ETV Bharat / bharat

ಕೆ-ಸ್ಟೋರ್ ಯೋಜನೆ: ಪಡಿತರ ಅಂಗಡಿಗಳನ್ನು ಹೈಟೆಕ್ ಕೇಂದ್ರಗಳಾಗಿ ಪರಿವರ್ತಿಸಿದ ಕೇರಳ ಸರ್ಕಾರ.. - ಹೈಟೆಕ್ ಕೇಂದ್ರಗಳಾಗಿ ಪರಿವರ್ತನೆ

''ಮೊದಲ ಹಂತದಲ್ಲಿ 108 ಕೆ-ಸ್ಟೋರ್‌ಗಳನ್ನು ಕಾರ್ಯಾರಂಭಿಸಲಿವೆ. ರಾಜ್ಯದ ಎಲ್ಲಾ 14,000 ಪಡಿತರ ಅಂಗಡಿಗಳನ್ನು ಕೆ-ಸ್ಟೋರ್‌ಗಳಾಗಿ ಪರಿವರ್ತಿಸುವ ಗುರಿಯನ್ನು ಸರ್ಕಾರ ಹೊಂದಿದೆ'' ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದರು.

K store
ಕೆ-ಸ್ಟೋರ್ ಯೋಜನೆ: ಪಡಿತರ ಅಂಗಡಿಗಳನ್ನು ಹೈಟೆಕ್ ಕೇಂದ್ರಗಳಾಗಿ ಪರಿವರ್ತಿಸಿದ ಕೇರಳ ಸರ್ಕಾರ
author img

By

Published : May 15, 2023, 7:14 PM IST

ತಿರುವನಂತಪುರಂ (ಕೇರಳ): ರಾಜ್ಯದಲ್ಲಿ ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಯನ್ನು ಬಲಪಡಿಸುವ ಜೊತೆಗೆ ಪಡಿತರ ಅಂಗಡಿಗಳ ಲುಕ್​ ಅನ್ನು ಬದಲಿಸುವ ಯೋಜನೆಯನ್ನು ಕೇರಳ ಸರ್ಕಾರ ಆರಂಭಿಸಿದೆ. ಹೌದು, ಪಡಿತರ ಅಂಗಡಿಗಳನ್ನು ಹೈಟೆಕ್ ಕೇಂದ್ರಗಳಾಗಿ ಪರಿವರ್ತಿಸುವ ಕೆ-ಸ್ಟೋರ್ ಯೋಜನೆಯನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇಂದು ಉದ್ಘಾಟಿಸಿದರು.

ಇದನ್ನೂ ಓದಿ: 6 ವಾರಗಳಲ್ಲಿ ಟ್ವಿಟರ್​ಗೆ ಹೊಸ ಮಹಿಳಾ ಸಿಇಒ: ಎಲಾನ್​ ಮಸ್ಕ್​ ಘೋಷಣೆ

14,000 ಪಡಿತರ ಅಂಗಡಿಗಳು ಕೆ-ಸ್ಟೋರ್‌ಗಳಾಗಿ ಪರಿವರ್ತಿಸುವ ಗುರಿ: ಮೊದಲ ಹಂತದಲ್ಲಿ 108 ಕೆ-ಸ್ಟೋರ್‌ಗಳನ್ನು ಕಾರ್ಯಾರಂಭ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಫೇಸ್‌ಬುಕ್ ಪೋಸ್ಟ್ ಮೂಲಕ ಈ ಮಾಹಿತಿಯನ್ನು ಪ್ರಕಟಿಸಿದ್ದಾರೆ. ರಾಜ್ಯದ ಎಲ್ಲಾ 14,000 ಪಡಿತರ ಅಂಗಡಿಗಳನ್ನು ಕೆ-ಸ್ಟೋರ್‌ಗಳಾಗಿ ಪರಿವರ್ತಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಸಿಎಂ ಹೇಳಿದರು. ಕೆ-ಎಲ್​​ಡಿಎಫ್ ಸರ್ಕಾರದ ನೂರು ದಿನದ ಕ್ರಿಯಾ ಯೋಜನೆಯ ಭಾಗವಾಗಿ ರಾಜ್ಯದಲ್ಲಿ ಈ ಮಳಿಗೆಗಳನ್ನು ಆರಂಭಿಸಲಾಗುತ್ತಿದೆ.

ಇದನ್ನೂ ಓದಿ: ಆರ್​ಬಿಐ ಹಣಕಾಸು ನೀತಿ ಸರಿಯಾದ ಹಾದಿಯಲ್ಲಿದೆ: ಗವರ್ನರ್ ಶಕ್ತಿಕಾಂತ ದಾಸ್

ಮೂಲಸೌಕರ್ಯ ಹೆಚ್ಚಿಸಲು ಸರ್ಕಾರ ಆರ್ಥಿಕ ನೆರವು: ಪಡಿತರ ಅಂಗಡಿಗಳಿಗೆ ಮೂಲಸೌಕರ್ಯವನ್ನು ಹೆಚ್ಚಿಸಿ, ಅವುಗಳನ್ನು ಜನಸ್ನೇಹಿಯಾಗಿ ಮಾಡುವ ಮೂಲಕ ಆಧುನಿಕ ತಂತ್ರಜ್ಞಾನದ ಸಹಾಯದಿಂದ ಸಾರ್ವಜನಿಕ ವಿತರಣಾ ಅಂತರ್ಜಾಲದ ಮೂಲಕ ಸರ್ಕಾರಿ ಸೇವೆಗಳು ಮತ್ತು ಉತ್ಪನ್ನಗಳು ಲಭ್ಯವಾಗುವಂತೆ ಮಾಡುವುದು ಕೆ-ಸ್ಟೋರ್ ಗುರಿಯಾಗಿದೆ. ಪಡಿತರ ಅಂಗಡಿಗಳನ್ನು ಕೆ-ಸ್ಟೋರ್​ಗಳನ್ನಾಗಿ ಮಾಡಲು ಮೂಲಸೌಕರ್ಯ ಹೆಚ್ಚಿಸಲು ಸರ್ಕಾರ ಆರ್ಥಿಕ ನೆರವು ನೀಡಲಿದೆ.

ಇದನ್ನೂ ಓದಿ: ನಿಮ್ಮ ಹೂಡಿಕೆಗಳು ನಿರೀಕ್ಷಿತ ಆದಾಯ ನೀಡುತ್ತಿಲ್ಲವೇ?.. ಹಾಗಾದ್ರೆ ಹೀಗೆ ಮಾಡಿ..

ಕೆ-ಸ್ಟೋರ್ ಮೂಲಕ ಲಭ್ಯವಿರುವ ಸೇವೆಗಳು:

  • 10,000 ರೂ. ವರೆಗಿನ ವಹಿವಾಟುಗಳನ್ನು ನಿರ್ವಹಿಸಬಹುದಾದ ಮಿನಿ ಬ್ಯಾಂಕಿಂಗ್ ವ್ಯವಸ್ಥೆ (ಬ್ಯಾಂಕ್ ಲಿಂಕ್ ಮಾಡಿದ ಸ್ಮಾರ್ಟ್ ಕಾರ್ಡ್ ಮೂಲಕ ಸ್ವಂತ ಖಾತೆಯಿಂದ ಹಣವನ್ನು ಹಿಂಪಡೆಯಬಹುದು).
  • ಯುಟಿಲಿಟಿ ಪಾವತಿ ವ್ಯವಸ್ಥೆ (ಸರ್ಕಾರಿ ಸೇವೆಗಳಿಗೆ ಆನ್‌ಲೈನ್ ಅರ್ಜಿಗಳನ್ನು ಪಾವತಿಸುವ ಸೌಲಭ್ಯ, ವಿದ್ಯುತ್ ಬಿಲ್‌ಗಳು, ನೀರಿನ ಬಿಲ್‌ಗಳು ಇತ್ಯಾದಿ).
  • ಪಡಿತರ ಅಂಗಡಿಗಳು ಮತ್ತು ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ವಿತರಣಾ ಕೇಂದ್ರಗಳ ಮೂಲಕ ಸಬ್ಸಿಡಿ ದರದಲ್ಲಿ ಅಗತ್ಯ ವಸ್ತುಗಳ ಮಾರಾಟ.
  • ಮಿಲ್ಮಾ ಉತ್ಪನ್ನಗಳು (ಹಾಲಿನ ಮತಗಟ್ಟೆ) ಮತ್ತು ಐದು ಕೆಜಿ ಅಡುಗೆ ಸಿಲಿಂಡರ್ ಪೂರೈಕೆ (ಚಿಕ್ಕ ಗ್ಯಾಸ್). ಮೊದಲ ಹಂತದಲ್ಲಿ ಕೆ-ಸ್ಟೋರ್‌ಗಳ ಮೂಲಕ ಲಭ್ಯವಿರುತ್ತದೆ.

ಇದನ್ನೂ ಓದಿ: 153 ಪಾಯಿಂಟ್​ ಏರಿಕೆಯೊಂದಿಗೆ ಸೆನ್ಸೆಕ್ಸ್​ ವಹಿವಾಟು ಆರಂಭ.. ಕಾರಣ?

ಇದನ್ನೂ ಓದಿ: ಭಾರತದಲ್ಲಿ ಸಗಟು ಹಣದುಬ್ಬರ ಮೈನಸ್​ 0.92ಕ್ಕೆ ಇಳಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.