ETV Bharat / bharat

ಮೂವರು ಸಹೋದರಿಯರು ನೇಣು ಬಿಗಿದುಕೊಂಡು ಆತ್ಮಹತ್ಯೆ... ಕಾರಣ? - ಮಧ್ಯಪ್ರದೇಶದ ಖಂಡ್ವಾ ಜಿಲ್ಲೆಯಲ್ಲಿ ಮೂವರು ಸಹೋದರಿಯರು ನೇಣುಬಿಗಿದು ಆತ್ಮಹತ್ಯೆ

ಮೂವರು ಸಹೋದರಿಯರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದ ಖಂಡ್ವಾ ಜಿಲ್ಲೆಯಲ್ಲಿ ನಡೆದಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ವರದಿ ಬಂದ ಬಳಿಕವಷ್ಟೇ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ.

khandwa-three-sisters-committed-suicide-by-hanging
ಖಂಡ್ವಾ : ಮೂವರು ಸಹೋದರಿಯರು ನೇಣು ಬಿಗಿದು ಆತ್ಮಹತ್ಯೆ
author img

By

Published : Jul 27, 2022, 9:07 PM IST

ಖಂಡ್ವಾ (ಮಧ್ಯಪ್ರದೇಶ) : ಮೂವರು ಸಹೋದರಿಯರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಖಂಡ್ವಾ ಜಿಲ್ಲೆಯ ಜಾವರ್ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟಾಘಾಟ್ ಗ್ರಾಮದಲ್ಲಿ ನಡೆದಿದೆ. ಮೃತ ಸಹೋದರಿಯರನ್ನು ಸೋನು, ಸಾವಿತ್ರಿ, ಲಲಿತಾ ಎಂದು ಗುರುತಿಸಲಾಗಿದೆ. ಮಂಗಳವಾರ ಮುಂಜಾನೆ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ನೇಣು ಬಿಗಿದ ಸ್ಥಿತಿಯಲ್ಲಿ ಸಹೋದರಿಯರ ಮೃತದೇಹ ಪತ್ತೆಯಾಗಿದೆ. ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಜವರ್ ಪೊಲೀಸ್ ಠಾಣೆಯ ಅಧಿಕಾರಿ ಶಿವರಾಮ್ ಜಾಟ್, ಮೃತ ಸಹೋದರಿಯರ ತಂದೆ ಜಾಂಸಿಂಗ್ ಈಗಾಗಲೇ ನಿಧನರಾಗಿದ್ದಾರೆ. ಕುಟುಂಬದಲ್ಲಿ ಒಟ್ಟು ಎಂಟು ಮಂದಿ ಒಡಹುಟ್ಟಿದವರು. ಇವರಲ್ಲಿ ಇಬ್ಬರು ಸಹೋದರಿಯರಿಗೆ ಮದುವೆಯಾಗಿಲ್ಲ. ಅಕ್ಕ ಸಾವಿತ್ರಿ ಕೆಲ ದಿನಗಳ ಹಿಂದೆ ತನ್ನ ತಾಯಿ ಮನೆಗೆ ಹೆರಿಗೆಗೆ ಬಂದಿದ್ದರು. ಕೌಟುಂಬಿಕ ಸಮಸ್ಯೆಯ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅವರು ಹೇಳಿದ್ದಾರೆ.

ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ: ಈ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಸ್ಥಳದಲ್ಲಿ ಡೆತ್​ನೋಟ್ ಪತ್ತೆಯಾಗಿಲ್ಲ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವಷ್ಟೇ ಸಾವಿಗೆ ನಿಜವಾದ ಕಾರಣ ಬಹಿರಂಗವಾಗಲಿದೆ. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಓದಿ : ರೋಡ್ ರೋಮಿಯೋಗೆ ಚಪ್ಪಲಿ ಏಟು.. ನಡುರಸ್ತೆಯಲ್ಲೇ ಥಳಿಸಿದ ಮಹಿಳೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.