ಉತ್ತರ ಪ್ರದೇಶ: ಕಾಸ್ಗಂಜ್ ಕಾನ್‌ಸ್ಟೇಬಲ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಹಿಸ್ಟರಿ-ಶೀಟರ್ ಮೋತಿ ಸಿಂಗ್ನನ್ನು ಇಂದು ಮುಂಜಾನೆ ಉತ್ತರ ಪ್ರದೇಶ ಪೊಲೀಸರು ಎನ್ಕೌಂಟರ್ ಮಾಡಿದ್ದಾರೆ.
ಹೆಚ್ಚಿನ ಚಿಕಿತ್ಸೆಗಾಗಿ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಸಿಂಗ್ನನ್ನು ಬಂಧಿಸಲು 12 ಜನ ಪೊಲೀಸರ ತಂಡ ರಚಿಸಿದ್ದು, ಪೊಲೀಸ್ ಠಾಣೆಯಿಂದ ದರೋಡೆ ಮಾಡಿದ ಪಿಸ್ತೂಲ್ ಸಹ ವಶಪಡಿಸಿಕೊಳ್ಳಲಾಗಿದೆ.
ಕಾಸ್ಗಂಜ್ ಎಸ್ಪಿ ಮನೋಜ್ ಕುಮಾರ್ ಸೋಂಕರ್ ಮಾತನಾಡಿ, ಪೊಲೀಸರು ಗುಂಡು ಹಾರಿಸುವ ಮುನ್ನ ಸಿಂಗ್ ಪೊಲೀಸ್ ತಂಡದ ಮೇಲೆ ಹಲ್ಲೆ ನಡೆಸಿದ್ದಾನೆ. ಇದಕ್ಕೂ ಮುನ್ನ, ಫೆಬ್ರವರಿ 10 ರಂದು ಕಾಸ್ಗಂಜ್ ಪೊಲೀಸರು ಸಿಂಗ್ ಸೋದರ ಸಂಬಂಧಿ ಎಲ್ಕರ್ ಸಿಂಗ್ನನ್ನು ಎನ್ಕೌಂಟರ್ ಮಾಡಿದ್ದರು.
ಆರೋಪಿ ತಾಯಿ ಸಿಯಾರಾನಿ, ಸಹಚರರಾದ ನವಾಬ್ ಮತ್ತು ಗುಡು ನನ್ನು ಬಂಧಿಸಿದ್ದರು. ಸಿಂಗ್‌ಗೆ ವಾರೆಂಟ್ ನೀಡಲು ಪೊಲೀಸ್ ತಂಡ ನಾಗ್ಲಾ ಧೀಮರ್ ಗ್ರಾಮಕ್ಕೆ ಹೋದಾಗ ಕಾನ್‌ಸ್ಟೇಬಲ್ ದೇವೇಂದ್ರನನ್ನು ಹೊಡೆದು ಕೊಂದಿದ್ದು, ಸಬ್ ಇನ್ಸ್ಪೆಕ್ಟರ್ ಗಂಭೀರವಾಗಿ ಗಾಯಗೊಂಡಿದ್ದರು.