ETV Bharat / bharat

ಹಿಜ್ಬ್ ಉತ್ ತಹ್ರೀರ್ ಪ್ರಕರಣ: ಹೈದರಾಬಾದ್​ನಲ್ಲಿ ಪ್ರಮುಖ ಆರೋಪಿ ಬಂಧಿಸಿದ ಎನ್​ಐಎ ಅಧಿಕಾರಿಗಳು

ಹಿಜ್ಬ್ ಉತ್ ತಹ್ರೀರ್ ಪ್ರಕರಣದಲ್ಲಿ ಎನ್ಐಎ ಅಧಿಕಾರಿಗಳ ತನಿಖೆ ಚುರುಕಾಗಿ ಸಾಗುತ್ತಿದೆ. ಈಗಾಗಲೇ ಹಿಜ್ಬುತ್ ತಹ್ರೀರ್​ಗೆ ಸೇರಿದ 16 ಮಂದಿಯನ್ನು ಬಂಧಿಸಿರುವ ಎನ್​ಐಎ ತಂಡ ಪರಾರಿಯಾಗಿರುವ ಪ್ರಮುಖ ಆರೋಪಿ ಸಲ್ಮಾನ್​ನನ್ನು ಹೈದರಾಬಾದ್​ನ ರಾಜೇಂದ್ರ ನಗರದಲ್ಲಿ ಬಂಧಿಸಿದೆ.

Key accused caught by NIA  Salman arrested in Hut terror organization case  Hut terror organization case  ಹಿಜ್ಬ್ ಉತ್ ತಹ್ರೀರ್ ಪ್ರಕರಣ  ಹೈದರಾಬಾದ್​ನಲ್ಲಿ ಪ್ರಮುಖ ಆರೋಪಿ  ಪ್ರಮುಖ ಆರೋಪಿಯನ್ನು ಬಂಧಿಸಿದ ಎನ್​ಐಎ ಅಧಿಕಾರಿಗಳು  ಭಯೋತ್ಪಾದಕ ಸಂಘಟನೆ ಹಿಜ್ಬ್ ಉತ್ ತಹ್ರೀರ್  ರಾಷ್ಟ್ರೀಯ ತನಿಖಾ ಸಂಸ್ಥೆ  ರಾಜೇಂದ್ರನಗರದಲ್ಲಿ ಆರೋಪಿಯನ್ನು ಬಂಧಿಸಿರುವ ಎನ್‌ಐಎ
ಹಿಜ್ಬ್ ಉತ್ ತಹ್ರೀರ್ ಪ್ರಕರಣ
author img

By

Published : Aug 2, 2023, 12:10 PM IST

ಹೈದರಾಬಾದ್​, ತೆಲಂಗಾಣ: ಭೋಪಾಲ್ - ಹೈದರಾಬಾದ್‌ನಲ್ಲಿ ಬೇಸ್ (ಮಾಡ್ಯೂಲ್) ಆಗಿ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕ ಸಂಘಟನೆ ಹಿಜ್ಬ್ ಉತ್ ತಹ್ರೀರ್ (ಹಟ್) ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಮೊಹಮ್ಮದ್ ಸಲ್ಮಾನ್‌ನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮಂಗಳವಾರ ಬಂಧಿಸಿದೆ. ಹೈದರಾಬಾದ್‌ನ ರಾಜೇಂದ್ರನಗರದಲ್ಲಿ ಆರೋಪಿಯನ್ನು ಬಂಧಿಸಿರುವ ಎನ್‌ಐಎ, ಆತನ ಎರಡು ನಿವಾಸಗಳಿಂದ ಡಿಜಿಟಲ್ ಸಾಧನಗಳಾದ ಹಾರ್ಡ್ ಡಿಸ್ಕ್, ಪೆನ್ ಡ್ರೈವ್ ಮತ್ತು ಎಸ್‌ಡಿ ಕಾರ್ಡ್‌ಗಳನ್ನು ವಶಪಡಿಸಿಕೊಂಡಿದೆ.

ಈ ಪ್ರಕರಣದಲ್ಲಿ ಇಲ್ಲಿಯವರೆಗೆ ಬಂಧಿತರ ಸಂಖ್ಯೆ 17ಕ್ಕೆ ತಲುಪಿದೆ. ಸಲ್ಮಾನ್ ಹಟ್‌ನ ಹೈದರಾಬಾದ್ ವಿಭಾಗದ ಪ್ರಮುಖ ಸದಸ್ಯ ಎಂದು NIA ಪತ್ತೆ ಮಾಡಿದೆ. ಈ ಪ್ರಕರಣದಲ್ಲಿ ಈಗಾಗಲೇ ಬಂಧಿತನಾಗಿರುವ ಸಲೀಂ ಎಂಬಾತನಿಂದ ಸಂಗ್ರಹಿಸಿದ ಮಾಹಿತಿ ಆಧರಿಸಿ ಆತನನ್ನು ಬೇಟೆಯಾಡಿ ಹಿಡಿಯಲಾಗಿದೆಯಂತೆ.

ಕಳೆದ ವರ್ಷ ಮೇ 9 ರಂದು ಹಟ್ ಸಂಘಟನೆಯ ಭಯೋತ್ಪಾದಕ ಚಟುವಟಿಕೆಗಳನ್ನು ಭೋಪಾಲ್ ಪೊಲೀಸರು ಮೊದಲು ಪತ್ತೆ ಹಚ್ಚಿದ್ದರು. ಮೇ 24 ರಂದು ಭೋಪಾಲ್, ಛಿಂದ್ವಾರಾ ಮತ್ತು ಹೈದರಾಬಾದ್‌ನಲ್ಲಿ ಏಕಕಾಲದಲ್ಲಿ ದಾಳಿ ಮಾಡಲಾಗಿತ್ತು ಮತ್ತು 16 ಜನರನ್ನು ಬಂಧಿಸಲಾಯಿತು. ಆ ವೇಳೆ, ಆರೋಪಿಗಳಿಂದ ವಶಪಡಿಸಿಕೊಂಡ ಮೊಬೈಲ್‌ಗಳನ್ನು ಪರಿಶೀಲಿಸಿದಾಗ ವಿಚಲಿತ ಸಂಗತಿಗಳು ಬೆಳಕಿಗೆ ಬಂದಿವು.

ಟೈಲರ್, ಆಟೋ ಚಾಲಕರು, ಜಿಮ್ ತರಬೇತುದಾರರು, ಕಂಪ್ಯೂಟರ್ ಆಪರೇಟರ್‌ಗಳಾಗಿ ವಿವಿಧ ಪ್ರದೇಶಗಳಲ್ಲಿ ನೆಲೆಸಿರುವಾಗ ಗುಪ್ತ ಸಭೆಗಳ ಮೂಲಕ ಭಯೋತ್ಪಾದಕ ದಾಳಿ ನಡೆಸಿರುವುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಇವರೆಲ್ಲ ನಗರಗಳ ಸಮೀಪದ ಅರಣ್ಯಗಳಲ್ಲಿ ಆಯುಧ ಸ್ಫೋಟಿಸುವ ತರಬೇತಿ ಪಡೆದಿರುವುದು ಬೆಳಕಿಗೆ ಬಂದಿದ್ದು, ಹೈದರಾಬಾದ್ ಘಟಕದ ಸದಸ್ಯರು ಇದಕ್ಕೆ ಕೇಂದ್ರವಾಗಿ ವಿಕಾರಾಬಾದ್ ಜಿಲ್ಲೆಯ ಅನಂತಗಿರಿ ಅರಣ್ಯವನ್ನು ಆಯ್ಕೆ ಮಾಡಿಕೊಂಡಿದ್ದರು ಎಂಬುದು ತನಿಖೆ ಮೂಲಕ ತಿಳಿದು ಬಂದಿತ್ತು.

ಈ ಸಂಘಟನೆಯ ಸದಸ್ಯರು ದೇಶಾದ್ಯಂತ ಬೃಹತ್ ದಾಳಿ ನಡೆಸಲು ಯೋಜನೆ ರೂಪಿಸಿದ್ದು, ಐವರು ಆರೋಪಿಗಳು ಧರ್ಮಕ್ಕೆ ಮತಾಂತರಗೊಂಡಿದ್ದು, ಇಬ್ಬರು ಅನ್ಯ ಧರ್ಮದ ಯುವತಿಯರನ್ನು ವಿವಾಹವಾಗಿದ್ದಾರೆ ಎಂಬ ಅಂಶವೂ ಬಯಲಾಗಿದೆ. ಆತ್ಮಹತ್ಯ ದಾಳಿಗೆ ಸಂಚು ರೂಪಿಸಿದ್ದಕ್ಕೆ ಸಾಕ್ಷ್ಯವೂ ಸಿಕ್ಕಿದೆ. ತನಿಖಾ ಸಂಸ್ಥೆಗಳು ಆರೋಪಿಗಳ ಸೆಲ್‌ಫೋನ್‌ಗಳಲ್ಲಿ ಪಾಕಿಸ್ತಾನದ ಕೆಲವು ಜನರ ಸಂಖ್ಯೆಗಳನ್ನು ಒಳಗೊಂಡಿರುವುದನ್ನು ಪತ್ತೆ ಮಾಡಿದೆ. ದೇಶದಲ್ಲಿ ಭಯೋತ್ಪಾದಕ ದಾಳಿಗೆ ಹಣ ವಿದೇಶದಿಂದ ಬರುತ್ತಿದೆ ಎಂದು ಎನ್​ಐಎ ಕಂಡುಕೊಂಡಿದೆ.

ತನಿಖೆಯ ಸಮಯದಲ್ಲಿ ಸಲೀಂ, ಸಲ್ಮಾನ್ ಮತ್ತು ಇತರ ನಾಲ್ವರು ಒಟ್ಟಾಗಿ ಹೈದರಾಬಾದ್ ಮೂಲದಿಂದ​ ನಿರ್ವಹಿಸುತ್ತಿದ್ದಾರೆ. ಅವರು ತಮ್ಮ ಸಂಸ್ಥೆಯ ಚಟುವಟಿಕೆಗಳನ್ನು ವಿಸ್ತರಿಸಲು ಯೂಟ್ಯೂಬ್ ಚಾನೆಲ್ ಅನ್ನು ಬಳಸುತ್ತಿದ್ದರು. ದಾಳಿ ವೇಳೆ ಉಳಿದ ಐವರು ಸಿಕ್ಕಾಗ ಸಲ್ಮಾನ್ ಪರಾರಿಯಾಗಿದ್ದಾನೆ. ಆತ ಸಿಕ್ಕರೆ ಈ ಬೇಸ್​ಗೆ ಸಂಬಂಧಿಸಿದ ಮಹತ್ವದ ಮಾಹಿತಿ ಬಹಿರಂಗವಾಗಲಿದೆ ಎಂದು ಅಧಿಕಾರಿಗಳು ತಿಳಿದಿದ್ದರು.

ದೇಶದಲ್ಲಿ ಷರಿಯತ್ ಕಾನೂನಿನ ಅನುಷ್ಠಾನ ಮತ್ತು ಖಲೀಫತ್ ಸ್ಥಾಪನೆಯ ಪರವಾಗಿ ಯುವಕರ ಗುಂಪನ್ನು ಸಜ್ಜುಗೊಳಿಸುವ ಗುರಿಯನ್ನು ಹಟ್ ಹೊಂದಿದೆ ಎಂದು ಎನ್ಐಎ ಹೇಳಿದೆ. ಕೊನೆಗೂ ಪ್ರಮುಖ ಆರೋಪಿ ಸಿಕ್ಕಿಬಿದ್ದಿರುವುದರಿಂದ ಪ್ರಕರಣದ ತನಿಖೆ ಇನ್ನಷ್ಟು ಚುರುಕುಗೊಳ್ಳುವ ಸಾಧ್ಯತೆ ಇದೆ.

ಓದಿ: ಕೊಯಮತ್ತೂರು ಕಾರು ಸ್ಫೋಟ ಪ್ರಕರಣ : ಮತ್ತೊಬ್ಬ ಆರೋಪಿ ಬಂಧಿಸಿದ ಎನ್‌ಐಎ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.