ETV Bharat / bharat

ಲಿಂಗ ಅಸಮಾನತೆ ತೊಡೆದುಹಾಕಲು ಸಂಕಲ್ಪ ಮಾಡೋಣ: ಮಹಿಳಾ ದಿನಾಚರಣೆಗೆ ರಾಷ್ಟ್ರಪತಿ​ ಕೋವಿಂದ್​ ಟ್ವೀಟ್​ - ರಾಷ್ಟ್ರಪತಿ ರಾಮನಾಥ್ ಕೋವಿಂದ್ ಲೇಟೆಸ್ಟ್​ ಟ್ವೀಟ್​

ಲಿಂಗ ಸಮಾನತೆ ಉತ್ತೇಜಿಸಲು ಮತ್ತು ಲಿಂಗ ಅಸಮಾನತೆಯನ್ನು ತೊಡೆದುಹಾಕಲು ಎಲ್ಲಾ ಜನರು ಸಂಕಲ್ಪ ಮಾಡಬೇಕೆಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಟ್ವೀಟ್​ ಮಾಡಿದ್ದಾರೆ.

President
ಮಹಿಳಾ ದಿನಾಚರಣೆಗೆ ರಾಮನಾಥ್​ ಕೋವಿಂದ್​ ಟ್ವೀಟ್​
author img

By

Published : Mar 8, 2021, 9:58 AM IST

ನವದೆಹಲಿ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಶುಭಾಶಯ ಕೋರಿದ್ದಾರೆ. ಲಿಂಗ ಸಮಾನತೆ ಉತ್ತೇಜಿಸಲು ಮತ್ತು ಅಸಮಾನತೆಯನ್ನು ತೊಡೆದುಹಾಕಲು ಎಲ್ಲಾ ಜನರು ಸಂಕಲ್ಪ ಕೈಗೊಳ್ಳಬೇಕು ಎಂದು ಕರೆ ನೀಡಿದರು.

"ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು, ಎಲ್ಲಾ ನಾಗರಿಕರಿಗೆ ಶುಭಾಶಯಗಳು. ನಮ್ಮ ದೇಶದ ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಹೊಸ ದಾಖಲೆ ಮತ್ತು ಸಾಧನೆಗಳನ್ನು ಮಾಡುತ್ತಿದ್ದಾರೆ. ಲಿಂಗ ನ್ಯಾಯವನ್ನು ಉತ್ತೇಜಿಸಲು ಮತ್ತು ಮಹಿಳೆಯರು ಮತ್ತು ಪುರುಷರ ನಡುವಿನ ಅಸಮಾನತೆಯನ್ನು ತೊಡೆದುಹಾಕಲು ನಾವು ಒಟ್ಟಾಗಿ ಸಂಕಲ್ಪ ಕೈಗೊಳ್ಳೋಣ " ಎಂದು ರಾಷ್ಟ್ರಪತಿಯವರು ಟ್ವೀಟ್ ಮಾಡಿದ್ದಾರೆ.

ಮಹಿಳೆಯರ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಸಾಧನೆಗಳನ್ನು ಎತ್ತಿ ಹಿಡಿಯುವ ಸಲುವಾಗಿ ಪ್ರತಿ ವರ್ಷ ಮಾರ್ಚ್ 8 ರಂದು ಅಂತಾರಾಷ್ಟ್ರೀಯ ಮಹಿಳಾ ದಿನವನ್ನಾಗಿ ಆಚರಿಸಲಾಗುತ್ತದೆ. ಸಮಾಜದಲ್ಲಿ ಎದುರಾಗುತ್ತಿರುವ ವಿವಿಧ ಸವಾಲುಗಳ ಹೊರತಾಗಿಯೂ, ವಿಶ್ವದಾದ್ಯಂತ ಪ್ರತಿಯೊಂದು ಕ್ಷೇತ್ರದಲ್ಲೂ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ ಮಹಿಳೆಯರನ್ನು ಈ ದಿನ ಸ್ಮರಿಸಲಾಗುತ್ತದೆ.

ಇದನ್ನೂ ಓದಿ:ಸಾರ್ವಜನಿಕ ಸ್ಥಳಗಳಲ್ಲಿ ನಿಕಾಬ್, ಬುರ್ಖಾ ನಿಷೇಧಿಸುವ ಪ್ರಸ್ತಾವನೆಗೆ ಈ ದೇಶದ ಜನರ ಸಮ್ಮತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.