ETV Bharat / bharat

ಹರ್ಷ ಹತ್ಯೆ ಪ್ರಕರಣ.. ವಿಶೇಷ ಕೋರ್ಟ್​ಗೆ ಎನ್​​ಐಎ ಚಾರ್ಜ್​​ಶೀಟ್​: ಹಿಂದೂಗಳ ಮೇಲೆ ಹಂತರಿಕರಿಗೆ ಇದೆಯಂತೆ ದ್ವೇಷ - ಹಿಂದೂಗಳ ಮೇಲೆ ದ್ವೇಷ

ಬಜರಂಗದಳ ಕಾರ್ಯಕರ್ತನ ಹಂತಕರು ಹಿಂದೂಗಳ ಮೇಲೆ ದ್ವೇಷ ಬೆಳೆಸಿಕೊಂಡಿದ್ದಾರೆ ಎಂದು ಎನ್‌ಐಎ ಸಲ್ಲಿಸಿರುವ ಚಾರ್ಜ್​ಶೀಟ್​ನಲ್ಲಿ ಹೇಳಲಾಗಿದೆ.

ಹರ್ಷ ಹತ್ಯೆ ಪ್ರಕರಣ
ಹರ್ಷ ಹತ್ಯೆ ಪ್ರಕರಣ
author img

By

Published : Sep 6, 2022, 9:03 PM IST

ಶಿವಮೊಗ್ಗ: ಭಜರಂಗದಳದ ಕಾರ್ಯಕರ್ತ ಹರ್ಷನ ಕೊಲೆ ಮಾಡಿರುವ ಆರೋಪಿಗಳು ಹಿಂದೂ ಸಮುದಾಯದ ಬಗ್ಗೆ ದ್ವೇಷ ಬೆಳೆಸಿಕೊಂಡಿದ್ದಾರೆ. ಇದೇ ವಿಚಾರವಾಗಿ ಹರ್ಷನ ವಿರುದ್ಧ ಘೋಷಣೆಗಳನ್ನು ಕೂಗಿ ಹತ್ಯೆ ಮಾಡಿದ್ದಾರೆ ಎಂದು ಎನ್​​ಐಎ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ತಿಳಿಸಲಾಗಿದೆ. ಇತ್ತೀಚೆಗಷ್ಟೇ ವಿಶೇಷ ನ್ಯಾಯಾಲಯಕ್ಕೆ ರಾಷ್ಟ್ರೀಯ ತನಿಖಾ ಸಂಸ್ಥೆ ಚಾರ್ಜ್​ಶೀಟ್​ ಸಲ್ಲಿಸಿತ್ತು.

ಚಾರ್ಜ್​ಶೀಟ್​ನಲ್ಲಿ ಇರುವುದೇನು?: ಕರ್ನಾಟಕದಲ್ಲಿ ಹಿಜಾಬ್ ಗದ್ದಲ ಜೋರಾಗಿದ್ದ ಸಂದರ್ಭದಲ್ಲೇ ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತನನ್ನು ಸಾರ್ವಜನಿಕವಾಗಿ ಹತ್ಯೆ ಮಾಡಲಾಗಿತ್ತು. ಈ ವಿಚಾರ ದೇಶಾದ್ಯಂತ ಸದ್ದು ಕೂಡಾ ಮಾಡಿತ್ತು. ಸಿಎಎ - ಎನ್‌ಆರ್‌ಸಿ ಸಮಸ್ಯೆ, ಹಿಜಾಬ್ ವಿವಾದ ಮತ್ತು ಬಜರಂಗದಳದ ಕಾರ್ಯಕರ್ತರ ಗೋಸಂರಕ್ಷಣಾ ಚಟುವಟಿಕೆಗಳ ವಿಚಾರವಾಗಿ ಆರೋಪಿಗಳು ಹಿಂದೂ ಸಮುದಾಯದ ಬಗ್ಗೆ ದ್ವೇಷವನ್ನು ಬೆಳೆಸಿಕೊಂಡಿದ್ದರು ಎಂದು ಎನ್​ಐಎ ನಡೆಸಿರುವ ತನಿಖೆಯಿಂದ ತಿಳಿದುಬಂದಿದೆ ಎಂದು ಚಾರ್ಜ್‌ಶೀಟ್​ನಲ್ಲಿ ವಿವರಿಸಲಾಗಿದೆ.

ದೇಶ ಮತ್ತು ರಾಜ್ಯದಲ್ಲಿ ನಡೆದ ಕೆಲವು ಬೆಳವಣಿಗೆಗಳ ಹಿನ್ನೆಲೆಯಲ್ಲಿ ಹಿಂದೂ ಸಮುದಾಯದ ಮೇಲೆ ಈ ಆರೋಪಿಗಳು ಗರಂ ಆಗಿದ್ದರು. ಶಿವಮೊಗ್ಗ ನಗರದಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯದ ಜನರ ನಡುವೆ ಕೋಮು ದಳ್ಳುರಿ, ದ್ವೇಷ ಮತ್ತು ದ್ವೇಷ ಹುಟ್ಟುಹಾಕಲು ಸಂಚು ರೂಪಿಸಿದ್ದರು ಎಂದು ಎನ್​​ಐಎ ತನಿಖೆ ವೇಳೆ ಕಂಡು ಬಂದಿದೆ.

ಹರ್ಷನ ಕೊಲೆ ಆರೋಪಿಗಳು ಶಿವಮೊಗ್ಗದ ಪ್ರಮುಖ ಹಿಂದೂ ಸಮುದಾಯದ ಮುಖಂಡರ ಮೆರವಣಿಗೆಗಳು, ಆಚರಣೆಗಳು ಮತ್ತು ಸಮುದಾಯದ ಕಾರ್ಯಕ್ರಮಗಳ ಚಲನವಲನಗಳ ಮೇಲೆ ತೀವ್ರ ನಿಗಾ ಇಟ್ಟಿದ್ದರು ಎಂಬ ಅಂಶವೂ ತನಿಖೆ ವೇಳೆ ಬಹಿರಂಗಗೊಂಡಿದೆ.

ಇದೇ ವಿಚಾರವಾಗಿ ಸಂಘಟನೆಯಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದ ಹರ್ಷನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು. ಭಯೋತ್ಪಾದನೆಯನ್ನು ಸೃಷ್ಟಿಸುವ ಸಲುವಾಗಿ ಶಸ್ತ್ರಾಸ್ತ್ರಗಳನ್ನು ಸಹ ಪಡೆದುಕೊಂಡಿದ್ದರು. ಹರ್ಷ ಅಲಿಯಾಸ್ ಹಿಂದೂ ಹರ್ಷನನ್ನು ಪತ್ತೆಹಚ್ಚಿದ ಬಳಿಕ ಆತನನ್ನು ಹಿಂಬಾಲಿಸಿ ಮಾರಕಾಸ್ತ್ರಗಳಿಂದ ಕೊಲೆ ಮಾಡಲಾಗಿದೆ ಈ ವೇಳೆ ಅವರು ಘೋಷಣೆಗಳನ್ನು ಕೂಗಿದ್ದಾರೆ ಎಂಬುದನ್ನು ಎನ್​​ಐಎ ತನಿಖೆ ವೇಳೆ ಬಯಲಾಗಿದೆ. ಈ ಎಲ್ಲ ಅಂಶಗಳನ್ನು ಎನ್​ಐಎ ಅಧಿಕಾರಿಗಳು ಚಾರ್ಜ್​ಶೀಟ್​ನಲ್ಲಿ ದಾಖಲಿಸಿದ್ದಾರೆ.

ಇದನ್ನು ಓದಿ:ಹಳ್ಳದಲ್ಲಿ ಕೊಚ್ಚಿ ಹೋದ ಇಬ್ಬರು ಪೊಲೀಸರು, ಒಬ್ಬರ ಮೃತದೇಹ ಪತ್ತೆ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.