ETV Bharat / bharat

ರಾಮ್ಸನ್ ಪಟ್ಟಿಗೆ ಕರ್ನಾಟಕದ ರಂಗನತಿಟ್ಟು.. ದೇಶದಲ್ಲೀಗ 64 ತಾಣಗಳಿಗೆ ಅಂತಾರಾಷ್ಟ್ರೀಯ ಮನ್ನಣೆ - ರಾಮ್ಸನ್ ಪಟ್ಟಿಗೆ ಕರ್ನಾಟಕದ ರಂಗನತಿಟ್ಟು

ಕರ್ನಾಟಕದ ಪ್ರಸಿದ್ಧ ರಂಗನತಿಟ್ಟು ಸೇರಿದಂತೆ ದೇಶದ 10 ತಾಣಗಳಿಗೆ ರಾಮ್ಸನ್​ ಪಟ್ಟಿಯಲ್ಲಿ ಸ್ಥಾನ ಸಿಕ್ಕಿದೆ.

karnatakas-ranganathittu
Etv Bharatರಾಮ್ಸನ್ ಪಟ್ಟಿಗೆ ಕರ್ನಾಟಕದ ರಂಗನತಿಟ್ಟು
author img

By

Published : Aug 4, 2022, 9:36 AM IST

ನವದೆಹಲಿ: ಪಕ್ಷಿಧಾಮವಾದ ಕರ್ನಾಟಕದ ರಂಗನತಿಟ್ಟು "ರಾಮ್ಸರ್​ ಪಟ್ಟಿ"ಗೆ ಕೊನೆಗೂ ಸೇರ್ಪಡೆಯಾಗಿದೆ. ಇದಲ್ಲದೇ, ತಮಿಳುನಾಡಿನ 6, ಗೋವಾ, ಮಧ್ಯಪ್ರದೇಶ, ಒಡಿಶಾದ ತಲಾ ಒಂದು ಪ್ರದೇಶವನ್ನು ಅಂತಾರಾಷ್ಟ್ರೀಯ ಮಹತ್ವದ ಜೌಗು ಪ್ರದೇಶ ಎಂದು ಗುರುತಿಸಲಾಗಿದೆ. ದೇಶದಲ್ಲಿ ಈ ರೀತಿಯ ಪ್ರದೇಶಗಳ ಸಂಖ್ಯೆ 64 ಕ್ಕೆ ಏರಿಕೆಯಾಗಿದೆ.

ಈ ಬಗ್ಗೆ ಕೇಂದ್ರ ಪರಿಸರ ಸಚಿವಾಲಯ ಮಾಹಿತಿ ಹಂಚಿಕೊಂಡಿದ್ದು, ದೇಶದಲ್ಲೀಗ ಅಂತಾರಾಷ್ಟ್ರೀಯ ಪ್ರಾಮುಖ್ಯತೆಯ ಜೌಗು ಪ್ರದೇಶಗಳ ಸಂಖ್ಯೆ 64 ಆಗಿದೆ. ಈ ಮೂಲಕ ವಿಶ್ವದಲ್ಲಿಯೇ ಅತಿ ಹೆಚ್ಚು ಜೌಗು ಪ್ರದೇಶಗಳಿರುವ ದೇಶ ಎಂಬ ಖ್ಯಾತಿಗೆ ಪಾತ್ರವಾಗಿದೆ.

ಈ ಮೊದಲು ಚೀನಾ ಮಾತ್ರ ಈ ಶ್ರೇಯಕ್ಕೆ ಪಾತ್ರವಾಗಿತ್ತು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷಗಳು ತುಂಬಿತ್ತಿರುವ ಕಾರಣ 75 ತಾಣಗಳಿಗೆ ರಾಮ್ಸರ್​ ಸ್ಥಾನಮಾನ ಕೊಡಿಸಬೇಕು ಎಂಬ ಗುರಿಯನ್ನು ಕೇಂದ್ರ ಸರ್ಕಾರ ಹಾಕಿಕೊಂಡಿತ್ತು. ಆದರೆ 64 ಕ್ಕೆ ಮಾತ್ರ ಈ ಮನ್ನಣೆ ಸಿಕ್ಕಿದೆ.

ತಮಿಳುನಾಡಿನ ಕೂಂಥಂಕುಳಂ ಪಕ್ಷಿಧಾಮ, ವೆಂಬನ್ನೂರು ಜೌಗು ಪ್ರದೇಶ, ವೆಲ್ಲೋಡ್​ ಪಕ್ಷಿಧಾಮ, ಗಲ್ಫ್​ ಆಫ್​ ಮನ್ನಾರ್​, ವೇದಾಂತಗಲ್​ ಪಕ್ಷಿಧಾಮ ಮತ್ತು ಉದಯಮಾರ್ತಾಂಡಪುರಂ ಪಕ್ಷಿಧಾಮಗಳು ರಾಮ್ಸನ್​ ಪಟ್ಟಿ ಸೇರಿವೆ. ಇದಲ್ಲದೇ ಗೋವಾದ ನಂದಾ ಸರೋವರ, ಕರ್ನಾಟಕದ ರಂಗನತಿಟ್ಟು ಪಕ್ಷಿಧಾಮ, ಮಧ್ಯಪ್ರದೇಶದ ಸಿರ್ಪುರ್​ ಜೌಗು, ಒಡಿಶಾದ ಸತ್ಜಕೋರ್ಷಿಯಾ ಗಾರ್ಜ್ ಪ್ರದೇಶಗಳೂ ಈ ವಿಶೇಷ ಪಟ್ಟಿಗೆ ಲಗ್ಗೆ ಇಟ್ಟಿವೆ.

2012 ರವರೆಗೆ ಭಾರತದಲ್ಲಿ 26 ರಾಮ್ಸರ್ ತಾಣಗಳನ್ನು ಗುರುತಿಸಲಾಗಿತ್ತು. ಕಳೆದೊಂದು ದಶಕದಲ್ಲಿ ಈ ಪ್ರದೇಶಗಳ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿ ಏರಿಕೆ ಕಂಡಿವೆ. ಹೊಸದಾಗಿ ಆಯ್ಕೆಯಾದ ಪ್ರದೇಶಗಳು 1,51,842.41 ಹೆಕ್ಟೇರ್ ವಿಸ್ತೀರ್ಣವನ್ನು ಒಳಗೊಂಡಿದೆ. ಇದು ಭಾರತದ ಒಟ್ಟು ತೇವ ಪ್ರದೇಶದ 1.2 ಮಿಲಿಯನ್ ಹೆಕ್ಟೇರ್‌ಗಳಿಗೆ ಹೆಚ್ಚಿಸಿದೆ. ಅಂದರೆ ಶೇ.10 ರಷ್ಟು ಜೌಗು ಪ್ರದೇಶವಾಗಿದೆ.

ರಾಮ್ಸರ್ ಸೈಟ್ ಸೇರಲು ಅರ್ಹತೆ: 1971 ರ ರಾಮ್ಸರ್ ಪಟ್ಟಿಯ ನಿಯಮದಂತೆ, ದುರ್ಬಲ, ಅಳಿವಿನಂಚಿನಲ್ಲಿರುವ ಪ್ರಭೇದಗಳು ಅಥವಾ ಬೆದರಿಕೆಯಿರುವ ಪರಿಸರವನ್ನು ಮತ್ತು ಪ್ರಾಣಿ, ಪಕ್ಷಿಗಳನ್ನು ರಕ್ಷಿಸಲು ಆ ಪ್ರದೇಶವನ್ನು ಅಂತಾರಾಷ್ಟ್ರೀಯ ಮನ್ನಣೆ ನೀಡಲು ಸಂರಕ್ಷಿತ ಪ್ರದೇಶ ಎಂದು ಗುರುತಿಸಲಾಗುತ್ತದೆ.

ಓದಿ: ಹೆತ್ತವಳ ಕೈ ಬಿಟ್ಟ ಮಗ: ಸಿಮ್​ ಇಲ್ಲದ ಮೊಬೈಲ್​ ಕೊಟ್ಟು ಪರಾರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.