ಎರ್ನಾಕುಲಂ (ಕೇರಳ) : ನ್ಯಾಯಾಲಯಗಳನ್ನು 'ನ್ಯಾಯ ದೇಗುಲ' ಎಂದು ಕರೆಯುತ್ತೇವೆ. ಹಾಗಂತ ಅಲ್ಲಿ ಕೂತಿರುವ ಜಡ್ಜ್ಗಳು 'ದೇವರಲ್ಲ'. ಅವರ ಮುಂದೆ ಫಿರ್ಯಾದಿಗಳು ಮತ್ತು ವಕೀಲರು ದೈನ್ಯವಾಗಿ ಕೈಕಟ್ಟಿಕೊಂಡು ನಿಲ್ಲುವ ಅಗತ್ಯವೂ ಇಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ. ಮಹಿಳೆಯೊಬ್ಬರ ಮೇಲೆ ಪೊಲೀಸ್ ಅಧಿಕಾರಿ ಹಾಕಿದ್ದ ಕೇಸ್ಗೆ ಸಂಬಂಧಿಸಿದಂತೆ ಶನಿವಾರ ವಿಚಾರಣೆ ನಡೆಸುತ್ತಿದ್ದ ವೇಳೆ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ನ್ಯಾಯಮೂರ್ತಿ ಪಿ.ವಿ. ಕುಂಞಿಕೃಷ್ಣನ್ ಅವರಿದ್ದ ಪೀಠವು, ನ್ಯಾಯಾಲಯದ ಒಳಗೆ ಸಭ್ಯತೆ, ಶಿಸ್ತು ಮಾತ್ರ ಕಾಪಾಡಿಕೊಳ್ಳಬೇಕು. ಕೋರ್ಟ್ಗಳನ್ನು ನ್ಯಾಯ ದೇಗುಲವೆಂದು ಕರೆಯುತ್ತೇವೆ. ಆದರೆ ಪೀಠದಲ್ಲಿ ಕೂತಿರುವಯಾವುದೇ ನ್ಯಾಯಾಧೀಶರು ದೇವರಂತೆ ಅಲ್ಲ. ಅಲ್ಲಿ ದೇವರು ಕುಳಿತುಕೊಳ್ಳುವುದೂ ಇಲ್ಲ. ನ್ಯಾಯಾಧೀಶರಾದವರು ತಮ್ಮ ಸಾಂವಿಧಾನಿಕ ಕರ್ತವ್ಯಗಳು ಮತ್ತು ಹೊಣೆಯನ್ನು ನಿಭಾಯಿಸುತ್ತಾರೆ ಅಷ್ಟೆ ಎಂದು ಹೇಳಿದರು.
ಅರ್ಜಿದಾರ ಮಹಿಳೆ ತನ್ನ ಮೊಕದ್ದಮೆಯನ್ನು ಖುದ್ದಾಗಿ ವಾದಿಸಲು ಬಂದಿದ್ದಾಗ, ಕೈಮುಗಿದು ಭಾಗಿ ಕಣ್ಣುಗಳಲ್ಲಿ ನೀರು ತುಂಬಿಕೊಂಡು ನಿಂತಿದ್ದರು. ಇದನ್ನು ಗಮನಿಸಿದ ನ್ಯಾಯಮೂರ್ತಿ ಪಿ.ವಿ. ಕುಂಞಿಕೃಷ್ಣನ್ ಅವರು, ಅವರಿಗೆ ಹೀಗೆ ನಿಲ್ಲಬೇಡಿ. ಆರಾಮವಾಗಿ ವಾದಿಸಿ ಎಂದು ಹೇಳಿದರು. ಜೊತೆಗೆ ಯಾವುದೇ ದಾವೆದಾರರು ಅಥವಾ ವಕೀಲರು ತಮ್ಮ ಪ್ರಕರಣವನ್ನು ನ್ಯಾಯಾಲಯದ ಮುಂದೆ ಕೈ ಕಟ್ಟಿಕೊಂಡು ವಾದಿಸಬೇಕಾಗಿಲ್ಲ. ನ್ಯಾಯಾಲಯದ ಮುಂದೆ ಕೇಸ್ ಬಗ್ಗೆ ವಾದಿಸುವುದು ಸಾಂವಿಧಾನಿಕ ಹಕ್ಕಾಗಿದೆ ಎಂದರು.
ಪ್ರಕರಣದ ಹಿನ್ನೆಲೆ: ವಾದಿಸಲು ಕೋರ್ಟ್ಗೆ ಬಂದಿದ್ದ ಮಹಿಳೆಯ ವಿರುದ್ಧ ಅಲಪ್ಪುಳ ಉತ್ತರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಒಬ್ಬರು ಕೇಸ್ ದಾಖಲಿಸಿದ್ದರು. ಮಹಿಳೆ ತನಗೆ ಫೋನ್ನಲ್ಲಿ ನಿಂದಿಸಿದ್ದಾರೆ ಎಂದು ಅವರು 2019 ರಲ್ಲಿ ಘಟನೆಗೆ ಸಂಬಂಧಿಸಿದಂತೆ ದೂರು ಸಲ್ಲಿಸಿದ್ದರು. ಆದರೆ, ಈ ಪ್ರಕರಣದ ಹಿಂದೆ ಬೇರೆಯದ್ದೇ ಕಾರಣವಿದೆ. ಪೊಲೀಸ್ ಅಧಿಕಾರಿ ದೂರುವ ಮೊದಲು, ಅರ್ಜಿದಾರೆ ತಮ್ಮ ಮನೆಯ ಸಮೀಪವಿರುವ ಪ್ರಾರ್ಥನಾ ಕೇಂದ್ರವೊಂದರಿಂದ ದೊಡ್ಡ ಶಬ್ದ ಬರುತ್ತದೆ. ಅದರಿಂದ ತೊಂದರೆಯಾಗಿದೆ ಎಂದು ಆಲಪ್ಪುಳ ಎಸ್ಪಿಗೆ ದೂರು ಸಲ್ಲಿಸಿದ್ದರು. ಎಸ್ಪಿ, ಎಸ್ಐಗೆ ತನಿಖೆಯ ಹೊಣೆ ನೀಡಿದ್ದರು.
ಈ ಬಗ್ಗೆ ವಿಚಾರಣೆ ನಡೆಸಲು ಕರೆ ಮಾಡಿದ್ದಾಗ ಪೊಲೀಸರು ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಮಹಿಳೆ ಆರೋಪಿಸಿದರು. ಈ ಬಗ್ಗೆ ಎಸ್ಪಿಗೂ ದೂರು ನೀಡಿದ್ದಾಗಿ ತಿಳಿಸಿದರು. ದೂರಿನ ಪ್ರತಿಯನ್ನೂ ಸಲ್ಲಿಸಿದ್ದರು. ಹೈಕೋರ್ಟ್ ದೂರಿನ ಸಮಯ ಮತ್ತು ಅರ್ಜಿದಾರರ ವಿರುದ್ಧದ ಪ್ರಕರಣದ ದಿನವನ್ನು ಗಮನಿಸಿದಾಗ, ಇದು ಸೇಡಿನಿಂದ ಸಲ್ಲಿಸಿದ ದೂರು ಎಂಬುದನ್ನು ಕೋರ್ಟ್ ಗಮನಿಸಿತು.
ಹೀಗಾಗಿ ಮಹಿಳೆಯ ವಿರುದ್ಧ ದೂರಿರುವ ಅಧಿಕಾರಿಯು ಸೇಡಿನಿಂದ ವರ್ತಿಸಿದ್ದಾರೆ. ಹೀಗಾಗಿ ಅರ್ಜಿಯನ್ನು ರದ್ದು ಮಾಲಾಗುವುದು. ಇದರ ವಿರುದ್ಧ ತನಿಖೆ ನಡೆಸಿ ಎಂದು ಕೋರ್ಟ್ ಇದೇ ವೇಲೆ ಎಸ್ಪಿಗೆ ಸೂಚಿಸಿತು.
ಇದನ್ನೂ ಓದಿ: ನಕಲಿ ದಾಖಲೆ ಪಡೆದು ಭಾರತದ ನಿವಾಸಿಗಳಲ್ಲದವರಿಗೆ ಪಾಸ್‌ಪೋರ್ಟ್ ವಿತರಣೆ.. ಸೇವಾ ಕೇಂದ್ರದ ಹಿರಿಯ ಅಧಿಕಾರಿ ಸೇರಿ ಇಬ್ಬರ ಬಂಧನ4