ETV Bharat / bharat

ಅಯೋಧ್ಯೆಯಲ್ಲಿ 'ಲವ್​ ಜಿಹಾದ್​': ಯುವಕ ಸೇರಿ ಕುಟುಂಬದ ಸದಸ್ಯರ ವಿರುದ್ಧ ಪ್ರಕರಣ - ಈಟಿವಿ ಭಾರತ ಕರ್ನಾಟಕ

ಮುಸ್ಲಿಂ ಕುಟುಂಬವೊಂದು ತನ್ನ ಮಗಳನ್ನ ಕರೆದುಕೊಂಡು ಹೋಗಿ, ತಮ್ಮ ಧರ್ಮಕ್ಕೆ ಸೇರಿಸಿಕೊಂಡಿದ್ದಾಗಿ ಸಂತ್ರಸ್ತೆಯ ತಂದೆ ಆರೋಪ ಮಾಡಿದ್ದಾರೆ.

love jihad case
love jihad case
author img

By

Published : Sep 23, 2022, 12:40 PM IST

ಅಯೋಧ್ಯೆ(ಉತ್ತರ ಪ್ರದೇಶ): ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಲವ್ ಜಿಹಾದ್​ ಪ್ರಕರಣವೊಂದು ಕೇಳಿ ಬಂದಿದ್ದು, ಯುವಕ ಹಾಗೂ ಆತನ ಕುಟುಂಬದ ಸದಸ್ಯರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

19 ವರ್ಷದ ಯುವತಿಯೊಬ್ಬಳ ತಂದೆ ನೆರೆಹೊರೆಯಲ್ಲಿ ವಾಸವಾಗಿದ್ದ ಮುಸ್ಲಿಂ ಕುಟುಂಬವೊಂದು ತಮ್ಮ ಮಗಳನ್ನ ಕರೆದೊಯ್ದಿದ್ದಾರೆಂದು ಆರೋಪ ಮಾಡಿದ್ದಾರೆ. ಇದೀಗ ತಮ್ಮ ಮಗಳನ್ನ ಮುಸ್ಲಿಂ ಸಮುದಾಯಕ್ಕೆ ಪರಿವರ್ತನೆ ಮಾಡುವುದಾಗಿ ಬೆದರಿಕೆ ಸಹ ಹಾಕಿದ್ದಾರೆಂದು ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಗೋಸಾಯಿಗಂಜ್ ಪೊಲೀಸ್ ಠಾಣೆಯಲ್ಲಿ ಆರೋಪಿ ಪ್ರಕರಣ ದಾಖಲಾಗಿದೆ.

ಮನೆಯಿಂದ ಹೋಗುವಾಗ ತಮ್ಮ ಮಗಳು 1 ಲಕ್ಷ ರೂ ನಗದು ಹಾಗೂ ಚಿನ್ನಾಭರಣ ತೆಗೆದುಕೊಂಡು ಹೋಗಿದ್ದಾಗಿ ಸಂತ್ರಸ್ತೆಯ ತಂದೆ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣದ ಬೆನ್ನಲ್ಲೇ ಕಾಣೆಯಾದ ಯುವತಿ ಹಾಗೂ ಕುಟುಂಬ ಸದಸ್ಯರಿಗೋಸ್ಕರ ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನೂ ಓದಿ: ಯುವಕನ ವಿರುದ್ಧ ಲವ್​ ಜಿಹಾದ್​ ಆರೋಪ: ಪೊಲೀಸರೊಂದಿಗೆ ವಾಗ್ವಾದ ಮಾಡಿದ್ದ ಸಂಸದೆ ರಾಣಾ ವಿರುದ್ಧ ಕೇಸ್

ನನ್ನ ಮಗಳ ಜೀವ ಅಪಾಯದಲ್ಲಿದೆ ಎಂದಿರುವ ಸಂತ್ರಸ್ತೆಯ ತಂದೆ, ಮಗಳನ್ನ ಪ್ರೀತಿಯ ಬಲೆಯಲ್ಲಿ ಸಿಲುಕಿಸಿ ಆಕೆಯನ್ನ ಇದೀಗ ತಮ್ಮ ಧರ್ಮಕ್ಕೆ ಮತಾಂತರ ಮಾಡಿಕೊಳ್ಳಲು ಮುಂದಾಗಿದ್ದಾಗಿ ಹೇಳಿಕೊಂಡಿದ್ದಾರೆ. ಪೊಲೀಸರು ಸೆಕ್ಷನ್ 34, 504, 506, 392,393, 366 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೇ ಅಯೋಧ್ಯೆಯಲ್ಲೇ ಮತ್ತೊಂದು ಲವ್ ಜಿಹಾದ್ ಪ್ರಕರಣ ಕೇಳಿ ಬಂದಿದ್ದು, ಮುಸ್ಲಿಂ ಯುವಕನೊಂದಿಗೆ ಹಿಂದೂ ಹುಡುಗಿಯೊಬ್ಬಳು ಓಡಿ ಹೋಗಿದ್ದಾಳೆಂದು ಹೇಳಲಾಗ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.