ETV Bharat / bharat

'ತಮಿಳುನಾಡಲ್ಲಿ ಕಮಲ ಅರಳಲಿದೆ' - ಅಣ್ಣಾಮಲೈ ಪರ ನಟಿ ನಮಿತಾ ಮತಬೇಟೆ - ತಮಿಳುನಾಡು ವಿಧಾನಸಭೆ ಚುನಾವಣೆ

ಅರವಕುರಿಚಿ ಕ್ಷೇತ್ರವು ಬರಿದಾಗಿದ್ದು, ಈ ಸ್ಥಳವನ್ನು ಹಸಿರಾಗಿ ಪರಿವರ್ತಿಸಲು ಅಣ್ಣಾಮಲೈಗೆ ಮತ ಹಾಕಿ. ಎಡಪ್ಪಾಡಿ ಪಳನಿಸ್ವಾಮಿ ಅವರನ್ನು ಮತ್ತೆ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿ ಎಂದು ನಟಿ, ಬಿಜೆಪಿ ಸದಸ್ಯೆ ನಮಿತಾ ಹೇಳಿದ್ದಾರೆ.

actress namitha
ನಟಿ ನಮಿತಾ
author img

By

Published : Mar 26, 2021, 12:39 PM IST

ಕರೂರ್ (ತಮಿಳುನಾಡು): ವಿಧಾನಸಭೆ ಚುನಾವಣೆಯ ಬಿಜೆಪಿ ಅಭ್ಯರ್ಥಿ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರ ಪರ ಪ್ರಚಾರ ಕಾರ್ಯ ಕೈಗೊಂಡಿರುವ ನಟಿ ನಮಿತಾ, ತಮಿಳುನಾಡಲ್ಲಿ ಕಮಲ ಅರಳಲಿದೆ, ರಾಜ್ಯ ಬೆಳೆಯಲಿದೆ ಎಂದು ಹೇಳಿದ್ದಾರೆ.

ತಮಿಳುನಾಡಿನ ಕರೂರ್ ಜಿಲ್ಲೆಯಲ್ಲಿ ಇಂದು ರೋಡ್​ ಶೋ ನಡೆಸಿದ ಬಿಜೆಪಿ ಸದಸ್ಯೆ ನಮಿತಾ, ಅರವಕುರಿಚಿ ಕ್ಷೇತ್ರವು ಬರಡಾಗಿದ್ದು, ಈ ಸ್ಥಳವನ್ನು ಹಸಿರಾಗಿ ಪರಿವರ್ತಿಸಲು ಅಣ್ಣಾಮಲೈಗೆ ಮತ ಹಾಕಿ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಚೆನ್ನಾಗಿದ್ದು, ಎಡಪ್ಪಾಡಿ ಪಳನಿಸ್ವಾಮಿ ಅವರನ್ನು ಮತ್ತೆ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಬೇಕಿದೆ ಎಂದರು.

ಅಣ್ಣಾಮಲೈ ಪರ ನಟಿ ನಮಿತಾ ಮತಬೇಟೆ

ಹೆಚ್ಚಿನ ಓದಿಗೆ: ತಮಿಳುನಾಡು ವಿಧಾನಸಭೆ ಫೈಟ್‌: ಅಣ್ಣಾಮಲೈಗೆ ಬಿಜೆಪಿ ಟಿಕೆಟ್​​!

ರೋಡ್​ ಶೋ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ನಮಿತಾ, ಅಣ್ಣಾಮಲೈ ಈ ಹಿಂದೆ ಕರ್ನಾಟಕದಲ್ಲಿ ಐಪಿಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಖಂಡಿತವಾಗಿಯೂ ಅರವಕುರಿಚಿ ಕ್ಷೇತ್ರಕ್ಕೆ ಒಳ್ಳೆಯ ಕೆಲಸಗಳನ್ನು ಮಾಡುತ್ತಾರೆ. ಅವರು ಮುಂದೆ ಸಿಂಹದಂತೆ ಘರ್ಜಿಸಲಿದ್ದಾರೆ ಎಂದು ಹೇಳಿದರು.

ತಮಿಳುನಾಡಿನಲ್ಲಿ ಏಪ್ರಿಲ್​ 6ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ಡಿಎಂಕೆ - ಕಾಂಗ್ರೆಸ್​ - ಸಿಪಿಎಂ ಹಾಗೂ ಬಿಜೆಪಿ-ಎಐಎಡಿಎಂಕೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಲು ಸಿದ್ಧವಾಗಿವೆ. ಬಿಜೆಪಿಗೆ ಸೇರ್ಪಡೆಗೊಂಡಿದ್ದ ಕರ್ನಾಟಕದ ಸಿಂಗಂ ಖ್ಯಾತಿಯ ಮಾಜಿ ಐಪಿಎಸ್​​ ಅಧಿಕಾರಿ ಅಣ್ಣಾಮಲೈ ಅವರು ಅರವಕುರಿಚಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.