ETV Bharat / bharat

ಮೋದಿ ಪ್ರಧಾನಿಯಾಗಿ ಮೇ 26ಕ್ಕೆ ಏಳು ವರ್ಷ: 'ಬ್ಲ್ಯಾಕ್​ ಡೇ' ಆಚರಣೆಗೆ ರೈತರ ಸಿದ್ಧತೆ

author img

By

Published : May 23, 2021, 9:51 AM IST

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ದೇಶವ್ಯಾಪಿ ನಡೆಸುತ್ತಿರುವ ಪ್ರತಿಭಟನೆಗೆ ಮೇ 26ಕ್ಕೆ 6 ತಿಂಗಳು ತುಂಬುತ್ತಿದ್ದು, ಇದೇ ವೇಳೆ ನರೇಂದ್ರ ಮೋದಿ ಎರಡನೇ ಅವಧಿಗೆ ಪ್ರಧಾನಿಯಾಗಿ 7 ವರ್ಷವಾಗುತ್ತಿದೆ.

Kisan Morcha to mark Black Day on May 26
ಮೇ 26 ರಂದು 'ಬ್ಲ್ಯಾಕ್​ ಡೇ

ದೆಹಲಿ: ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆ 6 ತಿಂಗಳು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಮೇ 26 ರಂದು 'ಬ್ಲ್ಯಾಕ್​ ಡೇ' ಆಚರಿಸಲು ಸಂಯುಕ್ತ ಕಿಸಾನ್ ಮೋರ್ಚಾ ನಿರ್ಧರಿಸಿದೆ. ಮೇ 26ಕ್ಕೆ ನರೇಂದ್ರ ಮೋದಿ ದೇಶದ ಪ್ರಧಾನಿಯಾಗಿ 7 ವರ್ಷ ತುಂಬುತ್ತಿದೆ.

ಮೇ 26 ರಂದು ದೆಹಲಿಯ ಗಡಿಗಳಲ್ಲಿ ಜಮಾಯಿಸುವಂತೆ ಸಂಯುಕ್ತ ಕಿಸಾನ್​​ ಮೋರ್ಚಾ ದೇಶದ ರೈತರಿಗೆ ಕರೆ ನೀಡಿದೆ. ಈ ನಡುವೆ, ಕೋವಿಡ್ ಲಾಕ್‌ಡೌನ್​ ಇರುವುದರಿಂದ ಮನೆಯಿಂದಲೇ ಪ್ರತಿಭಟಿಸಿ ಎಂದು ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿಯ ಸಹ-ಸಂಚಾಲಕ ಅವಿಕ್ ಸಾ ಮನವಿ ಮಾಡಿದ್ದಾರೆ. ಸಾಮಾನ್ಯ ಜನರು ಕೂಡ ತಮ್ಮ ಮನೆ, ಕಚೇರಿ, ಅಂಗಡಿಗಳ ಮೇಲೆ ಕಪ್ಪು ಧ್ವಜ ಹಾರಿಸುವ ಮೂಲಕ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಬಹುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: 'ಮೊಸಳೆಗಳು ಮುಗ್ದ': ಪ್ರಧಾನಿ ವಿರುದ್ಧ ಮಾರ್ಮಿಕವಾಗಿ ವ್ಯಂಗ್ಯವಾಡಿದ ರಾಹುಲ್

ರೈತರ ಸಮಸ್ಯೆಗಳನ್ನು ಪರಿಹರಿಸುವಂತೆ ಕಿಸಾನ್ ಮೋರ್ಚಾ ಪ್ರಧಾನಿಗೆ ಪತ್ರ ಬರೆದಿದೆ. ರೈತರೊಂದಿಗೆ ಮಾತುಕತೆ ಪುನರಾರಂಭಿಸಿ ಎಂಎಸ್‌ಪಿಯಲ್ಲಿ ಧಾನ್ಯಗಳನ್ನು ಖರೀದಿಸಲು ಕಾನೂನು ಜಾರಿಗೆ ತರಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.