ನವದೆಹಲಿ: ತೈಲ ಕಂಪನಿಗಳು ಜನರ ಜೇಬಿಗೆ ಮತ್ತೆ ಕತ್ತರಿ ಹಾಕಿವೆ. ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ 25 ರೂಪಾಯಿ ಏರಿಕೆ ಮಾಡಿವೆ. ಹೊಸ ದರ ಆಗಸ್ಟ್ 17 ರಿಂದಲೇ ಜಾರಿಗೆ ಬರಲಿದೆ.
ಕಳೆದ ಏಳು ತಿಂಗಳಲ್ಲಿ ಎಲ್‌ಪಿಜಿ ಸಿಲಿಂಡರ್ ರೀಫಿಲ್ ಬೆಲೆ 140 ರೂಪಾಯಿ ಹೆಚ್ಚಳವಾಗಿದೆ. ಫೆಬ್ರವರಿ 4 ರಂದು ಪ್ರತಿ ಸಿಲಿಂಡರ್ ಮೇಲೆ 25 ರೂಪಾಯಿ ಏರಿಕೆ ಮಾಡಲಾಗಿತ್ತು. ನಂತರ ಫೆಬ್ರವರಿ 15 ರಂದು 50 ರೂ.ಹೆಚ್ಚಿಸಲಾಗಿದೆ. ಫೆಬ್ರವರಿ 25 ಹಾಗೂ ಮಾರ್ಚ್ 1 ರಂದು ತಲಾ 25 ರೂಪಾಯಿ ಹೆಚ್ಚಳವಾಗಿತ್ತು.
ಅಂತಾರಾಷ್ಟ್ರೀಯ ಮಟ್ಟದಲ್ಲಾದ ಬದಲಾವಣೆ ಹಿನ್ನೆಲೆಯಲ್ಲಿ ಜುಲೈ 1 ರಂದು ತೈಲ ಕಂಪನಿಗಳು ಸಿಲಿಂಡರ್ ಬೆಲೆಯನ್ನು 10 ರೂಪಾಯಿ ಇಳಿಸಿದ್ದವು. ಇದೀಗ ಮತ್ತೆ 25 ರೂಪಾಯಿ ಹೆಚ್ಚಿಸಿವೆ.
ದೇಶದ ಪ್ರಮುಖ ನಗರಗಳಲ್ಲಿ ಅಡುಗೆ ಅನಿಲ ಸಿಲಿಂಡರ್ ಬೆಲೆ ಹೀಗಿದೆ..
ಬೆಂಗಳೂರು - 862 ರೂ.
ಮುಂಬೈ - 859.5 ರೂ.
ಕೋಲ್ಕತ್ತಾ - 886 ರೂ.
ಚೆನ್ನೈ - 875.50 ರೂ.
ಲಖ್ನೋ - 897.5 ರೂ.
ಅಹಮದಾಬಾದ್ - 866.5 ರೂ.