ETV Bharat / bharat

ಗಾಯಕಿ ಲತಾ ಮಂಗೇಶ್ಕರ್ ಆರೋಗ್ಯ ಸ್ಥಿರ, ಐಸಿಯುನಲ್ಲಿ ಮುಂದುವರೆದ ಚಿಕಿತ್ಸೆ - ತೀವ್ರ ನಿಗಾ ಘಟಕದಲ್ಲೇ ಲತಾ ಮಂಗೇಶ್ಕರ್​​ಗೆ ಚಿಕಿತ್ಸೆ

Lata Mangeshkar in ICU : ಕ್ವೀನ್​ ಆಫ್​ ಮೆಲೋಡಿ ಎಂದು ಕರೆಯಿಸಿಕೊಳ್ಳುವ ಲತಾ ಮಂಗೇಶ್ಕರ್​ ಅವರು 1942ರಲ್ಲಿ ಅಂದರೆ ತಮ್ಮ 13ನೇ ವಯಸ್ಸಿನಲ್ಲೇ ವೃತ್ತಿ ಜೀವನ ಆರಂಭಿಸಿದ್ದು, ಅನೇಕ ಭಾಷೆಗಳಲ್ಲಿ ಸುಮಾರು 30 ಸಾವಿರಕ್ಕೂ ಅಧಿಕ ಹಾಡು ಹಾಡಿದ್ದಾರೆ..

Lata Mangeshkar in ICU
Lata Mangeshkar in ICU
author img

By

Published : Jan 19, 2022, 6:29 PM IST

ಮುಂಬೈ(ಮಹಾರಾಷ್ಟ್ರ): ಕೋವಿಡ್ ಸೋಂಕಿಗೊಳಗಾಗಿ ಕಳೆದ ಕೆಲ ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಖ್ಯಾತ ಗಾಯಕಿ ಲತಾ ಮಂಗೇಶ್ಕರ್​ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಮುಂಬೈ ಬ್ರೀಚ್​ ಕ್ಯಾಂಡಿ ಆಸ್ಪತ್ರೆ ವಕ್ತಾರರು ಖ್ಯಾತ ಗಾಯಕಿ ಆರೋಗ್ಯಕ್ಕೆ ಸಂಬಂಧಿಸಿದಂತೆ ಅಪ್​ಡೇಟ್​ ನೀಡಿದ್ದಾರೆ. ಜನವರಿ 9ರಂದು ಆಸ್ಪತ್ರೆಗೆ ದಾಖಲಾಗಿರುವ ಮಂಗೇಶ್ಕರ್​ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದು ತಿಳಿಸಿದ್ದಾರೆ.

ಲತಾ ಮಂಗೇಶ್ಕರ್​ ಅವರ ವಕ್ತಾರ ಅನುಷಾ ಶ್ರೀನಿವಾಸನ್​ ಅಯ್ಯರ್ ಕೂಡ ಮಾಹಿತಿ ನೀಡಿದ್ದು, ಲತಾ ದೀದಿ ಅವರ ಆರೋಗ್ಯ ಸ್ಥಿರವಾಗಿದೆ. ವೈದ್ಯರು ತಿಳಿಸಿದ ನಂತರ ಡಿಸ್ಚಾರ್ಜ್​ ಮಾಡಿ ಮನೆಗೆ ಕರೆದುಕೊಂಡು ಹೋಗಲಾಗುವುದು ಎಂದಿದ್ದಾರೆ.

ಜೊತೆಗೆ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದೆ ಎಂಬ ವರದಿ ಸತ್ಯಕ್ಕೆ ದೂರವಾಗಿದೆ. ಇಂತಹ ಸುದ್ದಿ ನೋಡಿ ನಾವು ಆತಂಕಕ್ಕೊಳಗಾಗಿದ್ದೇವೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಆದಷ್ಟು ಬೇಗ ಚೇತರಿಸಿಕೊಳ್ಳಲು ಪ್ರಾರ್ಥನೆ ಮಾಡಿ ಎಂದಿದ್ದಾರೆ.

ಕ್ವೀನ್​ ಆಫ್​ ಮೆಲೋಡಿ ಎಂದು ಕರೆಯಿಸಿಕೊಳ್ಳುವ ಲತಾ ಮಂಗೇಶ್ಕರ್​ ಅವರು 1942ರಲ್ಲಿ ಅಂದರೆ ತಮ್ಮ 13ನೇ ವಯಸ್ಸಿನಲ್ಲೇ ವೃತ್ತಿ ಜೀವನ ಆರಂಭಿಸಿದ್ದು, ಅನೇಕ ಭಾಷೆಗಳಲ್ಲಿ ಸುಮಾರು 30 ಸಾವಿರಕ್ಕೂ ಅಧಿಕ ಹಾಡು ಹಾಡಿದ್ದಾರೆ.

ಇದನ್ನೂ ಓದಿರಿ: ಉತ್ತರಾಖಂಡ ಚುನಾವಣೆಯಲ್ಲಿ ನಾನು ಸ್ಪರ್ಧಿಸಲ್ಲ.. ನನ್ನ ಮನವಿ ಪುರಸ್ಕರಿಸಿ ಎಂದ ಮಾಜಿ ಸಿಎಂ ರಾವತ್​

92 ವರ್ಷದ ಪ್ರಖ್ಯಾತ ಗಾಯಕಿ 70ರ ದಶಕದಲ್ಲಿ ಸಂಗೀತ ಕ್ಷೇತ್ರದಲ್ಲಿ ತಮ್ಮದೇ ರೀತಿಯ ವಿಶಿಷ್ಟ ಛಾಪು ಮೂಡಿಸಿದ್ದರು. ಇವರಿಗೆ ದೇಶದ ಪ್ರತಿಷ್ಠಿತ ಪ್ರಶಸ್ತಿಗಳಾದ ಭಾರತ ರತ್ನ, ಪದ್ಮವಿಭೂಷಣ, ಪದ್ಮಭೂಷಣ, ದಾದಾಸಾಹೇಬ್​ ಫಾಲ್ಕೆ ಸೇರಿದಂತೆ ಅನೇಕ ಗೌರವಗಳು ಸಂದಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.