ETV Bharat / bharat

ಎಲ್​ಟಿಟಿಇ ಪ್ರಭಾಕರನ್​ ಜೀವಂತ: ಕಾಂಗ್ರೆಸ್​ ಮಾಜಿ​ ನಾಯಕನ ಹೇಳಿಕೆ ಅಲ್ಲಗಳೆದ ಲಂಕಾ ಸೇನೆ

ನಿಷೇಧಿತ ಉಗ್ರ ಸಂಘಟನೆ ಎಲ್​ಟಿಟಿಇ- ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಈಳಂ - ಹತ್ಯೆಯಾಗಿದ್ದ ಎಲ್​ಟಿಟಿಇ ಮುಖ್ಯಸ್ಥ ಪ್ರಭಾಕರ್ ಜೀವಂತ - ಕಾಂಗ್ರೆಸ್​ ಮಾಜಿ ನಾಯಕ ನೆಡುಮಾರನ್ ಹೇಳಿಕೆ - ನಿಷೇಧಿತ ಉಗ್ರ ಸಂಘಟನೆಯ ಮುಖ್ಯಸ್ಥ ಪ್ರಭಾಕರನ್

ಹತ್ಯೆಯಾಗಿದ್ದ ಎಲ್​ಟಿಟಿಇ ಪ್ರಭಾಕರನ್​ ಇನ್ನೂ ಜೀವಂತ

author img

By

Published : Feb 13, 2023, 3:57 PM IST

Updated : Feb 13, 2023, 7:04 PM IST

ತಂಜೂರು(ತಮಿಳುನಾಡು): ನಿಷೇಧಿತ ಉಗ್ರ ಸಂಘಟನೆಯಾದ ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಈಳಂ (ಎಲ್‌ಟಿಟಿಇ) ಮುಖ್ಯಸ್ಥ ಪ್ರಭಾಕರನ್ ಇನ್ನೂ ಜೀವಂತವಾಗಿದ್ದಾನೆ. ಶೀಘ್ರವೇ ಆತ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಿದ್ದಾನೆ ಎಂದು ತಮಿಳುನಾಡು ಕಾಂಗ್ರೆಸ್​ ಮಾಜಿ ಮುಖಂಡರೊಬ್ಬರು ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ನಿಷೇಧಿತ ಉಗ್ರ ಸಂಘಟನೆಯ ಮುಖ್ಯಸ್ಥ ಪ್ರಭಾಕರನ್​ ಕುಟುಂಬದೊಂದಿಗೆ ವಾಸಿಸುತ್ತಿದ್ದಾನೆ. ತಮಿಳು ಜನಾಂಗದ ವಿಮೋಚನೆಗಾಗಿ ಯೋಜನೆಯೊಂದನ್ನು ಘೋಷಿಸಲಿದ್ದಾನೆ. ಆತ ಬಹುಬೇಗನೇ ಸಾರ್ವಜನಿಕವಾಗಿ ಗೋಚರವಾಗಲಿದ್ದಾನೆ ಎಂದು ಕಾಂಗ್ರೆಸ್​ನ ಮಾಜಿ ನಾಯಕ ಪಝಾ ನೆಡುಮಾರನ್ ಸೋಮವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.

14 ವರ್ಷಗಳ ಹಿಂದೆ ಹತ್ಯೆ: ಶ್ರೀಲಂಕಾದಲ್ಲಿ ವಿಧ್ವಸಂಕ ಕೃತ್ಯಗಳು, ಭಾರತದ ಮಾಜಿ ಪ್ರಧಾನಿ ರಾಜೀವ್ ​ಗಾಂಧಿ ಅವರ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ನಿಷೇಧಿತ ಉಗ್ರ ಸಂಘಟನೆ ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಈಳಂ(ಎಲ್​ಟಿಟಿಇ)ನ ಮುಖ್ಯಸ್ಥ ವೇಲುಪಿಳ್ಳೈ ಪ್ರಭಾಕರನ್​ರನ್ನು 14 ವರ್ಷಗಳ ಹಿಂದೆ ಅಂದರೆ 2019 ರಲ್ಲಿ ಶ್ರೀಲಂಕಾ ಸರ್ಕಾರ ಹತ್ಯೆ ಮಾಡಿತ್ತು. ಇದರ ವಿಡಿಯೋ ಮತ್ತು ಫೋಟೋಗಳನ್ನು ಬಿಡುಗಡೆ ಮಾಡಿತ್ತು. ಆದರೀಗ ಕಾಂಗ್ರೆಸ್​ ಮಾಜಿ ಮುಖಂಡ ನಡುಮಾರನ್​ "ಪ್ರಭಾಕರನ್​ ಬದುಕಿದ್ದಾರೆ" ಎಂದು ಹೇಳಿ ಅಚ್ಚರಿ ಉಂಟು ಮಾಡಿದ್ದಾರೆ.

"ತಮಿಳು ರಾಷ್ಟ್ರೀಯತೆಯ ನಾಯಕ ಪ್ರಭಾಕರನ್ ಜೀವಂತವಾಗಿದ್ದಾರೆ. ಅವರ ಕುಟುಂಬದೊಂದಿಗೆ ವಾಸವಾಗಿದ್ದಾರೆ. ತಮಿಳು ಜನರಿಗೆ ಖುಷಿಯ ಸುದ್ದಿಯನ್ನು ಹೇಳಿದ್ದೇನೆ. ಇದನ್ನು ಬಹಿರಂಗಪಡಿಸಲು ನನಗೆ ಖುಷಿಯಾಗುತ್ತಿದೆ. ಆತನ ವಿರುದ್ಧದ ಅಭಿಪ್ರಾಯವನ್ನು ಇದು ಕೊನೆಗೊಳಿಸುತ್ತದೆ. ಆದರೆ, ನಾನು ಪ್ರಭಾಕರನ್​ ಎಲ್ಲಿದ್ದಾರೆ ಎಂಬುದನ್ನು ಬಹಿರಂಗಪಡಿಸುವುದಿಲ್ಲ ಎಂದು ನೆಡುಮಾರನ್​ ಹೇಳಿದ್ದಾರೆ.

ಪ್ರಭಾಕರನ್​ ಬೆಂಬಲಿಸಲು ಮನವಿ: ಶ್ರೀಲಂಕಾದಲ್ಲಿ ದಂಗೆಯ ಮೂಲಕ ರಾಜಪಕ್ಸೆ ಆಡಳಿತ ಕೊನೆಗೊಂಡಿದ್ದು, ಪ್ರಭಾಕರನ್‌ಗೆ ಮುಕ್ತವಾಗಿ ಸಾರ್ವಜನಿಕ ಬದುಕಿಗೆ ಬರಲು ಸಾಧ್ಯವಾಗಿದೆ. ತಮಿಳರ ವಿಮೋಚನೆಗಾಗಿ ಶೀಘ್ರವೇ ಅವರು ಯೋಜನೆಯೊಂದನ್ನು ಘೋಷಿಸಲಿದ್ದಾರೆ. ಜನರು ಆತನೊಂದಿಗೆ ನಿಲ್ಲಬೇಕು ಎಂದು ಕೋರಿದ್ದಾರೆ.

ಇದೇ ವೇಳೆ ಪ್ರಕಟಣೆ ಬಿಡುಗಡೆ ಮಾಡಿದ್ದು, ತಮಿಳು ಪರ ನಾಯಕ, ಎಲ್‌ಟಿಟಿಇ ಪ್ರಬಲವಾಗಿರುವವರೆಗೂ ಭಾರತ ವಿರೋಧಿ ಪಡೆಗಳು ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಹಿಡಿತ ಸಾಧಿಸಲು ಸಾಧ್ಯವಾಗಿರಲಿಲ್ಲ. ಪ್ರಭಾಕರನ್ ಭಾರತ ವಿರೋಧಿ ಪಡೆಗಳ ವಿರುದ್ಧವಾಗಿದ್ದರು. ಹಿಂದೂ ಮಹಾಸಾಗರ ಪ್ರದೇಶದಲ್ಲಿ ಚೀನಾ ಅಸ್ತಿತ್ವ ಸಾಧಿಸಲು ಮುಂದಾಗಿದೆ. ಈಗ ಭಾರತಕ್ಕೆ ಅಪಾಯಕರವಾಗಿದೆ. ಡ್ರ್ಯಾಗನ್​ ರಾಷ್ಟ್ರ ಶ್ರೀಲಂಕಾವನ್ನು ಭಾರತದ ವಿರುದ್ಧ ಲಾಂಚ್‌ಪ್ಯಾಡ್‌ ಆಗಿ ಮಾಡಿಕೊಂಡಿದೆ. ಹೀಗಾಗಿ ಕೇಂದ್ರ ಸರ್ಕಾರ ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಅದರಲ್ಲಿ ಹೇಳಿದ್ದಾರೆ.

ಶ್ರೀಲಂಕಾ ಮತ್ತು ಎಲ್​ಟಿಟಿಇ ಮಧ್ಯೆ ನಡೆಯುತ್ತಿದ್ದ ಕಾದಾಟದಲ್ಲಿ 2009 ರಲ್ಲಿ ಲಂಕಾ ಸೇನೆ ಪ್ರಭಾಕರನ್​ರನ್ನು ಹತ್ಯೆ ಮಾಡಲಾಗಿದೆ ಎಂದು ಹೇಳಿತ್ತು. ಅದಕ್ಕೆ ಪೂರಕವಾಗಿ ಫೋಟೋ ಮತ್ತು ವಿಡಿಯೋವನ್ನು ಬಿಡುಗಡೆ ಮಾಡಿತ್ತು. 14 ವರ್ಷಗಳ ಬಳಿಕ ಇದೀಗ ಎಲ್​ಟಿಟಿಇ ಮುಖ್ಯಸ್ಥ ಬದುಕಿದ್ದಾನೆ ಎಂಬುದು ಅಚ್ಚರಿ ಉಂಟು ಮಾಡಿದೆ.

ರಾಜೀವ್​ ಹತ್ಯೆ ಆರೋಪಿ: 1991 ರಲ್ಲಿ ತಮಿಳುನಾಡಿನ ಪೆರಂಬದೂರಿನಲ್ಲಿ ನಡೆದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಹತ್ಯೆಯಲ್ಲಿ ಪ್ರಭಾಕರನ್ ಪ್ರಮುಖ ಆರೋಪಿಯಾಗಿದ್ದರು. ಶ್ರೀಲಂಕಾದಲ್ಲಿ ಇತರ ಕೆಲವು ಹತ್ಯೆ ಪ್ರಕರಣಗಳಲ್ಲೂ ಈತ ಆರೋಪಿಯಾಗಿದ್ದಾರೆ. ಮಾಜಿ ಪ್ರಧಾನಿ ರಾಜೀವ್​ ಹತ್ಯೆ ಬಳಿಕ ಎಲ್‌ಟಿಟಿಇಯನ್ನು ನಿಷೇಧಿತ ಭಯೋತ್ಪಾದಕ ಸಂಘಟನೆ ಎಂದು ಭಾರತ ಸರ್ಕಾರ ಘೋಷಿಸಿತ್ತು.

ಸುದ್ದಿ ನಿರಾಕರಿಸಿದ ಲಂಕಾ ಸೇನೆ: ಎಲ್​ಟಿಟಿಯ ಮುಖ್ಯಸ್ಥ ಪ್ರಭಾಕರನ್​ ಜೀವಂತವಾಗಿದ್ದಾರೆ ಎಂಬ ಪಝಾ ನೆಡುಮಾರನ್​ ಹೇಳಿಕೆಯನ್ನು ಶ್ರೀಲಂಕಾ ಸೇನೆ ತಳ್ಳಿಹಾಕಿದೆ. ಪ್ರಭಾಕರನ್​ ನಮ್ಮ ಸೇನೆ ಹತ್ಯೆ ಮಾಡಿದೆ. ಅದಕ್ಕೆ ಪುರಾವೆಯಾಗಿ ಆತನ ಡಿಎನ್​ಎ ಸಾಕ್ಷ್ಯವಿದೆ ಎಂದು ಹೇಳಿದೆ.

ಲಂಕಾ ಸೇನೆಯ ಬ್ರಿಗೇಡಿಯರ್ ರವಿ ಹೆರಾತ್ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದು, ಎಲ್‌ಟಿಟಿಇ ಮುಖ್ಯಸ್ತ ವೇಲುಪಿಳ್ಳೈ ಪ್ರಭಾಕರನ್ ಬದುಕಿಲ್ಲ. ನಮ್ಮ ಬಳಿ ಡಿಎನ್‌ಎ ಸಾಕ್ಷ್ಯವಿದೆ. ಮೇ 18, 2009 ರಂದು ಯುದ್ಧದಲ್ಲಿ ಪ್ರಭಾಕರನ್ ಕೊಲ್ಲಲ್ಪಟ್ಟರು. ನಾವು ಡಿಎನ್‌ಎ ಪುರಾವೆಗಳನ್ನು ಸಂಗ್ರಹಿಸಿದ್ದೇವೆ. ಈ ಬಗ್ಗೆ ತಪ್ಪು ಮಾಹಿತಿ ನೀಡಿದ್ದಾರೆ. ಇದರಿಂದ ನಮಗೆ ಯಾವುದೇ ಆತಂಕವನ್ನು ಉಂಟು ಮಾಡುವುದಿಲ್ಲ. ಪ್ರಭಾಕರನ್​ ಸಾವಿನ ಬಗ್ಗೆ ನಮಗೆ ಯಾವುದೇ ಸಂದೇಹವಿಲ್ಲ ಎಂದು ತಿಳಿಸಿದ್ದಾರೆ.

ಓದಿ: ತಮಿಳುನಾಡಿನಲ್ಲಿ ಎಲ್​ಟಿಟಿಇ ಮಾದರಿ ಸಂಘಟನೆಗೆ ಜೀವ..ಕಾರಣ ಮಾತ್ರ ಅಚ್ಚರಿ!

Last Updated : Feb 13, 2023, 7:04 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.