ETV Bharat / bharat

ದೇಶಕ್ಕೆ ಸ್ವಾವಲಂಬನೆ ಮಾರ್ಗ ತೋರಿದ್ದು ಲಾಲ್ ಬಹದ್ದೂರ್ ಶಾಸ್ತ್ರಿ: ತಮಿಳುನಾಡು ರಾಜ್ಯಪಾಲ

ದೇಶದ ಸ್ವಾತಂತ್ರ್ಯದ ಮೊದಲ ಒಂದೂವರೆ ದಶಕಗಳಲ್ಲಿ ರಾಷ್ಟ್ರವು ತನ್ನ ರಕ್ಷಣಾ ಪಡೆಗಳಿಗೆ ತೀರಾ ಅಲ್ಪ ಗಮನ ನೀಡಿತ್ತು ಮತ್ತು ಜಮ್ಮು ಮತ್ತು ಕಾಶ್ಮೀರ ಮತ್ತು ಅಕ್ಸಾಯ್ ಚಿನ್‌ನಲ್ಲಿ ತನ್ನ ಪ್ರದೇಶಗಳನ್ನು ಶತ್ರುಗಳಿಗೆ ಕಳೆದುಕೊಳ್ಳುತ್ತಲೇ ಇತ್ತು ಎಂದು ರಾಜ್ಯಪಾಲ ಆರ್​.ಎನ್​. ರವಿ ಹೇಳಿದರು.

ದೇಶಕ್ಕೆ ಸ್ವಾವಲಂಬನೆಯ ಮಾರ್ಗ ತೋರಿದ್ದು ಲಾಲ್ ಬಹದ್ದೂರ್ ಶಾಸ್ತ್ರಿ: ತಮಿಳುನಾಡು ರಾಜ್ಯಪಾಲ
lal-bahadur-shastri-showed-the-way-to-self-reliance-for-the-country
author img

By

Published : Nov 24, 2022, 3:52 PM IST

ಚೆನ್ನೈ: ಸರ್ಕಾರದ ನೀತಿಗಳಲ್ಲಿ ಮಾದರಿ ಬದಲಾವಣೆಗಳನ್ನು ತರುವ ಮೂಲಕ ಅಂದಿನ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಭಾರತಕ್ಕೆ ಸ್ವಾವಲಂಬನೆಯ ಮಾರ್ಗ ತೋರಿದರು ಎಂದು ತಮಿಳುನಾಡು ರಾಜ್ಯಪಾಲ ಆರ್​.ಎನ್​. ರವಿ ಹೇಳಿದರು. ಬುಧವಾರ ಇಲ್ಲಿನ ಶಾಸ್ತ್ರಿ ಭವನದಲ್ಲಿ ಭಾರತದ ಎರಡನೇ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪ್ರತಿಮೆ ಅನಾವರಣಗೊಳಿಸಿದ ನಂತರ ಸಭೆ ಉದ್ದೇಶಿಸಿ ಮಾತನಾಡಿದರು.

ಸ್ವಾತಂತ್ರ್ಯ ಬಂದು 17 ವರ್ಷಗಳವರೆಗೆ ಭಾರತವು ರಕ್ಷಣೆ ಮತ್ತು ಆಹಾರದ ವಿಷಯದಲ್ಲಿ ಅವಮಾನ ಮತ್ತು ನಿರಾಸೆ ಅನುಭವಿಸಿತ್ತು ಎಂದು ರಾಜ್ಯಪಾಲರು ಹೇಳಿದರು. ಇದು ಜವಾಹರಲಾಲ್ ನೆಹರು ದೇಶದ ಪ್ರಧಾನಿಯಾಗಿದ್ದ ಅವಧಿಯ ವ್ಯಂಗ್ಯವಾದ ಉಲ್ಲೇಖವಾಗಿತ್ತು.

ದೇಶದ ಸ್ವಾತಂತ್ರ್ಯದ ಮೊದಲ ಒಂದೂವರೆ ದಶಕಗಳಲ್ಲಿ ರಾಷ್ಟ್ರವು ತನ್ನ ರಕ್ಷಣಾ ಪಡೆಗಳಿಗೆ ತೀರಾ ಅಲ್ಪ ಗಮನ ನೀಡಿತ್ತು ಮತ್ತು ಜಮ್ಮು ಮತ್ತು ಕಾಶ್ಮೀರ ಮತ್ತು ಅಕ್ಸಾಯ್ ಚಿನ್‌ನಲ್ಲಿ ತನ್ನ ಪ್ರದೇಶಗಳನ್ನು ಶತ್ರುಗಳಿಗೆ ಕಳೆದುಕೊಳ್ಳುತ್ತಲೇ ಇತ್ತು ಎಂದು ಅವರು ಹೇಳಿದರು. ಆ ದಿನಗಳಲ್ಲಿ ದೇಶ ಆದರ್ಶ ಮಾರ್ಗದಲ್ಲಿ ಸಾಗುತ್ತಿತ್ತೇ ಹೊರತು ವಾಸ್ತವಿಕ ಹಾದಿಯಲ್ಲಿ ಅಲ್ಲ ಎಂದರು.

'ಜೈ ಜವಾನ್, ಜೈ ಕಿಸಾನ್' ಎಂಬ ಘೋಷವನ್ನು ಸೃಷ್ಟಿಸಿದವರು ಶಾಸ್ತ್ರಿ. ಆದರೆ, ಇದು ಕೇವಲ ಘೋಷಣೆಯಾಗಿರಲಿಲ್ಲ. ದೇಶವು ತನ್ನ ರಕ್ಷಣಾ ಪಡೆಗಳನ್ನು ನೋಡುವ ದೃಷ್ಟಿಯಲ್ಲಿ ಈ ಘೋಷಣೆ ಒಂದು ಮಹತ್ತರ ಬದಲಾವಣೆಯನ್ನೇ ತಂದಿತು.ದೇಶದಲ್ಲಿ ಹಸಿರು ಕ್ರಾಂತಿಗೆ ಅಡಿಪಾಯ ಹಾಕಿದವರು ಲಾಲ್ ಬಹದ್ದೂರ್ ಶಾಸ್ತ್ರಿ. ಇದು ದೇಶದ ಆಹಾರ ಸ್ವಾವಲಂಬನೆಗೆ ಕಾರಣವಾಯಿತು ಎಂದು ರಾಜ್ಯಪಾಲ ಆರ್​.ಎನ್​. ರವಿ ತಿಳಿಸಿದರು.

ಇದನ್ನೂ ಓದಿ: ಬಹದ್ದೂರರ 118ನೇ ಜನ್ಮದಿನ: ಶಾಸ್ತ್ರಿಗಳ ಬಗ್ಗೆ ತಿಳಿದುಕೊಳ್ಳಲೇಬೇಕಾದ ವಿಚಾರಗಳು ಇವು...

ETV Bharat Logo

Copyright © 2024 Ushodaya Enterprises Pvt. Ltd., All Rights Reserved.