ETV Bharat / bharat

ನಿಲ್ದಾಣದಿಂದಲೇ ಕೆಎಸ್‌ಆರ್‌ಟಿಸಿ ಬಸ್ ಕಳ್ಳತನ: ಸಿಸಿಟಿವಿಯಲ್ಲಿ ದೃಶ್ಯ ಸೆರೆ

author img

By

Published : May 26, 2022, 9:40 PM IST

ಆಲುವಾ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಕೊಯಿಕ್ಕೋಡ್‌ಗೆ ತೆರಳಬೇಕಿದ್ದ ಕೆಎಸ್‌ಆರ್‌ಟಿಸಿ ಬಸ್​ ಅನ್ನು ಕಳ್ಳತನ ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನಸಿಕ ಅಸ್ವಸ್ಥ ಎಂದು ಶಂಕಿಸಲಾದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

KSRTC Bus stolen fro Aluva bus stand
ಆಲುವಾದಿಂದ ಕೋಝಿಕ್ಕೋಡ್‌ಗೆ ತೆರಳಬೇಕಿದ್ದ ಕೆಎಸ್‌ಆರ್‌ಟಿಸಿ ಬಸ್

ಎರ್ನಾಕುಲಂ (ಕೇರಳ): ಆಲುವಾದಿಂದ ಕೊಯಿಕ್ಕೋಡ್‌ಗೆ ತೆರಳಬೇಕಿದ್ದ ಕೆಎಸ್‌ಆರ್‌ಟಿಸಿ ಬಸ್​ ಅನ್ನು ಆಲುವಾ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಕಳವು ಮಾಡಲಾಗಿದೆ. ಬಳಿಕ ಪೊಲೀಸರು ಕಾಲೂರಿನಲ್ಲಿ ಬಸ್​ ಬಿಟ್ಟು ಹೋಗಿರುವುದನ್ನು ಪತ್ತೆ ಮಾಡಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನಸಿಕ ಅಸ್ವಸ್ಥ ಎಂದು ಶಂಕಿಸಲಾದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಸ್‌ ನಿಲ್ದಾಣದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಬಸ್​ ಕಳ್ಳತನದ ದೃಶ್ಯ ಸೆರೆಯಾಗಿದೆ.

ಕೆಎಸ್‌ಆರ್‌ಟಿಸಿ ಬಸ್ ಕಳ್ಳತನ

ಕಳ್ಳತನ ಮಾಡಲು ಬಂದಿದ್ದ ವ್ಯಕ್ತಿ ಮೆಕ್ಯಾನಿಕ್ ಬಟ್ಟೆ ಧರಿಸಿ ಬಂದು ಬಸ್ ಕದ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಫಾಸ್ಟ್ ಪ್ಯಾಸೆಂಜರ್ ಕೆಎಸ್​ಆರ್​ಟಿಸಿ ಬಸ್ ಕೊಯಿಕ್ಕೋಡ್​ಗೆ ತೆರಳಲು ಕೊಲ್ಲಿಯಲ್ಲಿ ನಿಂತಿತ್ತು. ಬೆಳಗ್ಗೆ 8.20ರ ಸುಮಾರಿಗೆ ಈ ಘಟನೆ ನಡೆದಿದೆ.

ಟ್ರಿಪ್‌ಗೆ ಮುನ್ನ ಮೆಕ್ಯಾನಿಕ್‌ ಬಸ್ ತಪಾಸಣೆಗೆ ಕೊಂಡೊಯ್ದಿದ್ದಾರೆ ಎಂದು ಬಸ್‌ ನಿಲ್ದಾಣದಲ್ಲಿದ್ದ ನೌಕರರು ಭಾವಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅಲುವಾ ಸರ್ಕಾರಿ ಆಸ್ಪತ್ರೆ ಬಳಿ ಬಸ್ ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದಿದೆ. ಈ ಅಪಘಾತದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಬಳಿಕ ವಿಚಾರಿಸಿದಾಗ ಬಸ್ ಕಳ್ಳತನವಾಗಿರುವುದು ತಿಳಿದು ಬಂದಿದೆ.

ಇದನ್ನೂ ಓದಿ: ಮೊಬೈಲ್​ ಕಳೆದು ಹೋದರೆ, ಕಳ್ಳತನವಾದ್ರೆ ಚಿಂತೆ ಬೇಡ.. ಈ 'APP'​ ಹುಡುಕಿಕೊಡಲಿದೆ ನಿಮ್ಮ ಫೋನ್​​!

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.