ETV Bharat / bharat

ಭವಿಷ್ಯ ನಿಧಿ, ಗ್ರ್ಯಾಚುಟಿ ಹಣದಿಂದ ಸಾವಿರಾರು ಜನರಿಗೆ ಊಟ: ನಿರುದ್ಯೋಗ ದಂಪತಿ ಮಹತ್ಕಾರ್ಯ - ಮಲಾಡ್​​ ನಿರುದ್ಯೋಗ ದಂಪತಿ

ಮಹಾಮಾರಿ ಕೊರೊನಾ ವೈರಸ್ ಹಾವಳಿ ನಡುವೆ ಕೆಲಸ ಕಳೆದುಕೊಂಡರೂ ವ್ಯಕ್ತಿಯೊಬ್ಬ ತಮಗೆ ಬಂದ ಭವಿಷ್ಯ ನಿಧಿ ಹಣದಿಂದ ಇತರರಿಗೆ ಸಹಾಯ ಮಾಡ್ತಿದ್ದಾರೆ.

Unemployed couple
Unemployed couple
author img

By

Published : May 15, 2021, 8:22 PM IST

ಮಲಾಡ್​(ಮಹಾರಾಷ್ಟ್ರ): ದೇಶಾದ್ಯಂತ ಮಹಾಮಾರಿ ಕೊರೊನಾ ವೈರಸ್​ನಿಂದ ಲಕ್ಷಾಂತರ ಕುಟುಂಬ ತೊಂದರೆಗೊಳಗಾಗಿದ್ದು, ಹೊತ್ತಿನ ಊಟ ಸಿಗದೇ ಪರದಾಡುವಂತಹ ಸ್ಥಿತಿ ನಿರ್ಮಾಣಗೊಂಡಿದೆ.

ಇದರ ಮಧ್ಯೆ ಅನೇಕರು ತಮ್ಮ ಕೈಲಾದ ಸಹಾಯ ಮಾಡ್ತಿದ್ದು, ಸದ್ಯ ಮಹಾರಾಷ್ಟ್ರದ ಮಲಾಡ್​​ ನಿರುದ್ಯೋಗ ದಂಪತಿಗಳು ಸಾವಿರಾರು ಜನರಿಗೆ ಆಹಾರ ನೀಡುತ್ತಿದ್ದಾರೆ.

ಫಯಾಜ್​ ಶೇಖ್​ ಮತ್ತು ಅವರ ಪತ್ನಿ ಮಿಜ್ಗಾ ಸಾವಿರಾರು ಬಡ ಜನರಿಗೆ ಆಹಾರ ನೀಡುತ್ತಿದ್ದಾರೆ. ಕೋವಿಡ್ ಕಾರಣ ಫಯಾಜ್​ ಅವರನ್ನ ಕೆಲಸದಿಂದ ವಜಾ ಮಾಡಲಾಗಿದೆ. ಇದರ ಮಧ್ಯೆ ಅವರು ಭವಿಷ್ಯ ನಿಧಿ ಹಾಗೂ ಗ್ರ್ಯಾಚುಟಿ ಹಣ ಬಳಸಿಕೊಂಡು ಈ ಕಾರ್ಯ ನಡೆಸುತ್ತಿದ್ದಾರೆ.

ಪ್ರತಿ ದಿನ 2 ಸಾವಿರಕ್ಕೂ ಅಧಿಕ ಜನರಿಗೆ ಈ ದಂಪತಿ ಉಚಿತ ಆಹಾರ ನೀಡುತ್ತಿದೆ. ವಲಸೆ ಕಾರ್ಮಿಕರು ಹೆಚ್ಚಾಗಿ ವಾಸ ಮಾಡಿರುವ ಮಲಾಡ್​​ನ ಅಂಬೋಜ್ವಾಡಿ ಪ್ರದೇಶದಲ್ಲಿ ಉಚಿತವಾಗಿ ಆಹಾರ ವಿತರಿಸುತ್ತಿದ್ದಾರೆ. ಸಮುದಾಯ ಅಡಿಗೆ ಮಾಡುವ ಮೂಲಕ ಅನೇಕ ಮಹಿಳೆಯರಿಗೆ ಉದ್ಯೋಗ ಸಹ ನೀಡಿದ್ದಾರೆ.

ಇದನ್ನೂ ಓದಿ: ದೇಶದಲ್ಲಿ ಕೋವಿಡ್​ ಪಾಸಿಟಿವ್ ರೇಟ್​ ಶೇ.19.8ಕ್ಕೆ ಕುಸಿತ: ಕೇಂದ್ರ ಸರ್ಕಾರ

ಫಯಾಜ್​ ಪ್ರಸಿದ್ಧ ಸುಗಂದ ದ್ರವ್ಯ ತಯಾರಿಕೆ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ಈ ವರ್ಷದ ಆರಂಭದಲ್ಲೇ ಅವರನ್ನ ವಜಾಗೊಳಿಸಲಾಯಿತು. ಈ ವೇಳೆ ಮನೆ ನಿರ್ಮಿಸಲು ಬಳಸಿಕೊಳ್ಳಲು ನಿರ್ಧರಿಸಿದ್ದ ಭವಿಷ್ಯ ನಿಧಿಯ 5 ಲಕ್ಷ ರೂ ಆಹಾರ ವಿತರಣೆಗೆ ಬಳಕೆ ಮಾಡ್ತಿದ್ದು, ಅವರು ನಡೆಸುತ್ತಿರುವ ಶಾಲೆಯ ಶುಲ್ಕ ಸಹ ಸಂಪೂರ್ಣವಾಗಿ ಮನ್ನಾ ಮಾಡಿದ್ದಾರೆ. ಅಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ ತಮ್ಮ ಗ್ರ್ಯಾಚುಟಿ ಫಂಡ್​ನಿಂದ ಸ್ಯಾಲರಿ ನೀಡ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.