ETV Bharat / bharat

ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ಎನ್‌.ವಿ. ರಮಣ ಪದಗ್ರಹಣ - ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ

ಸುಪ್ರೀಂಕೋರ್ಟ್‌ನ 48ನೇ ಮುಖ್ಯ ನ್ಯಾಯಮೂರ್ತಿಯಾಗಿ ಎನ್‌.ವಿ. ರಮಣ ಅವರು ಪ್ರಮಾಣವಚನ ಸ್ವೀಕರಿಸಿದರು. ಹಾಲಿ ಮುಖ್ಯ ನ್ಯಾಯಮೂರ್ತಿಯಾಗಿದ್ದ ಎಸ್‌ ಎ ಬೊಬ್ಡೆ ಅವರ ಅಧಿಕಾರದ ಅವಧಿಯು ನಿನ್ನೆಗೆ ಮುಕ್ತಾಯವಾಗಿದೆ. ಈ ಹಿನ್ನೆಲೆ ಸಿಜೆಐ ಆಗಿ ರಮಣ ಅವರು ಅಧಿಕಾರ ಸ್ವೀಕರಿಸಿದ್ದಾರೆ.

ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ಎನ್‌.ವಿ.ರಮಣ ಪದಗ್ರಹಣ
author img

By

Published : Apr 24, 2021, 12:18 PM IST

ನವದೆಹಲಿ: ಸುಪ್ರೀಂಕೋರ್ಟ್‌ನ 48ನೇ ಮುಖ್ಯ ನ್ಯಾಯಮೂರ್ತಿಯಾಗಿ ಎನ್‌.ವಿ. ರಮಣ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ನೂತನ ಸಿಜೆಐಗೆ ಪ್ರಮಾಣವಚನ ಬೋಧಿಸಿದರು.

ನ್ಯಾಯಮೂರ್ತಿ ಎಸ್‌ ಎ ಬೋಬ್ಡೆ ಅವರ ಅಧಿಕಾರದ ಅವಧಿಯು ನಿನ್ನೆಗೆ ಮುಕ್ತಾಯವಾಗಿದೆ. ಹೀಗಾಗಿ ಸಿಜೆಐ ಆಗಿ ರಮಣ ಅವರು ಇಂದು ಪದಗ್ರಹಣ ಮಾಡಿದ್ದಾರೆ.

ರಮಣ ಅವರು ದೇಶದ ಅತ್ಯುನ್ನತ ನ್ಯಾಯಪೀಠ ಸುಪ್ರೀಂಕೋರ್ಟ್‌ಗೆ ಮುಖ್ಯ ನ್ಯಾಯಮೂರ್ತಿ ಆಗುತ್ತಿರುವ ಆಂಧ್ರ ಪ್ರದೇಶದ ಎರಡನೇ ವ್ಯಕ್ತಿಯಾಗಿದ್ದಾರೆ. ಈ ಹಿಂದೆ ನ್ಯಾಯಮೂರ್ತಿ ಸುಬ್ಬರಾವ್‌ ಅವರು ಭಾರತದ 9ನೇ ಸಿಜೆಐ ಆಗಿ ಸೇವೆ ಸಲ್ಲಿಸಿದ್ದರು.

Justice NV Ramana takes oath as the 48th Chief Justice of India
ರಾಷ್ಟ್ರಪತಿ ರಾಮನಾಥ ಅವರು ಕೋವಿಂದ್‌ ಅವರಿಂದ ಸಿಜೆಐಗೆ ಪ್ರಮಾಣವಚನ ಬೋಧನೆ

ಸಂಪ್ರದಾಯದ ಪ್ರಕಾರ ಹಾಲಿ ಸಿಜೆಐ ತಮ್ಮ ಅಧಿಕಾರದ ಅವಧಿ ಇನ್ನೂ 1 ತಿಂಗಳು ಇವರು ಮೊದಲೇ ಮುಂದಿನ ಸಿಜೆಐ ಹೆಸರನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿ ಕೊಡಲಾಗುತ್ತದೆ. ಅದರಂತೆ ಸಿಜೆಐ ಎಸ್‌ ಎ ಬೋಬ್ಡೆ ಅವರು ಮಾರ್ಚ್‌ 24ರಂದು ಸುಪ್ರೀಂಕೋರ್ಟ್‌ನ ಅತ್ಯಂತ ಹಿರಿಯ ನ್ಯಾಯಮೂರ್ತಿಯಾಗಿದ್ದ ಎನ್‌ ವಿ ರಮಣ ಅವರ ಹೆಸರನ್ನು ಕೇಂದ್ರಕ್ಕೆ ಶಿಫಾರಸು ಮಾಡಿದ್ದರು. ನ್ಯಾ.ರಮಣ ಅವರು 2022ರ ಆಗಸ್ಟ್‌ 26ರವರೆಗೆ ಸಿಜೆಐ ಆಗಿ ಸೇವೆ ಸಲ್ಲಿಸಲಿದ್ದಾರೆ.

ಇದನ್ನೂ ಓದಿ: ದೆಹಲಿಯಲ್ಲಿ ಆಕ್ಸಿಜನ್​ ಕೊರತೆಯಿಂದ 20 ರೋಗಿಗಳು ಸಾವು: ಅಪಾಯದಲ್ಲಿವೆ 200 ಜೀವಗಳು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.