ETV Bharat / bharat

ಶವಾಗಾರಕ್ಕೆ ತರುವ ಮೃತದೇಹಗಳ ಸಂಖ್ಯೆ ಹೆಚ್ಚಳ: ಅಂತ್ಯಸಂಸ್ಕಾರಕ್ಕೆ ಹೆಚ್ಚಿನ ಹಣ ವಸೂಲಿ ಆರೋಪ

ಪಂಜಾಬ್​​ನಲ್ಲಿ ಕೋವಿಡ್​ ಪ್ರಕರಣಗಳು ಉಲ್ಭಣಿಸುತ್ತಿವೆ. ಈ ಮಧ್ಯೆ ರೋಗಿಗಳು ಮತ್ತು ಅವರ ಸಂಬಂಧಿಕರ ಸ್ಥಿತಿಯನ್ನು ಮತ್ತಷ್ಟು ಹದಗೆಡಿಸಲು ಆಸ್ಪತ್ರೆಗಳು ಮತ್ತು ಶವಾಗಾರಗಳು ಅತಿಯಾದ ಶುಲ್ಕ ಬೇರೆ ವಿಧಿಸುತ್ತಿವೆ. ಜೊತೆಗೆ ಶವಾಗಾರಗಳಿಗೆ ಬರುವ ಮೃತದೇಹಗಳ ಸಂಖ್ಯೆ ಸಹ ಹೆಚ್ಚುತ್ತಿರುವುದರಿಂದ ಅವುಗಳನ್ನು ಸುಡಲು ಪಂಜಾಬ್​ನ ಹಲವೆಡೆ ಮರದ ಸಮಸ್ಯೆ ಸಹ ಉಂಟಾಗಿದೆ.

funeral
funeral
author img

By

Published : May 8, 2021, 7:46 PM IST

ಪಂಜಾಬ್​: ರಾಜ್ಯದಲ್ಲಿ ಕೋವಿಡ್​ಗೆ ಬಲಿಯಾಗಿರುವ ಸಂಖ್ಯೆ ಗಣನೀಯ ಏರಿಕೆ ಕಾಣುತ್ತಿದೆ. ಈ ಮಧ್ಯೆ ರೋಗಿಗಳ ಸಂಬಂಧಿಕರ ಸ್ಥಿತಿಯನ್ನು ಮತ್ತಷ್ಟು ಹದಗೆಡಿಸಲು ಆಸ್ಪತ್ರೆಗಳು ಮತ್ತು ಶವಾಗಾರಗಳು ಅತಿಯಾದ ಶುಲ್ಕ ಬೇರೆ ವಿಧಿಸುತ್ತಿವೆ. ಜೊತೆಗೆ ಶವಾಗಾರಗಳಿಗೆ ಬರುವ ಮೃತದೇಹಗಳ ಸಂಖ್ಯೆ ಸಹ ಹೆಚ್ಚುತ್ತಿರುವುದರಿಂದ ಅವುಗಳನ್ನು ಸುಡಲು ಪಂಜಾಬ್​ನ ಹಲವೆಡೆ ಮರದ ಸಮಸ್ಯೆ ಸಹ ಉಂಟಾಗಿದೆ.

ಮೃತರ ಕುಟುಂಬಕ್ಕೆ ಸೋಂಕಿತ ಶವಸಂಸ್ಕಾರಕ್ಕೆ 10,000 ರಿಂದ 12,000 ರೂ. ವಿಧಿಸಲಾಗುತ್ತಿದೆ. ಶವಾಗಾರಗಳಲ್ಲಿ ಮರಗಳನ್ನು ಬಳಸಿ ಹೆಣ ಸುಡಲು 6,500 ರೂ. ವಿಧಿಸಲಾಗಿದೆ. ಕಳೆದ ವರ್ಷ ಸರ್ಕಾರ ಶವದ ದಹನಕ್ಕಾಗಿ ಉಚಿತ ಗ್ಯಾಸ್ ಸಿಲಿಂಡರ್‌ಗಳನ್ನು ನೀಡುತ್ತಿತ್ತು. ಆದರೆ, ಈ ವರ್ಷ, ಜನರು ಸಿಲಿಂಡರ್ ಖರೀದಿಸಲು ಒತ್ತಾಯಿಸಲಾಗುತ್ತದೆ. ಸಂಪೂರ್ಣ ದಹನ ವಿಧಿವಿಧಾನವನ್ನು ಮಾಡಲು, ಒಬ್ಬರಿಗೆ ನಾಲ್ಕು ಗ್ಯಾಸ್ ಸಿಲಿಂಡರ್‌ಗಳು ಬೇಕಾಗುತ್ತವೆ, ಇದಕ್ಕೆ ಒಟ್ಟು 6,500 ರೂ.ಗಳು ಖರ್ಚಾಗುತ್ತಿವೆ. ಆದರೆ, ವಾಸ್ತವವಾಗಿ 5000 ರೂ ಇದರ ವೆಚ್ಚ. ಆದರೆ, ಶವಾಗಾರಗಳು ಸಹ ಮೃತರ ಸಂಬಂಧಿಕರಿಂದ ಹಣ ಹೆಚ್ಚಿಗೆ ವಸೂಲಿ ಮಾಡುತ್ತಿವೆ ಎಂಬ ಆರೋಪ ಕೇಳಿ ಬಂದಿದೆ.

ಚಂಡೀಗಢ:

ಕೋವಿಡ್​ ಎರಡನೇ ಅಲೆ ದೇಶವನ್ನ ಕಂಗೆಡಿಸಿದೆ. ಚಂಡೀಗಢದ ಸೆಕ್ಟರ್ 25 ಶವಾಗಾರದಲ್ಲಿ, ಪ್ರತಿದಿನ ಸುಮಾರು 40 ಶವಗಳ ಅಂತ್ಯಕ್ರಿಯೆ ಮಾಡಲಾಗುತ್ತಿದೆ, ಅದರಲ್ಲಿ ಐವತ್ತು ಪ್ರತಿಶತದಷ್ಟು ಕೋವಿಡ್​ನಿಂದ ಮೃತಪಟ್ಟವರೇ ಆಗಿದ್ದಾರೆ. ಈ ಪ್ರಕ್ರಿಯೆಗೆ ಹೆಚ್ಚು ಸಮಯ ತಗುಲುವುದರಿಂದ ಸುಮಾರು ಆರು ಮೃತ ದೇಹಗಳನ್ನು ಮಾತ್ರ ವಿದ್ಯುತ್ ಶವಾಗಾರದಲ್ಲಿ ಶವಸಂಸ್ಕಾರ ಮಾಡಲಾಗುತ್ತಿದೆ. ಉಳಿದ ಶವಗಳನ್ನು ಮರ ಬಳಸಿ ದಹನ ಮಾಡಲಾಗುತ್ತದೆ.

ಭಟಿಂಡಾ:

ನಗರದಲ್ಲಿ ವಾರದಲ್ಲಿ ಆರು ದಿನಗಳವರೆಗೆ ಶವಾಗಾರಗಳು ತೆರೆದಿರುತ್ತವೆ. ಕೋವಿಡ್​​ನಿಂದ ಸಾವನ್ನಪ್ಪುವವರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ, ಇದರಿಂದಾಗಿ ಶವಸಂಸ್ಕಾರಕ್ಕಾಗಿ ಮರದ ಬೇಡಿಕೆಯೂ ಹೆಚ್ಚಾಗಿದೆ .ಈ ಮೊದಲು ಶವಾಗಾರಕ್ಕೆಂದು ವಾರಕ್ಕೊಮ್ಮೆ ಮರಗಳನ್ನು ಖರೀದಿಸಲಾಗ್ತಿತ್ತು. ಆದರೆ, ಈಗ ಸಾವುಗಳ ಸಂಖ್ಯೆ ಹೆಚ್ಚಾದ ಹಿನ್ನೆಲೆ ದಿನನಿತ್ಯ ಮರದ ಕಟ್ಟಿಗೆ ಖರೀದಿಸುವಂತಾಗಿದೆ.

ಜಲಂಧರ್:

ಇದಕ್ಕೂ ಮೊದಲು ಜಲಂಧರ್ ನಗರದಲ್ಲಿ ನಾಲ್ಕು ಅಥವಾ ಐದು ಶವಗಳನ್ನು ಒಂದು ದಿನದಲ್ಲಿ ಅಂತ್ಯಕ್ರಿಯೆ ಮಾಡಲಾಗ್ತಿತ್ತು. ಈಗ ಸುಮಾರು 12 ಶವಗಳನ್ನು ಒಂದು ದಿನ ದಹನ ಮಾಡಲಾಗುತ್ತಿದೆ. ಮೃತ ದೇಹಗಳ ಸಂಖ್ಯೆ ನಿರಂತರ ಹೆಚ್ಚುತ್ತಿರುವುದರಿಂದ, ಮುಂದಿನ ದಿನಗಳಲ್ಲಿ ಅವುಗಳನ್ನು ಸುಡಲು ಮರದ ಕೊರತೆ ಉಂಟಾಗಬಹುದು.

ಜಲಂಧರ್‌ನ ಕಿಶನ್‌ಪುರ ಶವಾಗಾರದ ವ್ಯವಸ್ಥಾಪಕ ಅನಿಲ್ ಕುಮಾರ್ ಅವರ ಪ್ರಕಾರ, ವಿದ್ಯುತ್​ ಯಂತ್ರಗಳ ಮೂಲ ಶವ ದಹಿಸಲು ಜನ ಇಷ್ಟ ಪಡುವುದಿಲ್ಲ. ಜನರು ತಮ್ಮ ಪ್ರೀತಿಪಾತ್ರರನ್ನು ಮರದ ಕಟ್ಟಿಗೆ ಬಳಸಿ ದಹನ ಮಾಡಲು ಬಯಸುತ್ತಾರೆ. ಅವರ ಪ್ರಕಾರ, ಅಂತಹ ವಿಷಯಗಳು ಈ ಜನರ ಭಾವನೆಗಳೊಂದಿಗೆ ಸಂಬಂಧ ಹೊಂದಿವೆ. ಈ ಕಾರಣದಿಂದಾಗಿ, ಎಲ್ಲ ಶವಾಗಾರಗಳಲ್ಲಿ ಮರದ ಬಳಕೆ ದ್ವಿಗುಣಗೊಂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.