ದೈಹಿಕ ಸಂಬಂಧ ಬೆಳೆಸಲು ಯತ್ನಿಸಿದಾಗ ಪತಿ ನಿರಾಕರಿಸುತ್ತಿದ್ದ. ಕೆಲ ದಿನಗಳ ಬಳಿಕ ತಾನು ಲೈಂಗಿಕ ಕ್ರಿಯೆ ನಡೆಸಲು ಸಾಧ್ಯವಿಲ್ಲ ಎಂದು ಹೇಳಿದ್ದ. ಇದು ತನಗೆ ಆಘಾತ ತಂದಿತ್ತು. ಇಷ್ಟಾದರೂ, ತಾನು ವೈವಾಹಿಕ ಜೀವನವನ್ನು ಉಳಿಸಿಕೊಳ್ಳುವ ಸಲುವಾಗಿ ಪತಿಗೆ ಚಿಕಿತ್ಸೆ ಕೊಡಿಸಲು ನಿರ್ಧರಿಸಿದೆ.
ಅದರಂತೆ, ತನ್ನ ಪತಿಗೆ ಶಕ್ತಿಹೀನತೆಗೆ ಚಿಕಿತ್ಸೆ ನೀಡಲು ನಗರದ ದೊಡ್ಡ ಆಸ್ಪತ್ರೆ ವೈದ್ಯರನ್ನು ಸಂಪರ್ಕಿಸಿದೆ. ಆದರೆ, ಇದಕ್ಕೆ ಪತಿ ಸಮ್ಮತಿ ನೀಡಲಿಲ್ಲ. ಏನೇನೋ ಕಾರಣ ಹೇಳಿ ವೈದ್ಯರ ಬಳಿಗೆ ಹೋಗಲು ನಿರಾಕರಿಸುತ್ತಿದ್ದ. ತೀವ್ರ ಒತ್ತಡದ ಬಳಿಕ ವೈದ್ಯರ ಬಳಿಗೆ ಹೋದರು. ಅಲ್ಲೂ ಕೂಡ ಅವರು ಕೆಲವು ಪರೀಕ್ಷೆಗಳಿಗೆ ಮಾದರಿಗಳನ್ನು ನೀಡಲು ನಿರಾಕರಿಸಿದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ವರದಕ್ಷಿಣೆ ಆರೋಪ: ತನಗೆ ಮತ್ತು ಕುಟುಂಬಕ್ಕೆ ಈ ಮದುವೆಯಿಂದ ಅನ್ಯಾಯವಾಗಿದೆ. ದೈಹಿಕವಾಗಿ ಅಶಕ್ತ ಎಂದು ಗೊತ್ತಿದ್ದರೂ ಆತನಿಗೆ ಕುಟುಂಬಸ್ಥರು ಉದ್ದೇಶಪೂರ್ವಕವಾಗಿ ಮದುವೆ ಮಾಡಿಸಿದ್ದಾರೆ. ವರದಕ್ಷಿಣೆ ಪಡೆದು ವಂಚಿಸಲಾಗಿದೆ. ಪತಿ ಕುಟುಂಬಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮಹಿಳೆ ದೂರಿನಲ್ಲಿ ಕೋರಿದ್ದಾರೆ. ಕೇಸ್ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆಯ ನಂತರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಗಂಡನ ಅಕ್ರಮ ಸಂಬಂಧಕ್ಕೆ ಪತ್ನಿ ಆತ್ಮಹತ್ಯೆ: ಬೆಂಗಳೂರಿನಲ್ಲಿ ಇತ್ತೀಚೆಗೆ ಪತ್ನಿಯೊಬ್ಬರು ತನ್ನ ಗಂಡನ ಅಕ್ರಮ ಸಂಬಂಧದಿಂದ ನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿತ್ತು. ಆತ್ಮಹತ್ಯೆ ಮಾಡಿಕೊಂಡ ಮಹಿಳೆಗೆ ಇದು ಎರಡನೇ ಮದುವೆಯಾಗಿತ್ತು. ತಾನು ಕೆಲಸ ಮಾಡುವ ಆಫೀಸಿನ ಸಿಬ್ಬಂದಿಯನ್ನೇ ವಿವಾಹವಾಗಿದ್ದ ಮಹಿಳೆ, ತನ್ನ ಗಂಡನಿಗೆ ಬೇರೊಬ್ಬಾಕೆಯ ಜೊತೆಗೆ ಅಕ್ರಮ ಸಂಬಂಧವಿದೆ ಎಂದು ಅರಿತಿದ್ದಳು.
ಇದರಿಂದ ಇಬ್ಬರ ಮಧ್ಯೆ ಜಗಳವಾಗುತ್ತಿತ್ತು. ಹೀಗಿದ್ದಾಗ ಜುಲೈ 2 ರಂದು ಆಕೆ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡು ಜೀವ ಕಳೆದುಕೊಂಡಿದ್ದರು. ಕೆಂಗೇರಿ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು.
ಇದನ್ನೂ ಓದಿ: ವಿದ್ಯುತ್ ಸ್ಪರ್ಶಿಸಿ ಗೃಹಿಣಿ ಅನುಮಾನಾಸ್ಪದ ಸಾವು: ವರದಕ್ಷಿಣೆ ಕಾರಣಕ್ಕೆ ಕೊಲೆ ಆರೋಪ