ETV Bharat / bharat

ಪತ್ನಿ ಕೊಂದ ಗಂಡ ಕೆಲವೇ ಗಂಟೆಗಳಲ್ಲೇ ಹೃದಯಾಘಾತದಿಂದ ಸಾವು - ಮಾನಸಿಕ ಅಸ್ವಸ್ಥ

ಛತ್ತೀಸ್‌ಗಢದಲ್ಲಿ ಪತ್ನಿಯನ್ನು ಕುಡುಗೋಲಿನಿಂದ ಕತ್ತು ಸೀಳಿ ಕೊಲೆ ಮಾಡಿದ್ದ ಆರೋಪಿ ಗಂಡ ಹೃದಯಾಘಾತದಿಂದ ಸಾವಿಗೀಡಾಗಿದ್ದಾನೆ.

killer-husband-died-of-heart-attack-after-muder-wife-in-chhattisgarh
ಪತ್ನಿ ಕೊಂದ ಆರೋಪಿ ಗಂಡ ಕೆಲವೇ ಗಂಟೆಗಳಲ್ಲೇ ಹೃದಯಾಘಾತದಿಂದ ಸಾವು
author img

By

Published : Dec 18, 2022, 6:06 PM IST

ಗರಿಯಾಬಂದ್ (ಛತ್ತೀಸ್‌ಗಢ): 23 ವರ್ಷದ ಪತ್ನಿಯನ್ನು ಕತ್ತು ಸೀಳಿ ಕೊಲೆ ಮಾಡಿದ ವ್ಯಕ್ತಿಯೊಬ್ಬ ಕೆಲವೇ ಗಂಟೆಗಳಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಛತ್ತೀಸ್‌ಗಢದ ಗರಿಯಾಬಂದ್​ ಜಿಲ್ಲೆಯಲ್ಲಿ ನಡೆದಿದೆ.

ರತ್ನಿ ಬಾಯಿ ಕೊಲೆಯಾದ ಮಹಿಳೆಯಾಗಿದ್ದು, ವೀರೇಂದ್ರ ಧ್ರುವ ಎಂಬಾತನೇ ಹೃದಯಾಘಾತದಿಂದ ಮೃತಪಟ್ಟಿರುವ ಪತಿ. ಪತ್ನಿಯನ್ನು ವೀರೇಂದ್ರ ಕುಡುಗೋಲಿನಿಂದ ಕತ್ತು ಸೀಳಿ ಕೊಲೆ ಮಾಡಿದ್ದ. ಈ ಬಗ್ಗೆ ವಿಷಯ ತಿಳಿದು ಪೊಲೀಸರು ಸ್ಥಳಕ್ಕಾಗಮಿಸುವಷ್ಟರಲ್ಲಿ ಆತ ಪ್ರಜ್ಞೆ ತಪ್ಪಿ ಬಿದ್ದಿದ್ದ. ಕೂಡಲೇ ವೀರೇಂದ್ರನನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ, ಅಷ್ಟರಲ್ಲೇ ಆತ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

ವೀರೇಂದ್ರ ಮಾನಸಿಕ ಅಸ್ವಸ್ಥನಾಗಿದ್ದ ಎಂದು ತಿಳಿದು ಬಂದಿದೆ. ಸದ್ಯ ಪತ್ನಿ ಕೊಲೆಗೆ ಬಳಸಿದ್ದ ಕುಡುಗೋಲನ್ನು ವಶಕ್ಕೆ ಪಡೆಯಲಾಗಿದೆ. ಎರಡೂ ಮೃತ ದೇಹಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಗರಿಯಾಬಂದ್ ಉಪವಿಭಾಗದ ಪೊಲೀಸ್ ಅಧಿಕಾರಿ ಪುಷ್ಪೇಂದ್ರ ನಾಯಕ್ ತಿಳಿಸಿದ್ದಾರೆ.

ಇದನ್ನೂ ಓದಿ: ಮೈಸೂರು: ಬೆತ್ತಲೆ ಫೋಟೋ ಕಳುಹಿಸಿ ಹಣ ಪೀಕುತ್ತಿದ್ದ ಸುಂದರಿ ಅಂದರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.