ಅಮ್ರೇಲಿ (ಗುಜರಾತ್): ಗುಜರಾತ್‌ನ ಅಮ್ರೇಲಿ ಜಿಲ್ಲೆಯಲ್ಲಿ ಜನರ ನಿದ್ದೆಗೆಸಿ, ಕೃಷಿ ಕಾರ್ಮಿಕನೋರ್ವನನ್ನು ಕೊಂದಿದ್ದ ಜೋಡಿ ಸಿಂಹಗಳ ಪೈಕಿ ಒಂದು ಸಿಂಹವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಅಮ್ರೇಲಿ ಜಿಲ್ಲೆಯ ಜಾಫರಾಬಾದ್ ತಾಲೂಕಿನಲ್ಲಿ ಕಳೆದ ವಾರ ಒಂದೇ ದಿನದಲ್ಲಿ ಆರು ಜನರ ಮೇಲೆ ಸಿಂಹಿಣಿಯೊಂದು ದಾಳಿ ಮಾಡಿತ್ತು. ಅಲ್ಲದೇ, ಶನಿವಾರ ಸಂಜೆ ಇದೇ ಜಿಲ್ಲೆಯ ಖಂಭ ತಾಲೂಕಿನ ನಾನಿ ಧಾರಿ ಗ್ರಾಮದಲ್ಲಿ ಮಧ್ಯಪ್ರದೇಶದ ಮೂಲದ ರೈತ ಕಾರ್ಮಿಕ ಭೈದೇಶ್ ಬುಲಾಭಾಯಿ ಎಂಬುವರನ್ನು ಜೋಡಿ ಸಿಂಹಗಳು ಕೊಂದು ತಿಂದಿದ್ದವು. ಇದರಿಂದ ಜನರಲ್ಲಿ ಸಾಕಷ್ಟು ಆತಂಕ ಮನೆ ಮಾಡಿದೆ.
ಇದನ್ನೂ ಓದಿ: ಒಂದೇ ದಿನ ಆರು ಜನರ ಮೇಲೆ ಸಿಂಹಿಣಿ ದಾಳಿ: ಚಿಂತೆಗೀಡಾದ ಅರಣ್ಯ ಇಲಾಖೆ
ಈ ಕೃಷಿ ಕಾರ್ಮಿಕನ ಬೇಟೆಯಾಡಿದ ಬಳಿಕ ಸಿಂಹಗಳ ಸೆರೆಗಾಗಿ ಮೂರು ವನ್ಯಜೀವಿ ವಲಯಗಳಲ್ಲಿ ಹಲವಾರು ಅರಣ್ಯ ಇಲಾಖೆ ತಂಡಗಳನ್ನು ನಿಯೋಜಿಸಲಾಗಿತ್ತು. ಭಾನುವಾರ ಬೆಳಗಿನ ಜಾವ 3.30ರ ಸುಮಾರಿಗೆ ಗಂಡು ಸಿಂಹವನ್ನು ಪತ್ತೆ ಹಚ್ಚಿ ಸೆರೆಹಿಡಿಯಲಿದೆ. ಅಲ್ಲದೇ, ಗಿರ್ ಲಯನ್ ಕೇರ್ ಸೆಂಟರ್‌ಗೆ ಸಿಂಹವನ್ನು ಸ್ಥಳಾಂತರಿಸಿ ನಿಗಾದಲ್ಲಿ ಇರಿಸಲಾಗಿದೆ ಎಂದು ಗಿರ್ ಪೂರ್ವದ ಅರಣ್ಯ, ವನ್ಯಜೀವಿ ಉಪ ಸಂರಕ್ಷಣಾಧಿಕಾರಿ ರಾಜದೀಪ್ ಸಿಂಗ್ ಝಾಲಾ ತಿಳಿಸಿದ್ದಾರೆ.
ಮನುಷ್ಯರ ಮೇಲೆ ಸಿಂಹಗಳು ದಾಳಿ ಮಾಡುವುದು ಹೊಸದಲ್ಲ. ಆದರೆ, ಕೃಷಿ ಕಾರ್ಮಿಕನನ್ನು ಕೊಂದ ರೀತಿ ಆಶ್ಚರ್ಯಕರವಾಗಿದೆ ಎಂದಿರುವ ಅವರು, ಸಿಂಹಗಳು ಮಿಲನವಾಗಿರುವ ಸಂದರ್ಭದಲ್ಲಿ ಆತ ಹತ್ತಿರ ಹೋಗಿರುವ ಸಾಧ್ಯತೆಯಿದೆ. ಸಿಂಹಗಳಿಗೆ ತುತ್ತಾಗಿದ್ದ ಆತನ ಎರಡು ಕಾಲುಗಳು ಮಾತ್ರ ಮೊದಲಿಗೆ ಪತ್ತೆಯಾಗಿದ್ದವು ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಮನೆಯಲ್ಲಿ ಬಾಂಬ್ ಸ್ಫೋಟ: ಮಹಿಳೆ ಸೇರಿ ಆರು ಜನರ ಸಾವು, 50 ಮೀಟರ್ ದೂರಕ್ಕೆ ತೂರಿಬಿದ್ದ ದೇಹ