ETV Bharat / bharat

ಕತ್ತಲಿನಿಂದ ಬೆಳಕಿನೆಡೆಗೆ.. ಪ್ರಿಯತಮೆಯನ್ನು 10 ವರ್ಷ ಕೋಣೆಯಲ್ಲಿ ಬಚ್ಚಿಟ್ಟ ವ್ಯಕ್ತಿ ಕೊನೆಗೂ ಮದುವೆಯಾದ! - ಕೇರಳ ಪಾಲಕ್ಕಾಡ್

ಇಬ್ಬರ ಪ್ರೀತಿಗೆ ಕುಟುಂಬಸ್ಥರಿಂದ ತೀವ್ರ ವಿರೋಧ ವ್ಯಕ್ತವಾದ ಕಾರಣ ಯುವತಿಯನ್ನು ತಾನು ವಾಸವಾಗಿದ್ದ ಕೋಣೆಯಲ್ಲೇ ಆತ ಅಡಗಿಸಿಟ್ಟು ಸಲಹುತ್ತಿದ್ದ. ಸುಮಾರು 10 ವರ್ಷಗಳ ಕಾಲ ಚಿಕ್ಕ ಕೋಣೆಯಲ್ಲೇ ಆಕೆ ಯಾರಿಗೂ ಗೊತ್ತಿಲ್ಲದಂತೆ ವಾಸವಾಗಿದ್ದಳು.

Kerala lovers
Kerala lovers
author img

By

Published : Sep 15, 2021, 8:09 PM IST

ಪಾಲಕ್ಕಾಡ್​(ಕೇರಳ): ಒಂದಲ್ಲ, ಎರಡಲ್ಲ ಬರೋಬ್ಬರಿ ಹತ್ತು ವರ್ಷಗಳ ಕಾಲ ಯಾರಿಗೂ ಗೊತ್ತಿಲ್ಲದಂತೆ ಮನೆಯಲ್ಲೇ ಪ್ರೇಯಸಿಯನ್ನು ಅಡಗಿಸಿಟ್ಟಿದ್ದ ವ್ಯಕ್ತಿ ಕೊನೆಗೂ ಆಕೆಯ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾನೆ. ಕೇರಳದ ಪಾಲಕ್ಕಾಡ್​​ನಲ್ಲಿ ಈ ಘಟನೆ ನಡೆದಿದೆ.

ಸಬ್​ ರಿಜಿಸ್ಟರ್​ ಕಚೇರಿಯಲ್ಲಿ ವಿಶೇಷ ಮದುವೆ ಕಾಯ್ದೆಯಡಿ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಸ್ಥಳೀಯ ಶಾಸಕ ಕೆ. ಬಾಬು ಹಾಜರಾಗಿದ್ದರು. ಈ ವೇಳೆ ಮಾತನಾಡಿರುವ ಅವರು, ಈ ಜೋಡಿಗೆ ಎಲ್ಲ ರೀತಿಯಿಂದಲೂ ಸಹಾಯ ಮಾಡುವ ಭರವಸೆ ನೀಡಿದ್ದಾರೆ.

ಏನಿದು ಪ್ರಕರಣ?

34 ವರ್ಷದ ರಹಮಾನ್​​​ ನೆರೆಮನೆಯ 28 ವರ್ಷದ ಯುವತಿ ಸಜಿತಾಳನ್ನು ಪ್ರೀತಿಸುತ್ತಿದ್ದ. ಆದರೆ ಇದಕ್ಕೆ ಪೋಷಕರಿಂದ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಸಜಿತಾ ಮನೆ ಬಿಟ್ಟು ಬಂದಿದ್ದಳು. ಅವಳನ್ನು ಎಲ್ಲಿ ಕರೆದುಕೊಂಡು ಹೋಗಬೇಕು ಎಂಬುದು ಗೊತ್ತಾಗದೇ ರಹಮಾನ್​ ತನ್ನ ಮನೆಯ ಕೋಣೆಯಲ್ಲಿ ಬಚ್ಚಿಟ್ಟಿದ್ದ. ರಾತ್ರಿ ವೇಳೆ ಕಿಟಕಿಯಿಂದ ಹೊರಬರುತ್ತಿದ್ದ ಆಕೆ, ನಿತ್ಯ ಕರ್ಮ ಮುಗಿಸಿ, ಕೋಣೆಯೊಳಗೆ ಸೇರಿಕೊಳ್ಳುತ್ತಿದ್ದಳು. ಸುಮಾರು 10 ವರ್ಷಗಳ ಕಾಲ ಮಹಿಳೆ ರೂಂನಲ್ಲಿ ಇದೇ ರೀತಿಯಾಗಿ ಜೀವನ ಸಾಗಿಸಿದ್ದಾಳೆ.

Kerala lovers
ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಹಮಾನ್​- ಸಜಿತಾ

ಇದನ್ನೂ ಓದಿ: ಬಿಜೆಪಿ-ಆರ್‌ಎಸ್‌ಎಸ್‌​​ ನಕಲಿ ಹಿಂದೂಗಳು, ರಾಜಕೀಯ ಲಾಭಕ್ಕಾಗಿ ಧರ್ಮ ಬಳಕೆ ಮಾಡ್ತಾರೆ: ರಾಹುಲ್​ ಗಾಂಧಿ

ಕಳೆದ ಕೆಲ ದಿನಗಳ ಹಿಂದೆ ರಹಮಾನ್​​ ಹೊರಗಡೆ ಹೋಗಿದ್ದ ಸಂದರ್ಭದಲ್ಲಿ ಆತನ ಸಹೋದರ ಆಕೆಯನ್ನು ಗುರುತಿಸಿದ್ದಾನೆ. ಹೀಗಾಗಿ ಪ್ರಕರಣ ಬೆಳಕಿಗೆ ಬಂದಿದೆ. ಈ ವೇಳೆ ಪೊಲೀಸರಿಗೂ ಮಾಹಿತಿ ಗೊತ್ತಾಗುತ್ತಿದ್ದಂತೆ ಮಧ್ಯಪ್ರವೇಶ ಮಾಡಿದ್ದಾರೆ. ಈ ವೇಳೆ ನಡೆದ ಘಟನಾವಳಿಯನ್ನು ರಹಮಾನ್​ ಹೇಳಿದ್ದಾನೆ. ಹೀಗಾಗಿ ಅವರನ್ನು ಕೋರ್ಟ್​ ಮುಂದೆ ಹಾಜರುಪಡಿಸಲಾಗಿತ್ತು. ಈ ವೇಳೆ ಪರಸ್ಪರ ಮದುವೆ ಮಾಡಿಕೊಳ್ಳಲು ಒಪ್ಪಿಕೊಂಡಿರುವ ಕಾರಣ ಕೋರ್ಟ್​​ ಅನುಮತಿ ನೀಡಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.