ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಪರವಾಗಿ ಪ್ರಚಾರ ಮಾಡಲು ಮೂವರು ಪಕ್ಷದ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್ ನಾಯಕರಾದ ಗೌರವ್ ವಲ್ಲಭ, ದೀಪೇಂದರ್ ಎಸ್ ಹೂಡಾ ಮತ್ತು ಸೈಯದ್ ನಸೀರ್ ಹುಸೇನ್ ತಮ್ಮ ಅಧಿಕೃತ ವಕ್ತಾರ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ನವದೆಹಲಿಯಲ್ಲಿ ಇಂದು ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಜಂಟಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಗೌರವ್ ವಲ್ಲಭ, ನಾನು ದೀಪೇಂದರ್ ಹೂಡಾ ಮತ್ತು ಹುಸೇನ್ ಅವರೊಂದಿಗೆ ಕಾಂಗ್ರೆಸ್ ವಕ್ತಾರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇವೆ. ಎಐಸಿಸಿ ಅಧ್ಯಕ್ಷ ಚುನಾವಣೆಯಲ್ಲಿ ಖರ್ಗೆ ಪರ ಪ್ರಚಾರ ಮಾಡುವುದಾಗಿ ತಿಳಿಸಿದರು. ಈ ಚುನಾವಣೆ ಮುಕ್ತ ಮತ್ತು ನ್ಯಾಯಸಮ್ಮತವಾಗಿರಬೇಕೆಂದು ಬಯಸುತ್ತೇವೆ ಎಂದು ಹೇಳಿದರು.
-
All 3 of us (Congress leaders Gourav Vallabh, Deepender S Hooda & Syed Naseer Hussain) resign from the post of official spokesperson to campaign for the election of Mallikarjun Kharge as party president & want this election to be free & fair: Congress' Gourav Vallabh pic.twitter.com/rgPaG59x4W
— ANI (@ANI) October 2, 2022 " class="align-text-top noRightClick twitterSection" data="
">All 3 of us (Congress leaders Gourav Vallabh, Deepender S Hooda & Syed Naseer Hussain) resign from the post of official spokesperson to campaign for the election of Mallikarjun Kharge as party president & want this election to be free & fair: Congress' Gourav Vallabh pic.twitter.com/rgPaG59x4W
— ANI (@ANI) October 2, 2022All 3 of us (Congress leaders Gourav Vallabh, Deepender S Hooda & Syed Naseer Hussain) resign from the post of official spokesperson to campaign for the election of Mallikarjun Kharge as party president & want this election to be free & fair: Congress' Gourav Vallabh pic.twitter.com/rgPaG59x4W
— ANI (@ANI) October 2, 2022
ಇದನ್ನೂ ಓದಿ: 26 ವರ್ಷಗಳ ಬಳಿಕ ದಕ್ಷಿಣ ಭಾರತದ ನಾಯಕನಿಗೆ ಸಿಗಲಿದೆ ಕಾಂಗ್ರೆಸ್ ಸಾರಥ್ಯ
ಇದೇ ವೇಳೆ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ನಾನು ಯಾರನ್ನೂ ವಿರೋಧಿಸಲು ಚುನಾವಣೆಗೆ ಇಳಿದಿಲ್ಲ. ಪಕ್ಷವನ್ನು ಬಲಪಡಿಸಲು ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಹಿರಿಯ ಮತ್ತು ಯುವ ನಾಯಕರು ಅಖಾಡಕ್ಕೆ ಇಳಿಯುವಂತೆ ಒತ್ತಾಯಿಸಿದ್ದರಿಂದ ಚುನಾವಣೆಗೆ ಸ್ಪರ್ಧಿಸಿರುವೆ. ಇಂದಿನಿಂದಲೇ ಅಧಿಕೃತವಾಗಿ ಪ್ರಚಾರ ಆರಂಭಿಸುತ್ತೇನೆ. ಅಲ್ಲದೇ, ನಾನು ಪಕ್ಷದ 'ಒಬ್ಬ ವ್ಯಕ್ತಿ, ಒಂದು ಹುದ್ದೆ' ತತ್ವಕ್ಕೆ ಅನುಗುಣವಾಗಿ ನಾಮಪತ್ರ ಸಲ್ಲಿಸಿದ ದಿನವೇ ರಾಜ್ಯಸಭೆಯ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಖರ್ಗೆ ತಿಳಿಸಿದರು.
ಈಗ ಜಿ23 ಗುಂಪು ಇಲ್ಲ: ಪಕ್ಷದ ಭಿನ್ನಮತೀಯ ನಾಯಕರ ಗುಂಪು ಎಂದು ಹೇಳಲಾಗುವುದು ಜಿ23 ಗುಂಪು ಈಗ ಇಲ್ಲ. ಎಲ್ಲ ನಾಯಕರು (ಜಿ 23) ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿರುದ್ಧ ಒಗ್ಗಟ್ಟಿನಿಂದ ಹೋರಾಡಲು ಒಟ್ಟಾಗಿ ಕೆಲಸ ಮಾಡಲು ಬಯಸುತ್ತಾರೆ. ಇದೇ ಕಾರಣಕ್ಕೆ ನನ್ನನ್ನು ಬೆಂಬಲಿಸುತ್ತಿದ್ದಾರೆ. ಜೊತೆಗೆ ದೇಶದಲ್ಲಿ ನಿರುದ್ಯೋಗ ಹಾಗೂ ಹಣದುಬ್ಬರ ಹೆಚ್ಚುತ್ತಿದೆ. ಶ್ರೀಮಂತರು ಮತ್ತು ಬಡವರ ನಡುವಿನ ಅಂತರವೂ ಏರಿಕೆಯಾಗುತ್ತಿದೆ. ಬಿಜೆಪಿಯ ಯಾವ ಭರವಸೆಗಳನ್ನೂ ಈಡೇರಿಸಿಲ್ಲ ಎಂದು ಖರ್ಗೆ ಟೀಕಿಸಿದರು.
-
There is no G23 camp now. All leaders (of G23) want to work together to stay united and fight against BJP-RSS. This is the reason they are supporting me: Congress MP Mallikarjun Kharge pic.twitter.com/Wger3mwEy3
— ANI (@ANI) October 2, 2022 " class="align-text-top noRightClick twitterSection" data="
">There is no G23 camp now. All leaders (of G23) want to work together to stay united and fight against BJP-RSS. This is the reason they are supporting me: Congress MP Mallikarjun Kharge pic.twitter.com/Wger3mwEy3
— ANI (@ANI) October 2, 2022There is no G23 camp now. All leaders (of G23) want to work together to stay united and fight against BJP-RSS. This is the reason they are supporting me: Congress MP Mallikarjun Kharge pic.twitter.com/Wger3mwEy3
— ANI (@ANI) October 2, 2022
ಇದನ್ನೂ ಓದಿ: ನಾನು ದೊಡ್ಡ ಬದಲಾವಣೆಗಾಗಿ ಹೋರಾಡುತ್ತಿದ್ದೇನೆ ಎಂದ ಖರ್ಗೆ: ಭಿನ್ನಮತೀಯ ನಾಯಕರಿಂದಲೂ ಬೆಂಬಲ
ಇದೇ ಸಂದರ್ಭದಲ್ಲಿ ಪಕ್ಷದಲ್ಲಿ ಬದಲಾವಣೆಗಾಗಿ ಸ್ಪರ್ಧಿಸಿರುವೆ ಎಂಬ ಮತ್ತೊಬ್ಬ ಅಭ್ಯರ್ಥಿ ಶಶಿ ತರೂರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಖರ್ಗೆ, ಚುನಾವಣೆಯ ನಂತರ ಸುಧಾರಣೆಗಾಗಿ ಯಾವುದೇ ನಿರ್ಧಾರವನ್ನು ಜಂಟಿಯಾಗಿ ತೆಗೆದುಕೊಳ್ಳಲಾಗುತ್ತದೆ ಹೊರತು ಒಬ್ಬ ವ್ಯಕ್ತಿಯಿಂದಲ್ಲ. ಗಾಂಧಿ ಕುಟುಂಬವು ತರೂರ್ ಅವರಿಗೂ ಬೆಂಬಲ ನೀಡುವುದಾಗಿ ಸಲಹೆ ನೀಡಿತ್ತು. ಆದರೆ, ಇದನ್ನು ತಿರಸ್ಕರಿಸಿದ ಅವರು, ಇತರ ನಾಯಕರು ಸ್ಪರ್ಧಿಸುವಂತೆ ಹೇಳಿದ್ದರು ಎಂದು ತಿಳಿಸಿದರು.
ಇದನ್ನೂ ಓದಿ: ಮೂರು ಬಾರಿ ಸಿಎಂ ಪಟ್ಟ ಕೈ ತಪ್ಪಿದರೂ ಪಕ್ಷ ನಿಷ್ಠೆ ಬಿಡದ ಖರ್ಗೆ: ಸೋಲಿಲ್ಲದ ಸರದಾರ ನಡೆದು ಬಂದ ದಾರಿ ಹೀಗಿದೆ...