ಭಿಲಾಯಿ (ಛತ್ತೀಸ್ಗಢ): ಛತ್ತೀಸ್ಗಢದ ದುರ್ಗ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಕೌಟುಂಬಿಕ ಕಲಹದಿಂದಾಗಿ ವ್ಯಕ್ತಿಯೊಬ್ಬ ತನ್ನ ಪತ್ನಿ ಹಾಗೂ ಮೂವರು ಪುತ್ರಿಯರ ಮೇಲೆ ಕತ್ತಿ ಹಾಗೂ ದೊಣ್ಣೆಯಿಂದ ದಾಳಿ ಮಾಡಿದ್ದು, ಇದರಲ್ಲಿ 18 ವರ್ಷದ ಮಗಳು ಪ್ರಾಣ ಕಳೆದುಕೊಂಡಿದ್ದಾರೆ. ಉಳಿದಂತೆ ಪತ್ನಿ ಮತ್ತು ಇಬ್ಬರ ಮಕ್ಕಳ ಕೂಡ ಗಂಭೀರವಾಗಿ ಗಾಯಗೊಂಡಿದ್ದು, ಮೂವರ ಸ್ಥಿತಿ ಕೂಡ ಚಿಂತಾಜನಕವಾಗಿದೆ.
ಇದನ್ನೂ ಓದಿ: ನೇರ ಮದುವೆ ದಿಬ್ಬಣಕ್ಕೆ ನುಗ್ಗಿದ ಕಾರು: ಓರ್ವ ಸ್ಥಳದಲ್ಲೇ ಸಾವು, 31 ಜನರಿಗೆ ಗಂಭೀರ ಗಾಯ
ಇಲ್ಲಿನ ಭಿಲಾಯಿ ಪ್ರದೇಶದ ಖುರ್ಸಿಪರ್ ಪೊಲೀಸ್ ಠಾಣೆ ವ್ಯಾಪ್ತಿಯ ಲೇಬರ್ ಕಾಲೋನಿಗೆ ಶುಕ್ರವಾರ ತಡರಾತ್ರಿ ಈ ಘಟನೆ ಜರುಗಿದೆ. ಇಲ್ಲಿನ ನಿವಾಸಿಯಾದ ಅಮರ್ ದೇವ್ರಾಯ್ ಎಂಬಾತನೇ ಕೃತ್ಯ ಎಸಗಿದ್ದಾರೆ. ತಂದೆಯ ಕೈಯಲ್ಲಿ ಹತ್ಯೆಯಾದ ಪುತ್ರಿಯನ್ನು ಜ್ಯೋತಿ ರಾಯ್ ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಪತ್ನಿ ದೇವಂತಿ ರಾಯ್, ಇನ್ನುಳಿದ ಪುತ್ರಿಯರಾದ ವಂದನಾ ರಾಯ್ ಹಾಗೂ ಪ್ರೀತಿ ರಾಯ್ ಅವರನ್ನು ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ತಡರಾತ್ರಿ 3.30ರ ನಡೆದ ಗಲಾಟೆ: ಈ ಘಟನೆಯ ವಿಷಯ ತಿಳಿಸಿದ ಪೊಲೀಸರು ಸ್ಥಳಕ್ಕೆ ಶ್ವಾನ ದಳ ಮತ್ತು ವಿಧಿವಿಜ್ಞಾನ ತಂಡದೊಂದಿಗೆ ತೆರಳಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತ ಮಾತನಾಡಿರುವ ಖುರ್ಸಿಪರ್ ಪೊಲೀಸ್ ಠಾಣೆಯ ಪ್ರಭಾರಿ ವೀರೇಂದ್ರ ಶ್ರೀವಾಸ್ತವ, ಅಮರ್ ದೇವ್ರಾಯ್ ಮನೆಯಲ್ಲಿ ತಡರಾತ್ರಿ ಕೌಟುಂಬಿಕ ವಿಷಯವಾಗಿ ಜಗಳ ಆರಂಭವಾಗಿದೆ. ಈ ವೇಳೆ, 3.30ರ ಸುಮಾರಿಗೆ ಪತ್ನಿ ಹಾಗೂ ಮೂವರು ಪುತ್ರಿಯರ ಮೇಲೆ ಆರೋಪಿ ಕತ್ತಿ ಹಾಗೂ ದೊಣ್ಣೆಯಿಂದ ದಾಳಿ ಮಾಡಿದ್ದಾನೆ. ಈ ಬಗ್ಗೆ ಬೆಳಗ್ಗೆ 4 ಗಂಟೆಗೆ ಪೊಲೀಸರಿಗೆ ಮಾಹಿತಿ ದೊರೆಯಿತು ಎಂದು ತಿಳಿಸಿದ್ದಾರೆ.
ಮಾಹಿತಿ ತಿಳಿದ ತಕ್ಷಣವೇ ಪೊಲೀಸ್ ತಂಡ ಸ್ಥಳಕ್ಕೆ ದೌಡಾಯಿಸಿತು. ಈ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ತಾಯಿ ಮತ್ತು ಮೂವರನ್ನು ರವಾನಿಸಲಾಯಿತು. ಆದರೆ, ಆಸ್ಪತ್ರೆಯಲ್ಲಿ 18 ವರ್ಷದ ಓರ್ವ ಪುತ್ರಿ ಮೃತಪಟ್ಟಿದ್ದಾರೆ. ಉಳಿದ ಎಲ್ಲರನ್ನೂ ಜಿಲ್ಲಾಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಶಂಕರಾಚಾರ್ಯ ಆಸ್ಪತ್ರೆಗೆ ರವಾನಿಸಲಾಗಿದೆ. ಮತ್ತೊಂದೆಡೆ, ಆರೋಪಿ ಅಮರ್ದೇವ್ ರಾಯ್ನನ್ನೂ ಈಗಾಗಲೇ ಬಂಧಿಸಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ: 8 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಗ್ಯಾರೇಜ್ ಯುವಕನ ಬಂಧನ
ಇನ್ನು, ಮನೆಯಲ್ಲಿ ಈ ವೇಳೆ ನಡೆಯುವಾಗ ಆರೋಪಿ ಅಮರದೇವ್ ರೈ ಅವರ ಅಳಿಯ ಅಭಿಷೇಕ್ ಸಿಂಗ್ ಕೂಡ ಹಾಜರಿದ್ದರು. ಈ ಬಗ್ಗೆ ಆತನಿಂದಲೂ ಹೇಳಿಕೆ ದಾಖಲಿಸಿಕೊಳ್ಳಲಾಗಿದ್ದು, ಆರೋಪಿಯಾದ ತನ್ನ ಮಾವ ಪತ್ನಿ ಹಾಗೂ ಮೂವರು ಪುತ್ರಿಯರ ಮೇಲೆ ದಾಳಿ ನಡೆಸಿರುವ ಕುರಿತಾದ ವಿವರಗಳನ್ನು ಅಳಿಯ ಮಾಹಿತಿ ನೀಡಿದ್ದಾನೆ. ಸದ್ಯ ಇಡೀ ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ವೀರೇಂದ್ರ ಶ್ರೀವಾಸ್ತವ ತಿಳಿಸಿದ್ದಾರೆ.
ಇದನ್ನೂ ಓದಿ: ತುಮಕೂರಲ್ಲಿ ಭೀಕರ ಅಪಘಾತ: ನವ ವಿವಾಹಿತ ದಂಪತಿ ಸಾವು