ಜಮ್ಮು: ಭಾರಿ ಮಳೆಯಿಂದ ಜಮ್ಮು ಕಾಶ್ಮೀರದ ರಾಂಬನ್ ಜಿಲ್ಲೆಯ ಹಲವೆಡೆ ಭೂಕುಸಿತವಾಗಿದೆ. ಇದರಿಂದ ಅಮರನಾಥ ಯಾತ್ರಾರ್ಥಿಗಳನ್ನು ಹೊತ್ತೊಯ್ಯುವ ಬೆಂಗಾವಲು ಪಡೆ ವಾಹನಗಳೂ ಸೇರಿದಂತೆ ಸಾವಿರಾರು ವಾಹನಗಳ ಸಂಚಾರಕ್ಕೆ ಅಡಚಣೆಯಾಗಿದೆ. ತೀವ್ರ ಹಾನಿಗೀಡಾದ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಜಮ್ಮು- ಶ್ರೀನಗರ ರಾಷ್ಟ್ರೀಯ ಹೆದ್ದಾರಿಯು ಕಾಶ್ಮೀರವನ್ನು ದೇಶದ ಇತರ ಭಾಗಗಳೊಂದಿಗೆ ಸಂಪರ್ಕಿಸುವ ಏಕೈಕ ಸರ್ವಋತು ರಸ್ತೆಯಾಗಿದೆ. ರಾಂಬನ್ ಜಿಲ್ಲೆಯಲ್ಲಿ ಈ ಹೆದ್ದಾರಿಯ ನಾಲ್ಕು ಸ್ಥಳಗಳಲ್ಲಿ ದೊಡ್ಡ ದೊಡ್ಡ ಕಲ್ಲುಗಳು ಉರುಳಿಬಿದ್ದಿವೆ. ಭೂಕುಸಿತಕ್ಕೆ ರಸ್ತೆ ಹಾನಿಯಾಗಿದೆ.
ರಸ್ತೆಯ ದುರಸ್ತಿ ಕಾರ್ಯ ಪ್ರಗತಿಯಲ್ಲಿದೆ. ಯಾತ್ರಾರ್ಥಿಗಳ ಹೊತ್ತೊಯ್ಯುವ ಬೆಂಗಾವಲು ಪಡೆಗಳನ್ನು ಸದ್ಯಕ್ಕೆ ಚಂದರ್‌ಕೂಟ್ ಮತ್ತು ನಶ್ರಿಯಲ್ಲಿ ನಿಲ್ಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಕಾನೂನಿನ ಮುಂದೆ ಎಲ್ಲರೂ ಸಮಾನರು, ಗಾಂಧಿ ಕುಟುಂಬಕ್ಕೆ ವಿಶೇಷ ಆದ್ಯತೆಯಿಲ್ಲ: ಪ್ರಲ್ಹಾದ್ ಜೋಶಿ