ಕಾಶ್ಮೀರ: ವೃತ್ತಿಪರ ಕಾಶ್ಮೀರಿ ಸೈಕ್ಲಿಸ್ಟ್ ಆದಿಲ್ ತೆಲಿ ಎಂಬುವರು ಇಂದು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸುಮಾರು 3,600 ಕಿಲೋಮೀಟರ್ ದೂರವನ್ನು ಎಂಟು ದಿನ, ಒಂದು ಗಂಟೆ 37 ನಿಮಿಷದಲ್ಲಿ ಕ್ರಮಿಸಿ ಸಾಧನೆ ಮಾಡಿದ್ದಾರೆ.
ಒರಟು ಭೂಪ್ರದೇಶಗಳು, ಕಠಿಣ ಹವಾಮಾನ ಪರಿಸ್ಥಿತಿಗಳು, ಟ್ರಾಫಿಕ್ ಮತ್ತು ಇತರ ತೊಂದರೆಗಳು ಸೇರಿದಂತೆ ಎಲ್ಲ ವಿಲಕ್ಷಣಗಳನ್ನು ಎದುರಿಸಿ ಆದಿಲ್ ಈ ಇತಿಹಾಸ ಬರೆದಿದ್ದಾರೆ. ಓಂ ಮಹಾಜನ್ ಬರೆದ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಇವರು ಮುರಿದಿದ್ದಾರೆ.
-
Thank you sir ❤ https://t.co/m4r3lxHOXI
— Adil Teli (@ImAdilteli) March 18, 2021 " class="align-text-top noRightClick twitterSection" data="
">Thank you sir ❤ https://t.co/m4r3lxHOXI
— Adil Teli (@ImAdilteli) March 18, 2021Thank you sir ❤ https://t.co/m4r3lxHOXI
— Adil Teli (@ImAdilteli) March 18, 2021
ಶ್ರೀನಗರದ ಲಾಲ್ ಚೌಕ್ ಪ್ರದೇಶದ ವಿಭಾಗೀಯ ಆಯುಕ್ತ ಪಾಂಡುರಂಗ್ ಕೆ ಪೋಲ್ ಅವರು ಚಾಲನೆ ನೀಡಿದ ನಂತರ ಬುದ್ಗಾಮ್ ಜಿಲ್ಲೆಯ ನಾರ್ಬಲ್ ಪ್ರದೇಶದ ಯುವ ಸೈಕ್ಲಿಸ್ಟ್ ಆದಿಲ್ ಮಾರ್ಚ್ 22 ರಂದು ತಮ್ಮ ಪ್ರಯಾಣ ಪ್ರಾರಂಭಿಸಿದರು.
ಸೈಕ್ಲಿಂಗ್ ಬಗ್ಗೆ ಉತ್ಸಾಹ ಹೊಂದಿದ್ದ ಆದಿಲ್ ಅವರು ಈಗಾಗಲೇ ಶ್ರೀನಗರದಿಂದ ಲೇಹ್‌ಗೆ 440 ಕಿಲೋಮೀಟರ್ ದೂರವನ್ನು ಕೇವಲ 26 ಗಂಟೆ, 30 ನಿಮಿಷಗಳಲ್ಲಿ ಕ್ರಮಿಸಿ ತಮ್ಮ ಹೆಸರಿನಲ್ಲಿ ದಾಖಲೆ ನಿರ್ಮಿಸಿದ್ದರು.
ಸೈಕ್ಲಿಂಗ್ ಯಾತ್ರೆಯಲ್ಲಿ ಆದಿಲ್ ಅವರನ್ನು ಬೆಂಬಲಿಸಿದ ಮತ್ತು ಪ್ರಾಯೋಜಿಸಿದ ಅಬ್ರಾಕ್ ಆಗ್ರೋ ಈ ಮಹತ್ತರ ಸಾಧನೆಗೆ ಆದಿಲ್ ಅವರನ್ನು ಶ್ಲಾಘಿಸಿದ್ದಾರೆ.
ವಿಶ್ವ ದಾಖಲೆ ನಿರ್ಮಿಸುವ ಕನಸನ್ನು ಬೆನ್ನತ್ತಿ ಆದಿಲ್ ಅಮೃತಸರಕ್ಕೆ ತೆರಳಿದರು. ಅಲ್ಲಿ ಅವರು 4-5 ತಿಂಗಳು ಕಠಿಣ ತರಬೇತಿಗೆ ಒಳಗಾದರು. ಅಮೃತಸರದ ಗುರುನಾನಕ್ ದೇವ್ ವಿಶ್ವವಿದ್ಯಾಲಯದಲ್ಲಿ ಸೈಕ್ಲಿಂಗ್ ವಿಭಾಗದ ಹೆಚ್ಒಡಿಯಾಗಿದ್ದ ರಾಜೇಶ್ ಅವರು ತರಬೇತಿ ನೀಡಿದ್ದಾರೆ.